×
Ad

ಧಾರವಾಡ ಕ್ರೈಸ್ತ ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ ಆರೋಪ: ಸೂಕ್ತ ಭದ್ರತೆಗಾಗಿ ಕಮಿಷನರ್ ಗೆ ಮನವಿ

Update: 2025-09-04 17:54 IST

ಹುಬ್ಬಳ್ಳಿ: ಇತ್ತೀಚೆಗೆ ಧಾರವಾಡದಲ್ಲಿ ಎರಡು ಕಡೆ ಪ್ರಾರ್ಥನಾ ಮಂದಿರಗಳಲ್ಲಿ ಕಿಡಗೆಡಿಗಳ ಗುಂಪುಗಳು ದಾಳಿ ನಡೆಸಿ, ಪಾದ್ರಿಗಳ ಮೇಲೆ ಹಲ್ಲೆ ಮಾಡಿದ್ದಾರೆ. ಪ್ರಾರ್ಥನಾ ಸ್ಥಳದಲ್ಲಿದ್ದ ವಸ್ತುಗಳನ್ನು ಹಾನಿಗೊಳಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿರುವ ನೂರಕ್ಕೂ ಅಧಿಕ ಕ್ರೈಸ್ತ ಧರ್ಮ ಗುರುಗಳು, ಇಂತಹ ಕೃತ್ಯ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಹಾಗೂ ಪ್ರಾರ್ಥನಾ ಸ್ಥಳಳಿಗೆ, ಕ್ರೈಸ್ತ ಧರ್ಮ ಗುರುಗಳಿಗೆ ರಕ್ಷಣೆ ಒದಗಿಸಬೇಕು ಎಂದು ಹುಬ್ಬಳ್ಳಿ- ಧಾರವಾಡ ಕಮಿಷನರ್ ಎನ್‌ ಶಶಿಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News