×
Ad

ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆಯಂತಾಗಿದೆ ಬಿಜೆಪಿಯ ಸ್ಥಿತಿ: ಸಚಿವ ಸಂತೋಷ್ ಲಾಡ್

Update: 2025-01-28 14:18 IST

PC: facebook.com/SantoshSLad

ಹುಬ್ಬಳ್ಳಿ : ನಾನೊಬ್ಬ ಹಿಂದೂ ಆಗಿ ಹೇಳುತ್ತಿದ್ದೇನೆ , ಏನೇ ಮಾಡಿದ್ರೂ ಮೋದಿ, ಅಮಿತ್ ಶಾ ಅವರ ಪಾಪ ಹೋಗಲ್ಲ. ಎಲ್ಲಿ ಹೋದ್ರೂ ತೊಳೆಯೋಕೆ ಆಗಲ್ಲ. ಗಂಗಾ ಸ್ನಾನ ಮಾಡಿದ ತಕ್ಷಣ ಪಾಪ ಹೋಗಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಮೋದಿ, ಶಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ದೇಶದ ಸಾಲದ ಬಗ್ಗೆ ಯಾಕೆ ಮಾತಾಡಲ್ಲ. ಈ ದೇಶದ ಆರ್ಥಿಕ ವ್ಯವಸ್ಥೆ ಮೂಲೆಗುಂಪಾಗಿದೆ. ಎರಡು ಲಕ್ಷ ಕಿರಾಣಿ ಅಂಗಡಿ ಮುಚ್ಚಿ ಹೋಗಿವೆ. ಇದನ್ನು ಯಾರಾದರೂ ಮಾತಾಡ್ತಾರಾ.? ದೇಶದ ವ್ಯವಸ್ಥೆ ಹಾಳುಮಾಡಿರೋದು ಪಾಪ ಅಲ್ವಾ. ಪಾಪ ಮಾಫಿ ಆಗಲ್ಲ ಅಂತ ಖರ್ಗೆ ಸಾಹೇಬರು ಸರಿಯಾಗಿಯೇ ಹೇಳಿದ್ದಾರೆ ಎಂದರು.

ಲೋಕಪಾಲ್ ಗೆ ಗೌರವ ಕೊಟ್ಟಂತೆ, ನಾವು ಲೋಕಾಯುಕ್ತ ಸಂಸ್ಥೆಯನ್ನು ನಂಬುತ್ತೇವೆ. ಹೊಸತನದ ರಾಜಕೀಯ ಬರಬೇಕು ಅನ್ನೋದು ನನ್ನ ಅಭಿಪ್ರಾಯ. ವಾಟ್ಸಪ್ ಯುನಿವರ್ಸಿಸಿ ಫೈನಲ್ ಅಲ್ಲ.ಯುವ ಜನತೆ ಅರ್ಥ ಮಾಡಬೇಕು. ದೇಶ ಬಿಜೆಪಿ, ಕಾಂಗ್ರೆಸ್ ನವರ ಸ್ವತ್ತಲ್ಲ ಎಂದು ಹೇಳಿದರು.

ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಅಂತಾರಲ್ಲ ,ಹಾಗಾಗಿದೆ ಬಿಜೆಪಿ ಸ್ಥಿತಿ. ಮೇಕ್ ಇನ್ ಇಂಡಿಯಾದಲ್ಲಿ ಏನಾಗಿದೆ? ಏನೋ ಒಂದು ಹೇಳೋದು, ಹೋಗೋದು. ಕೇಂದ್ರ ಬಜೆಟ್ ಬಗ್ಗೆ ಏನೂ ನೀರಿಕ್ಷೆ ಇಲ್ಲ; ಎಲ್ಲವೂ ಡಬ್ಬಾ. ಬರೋದು ಹಿಂದೂಗಳ ಬಗ್ಗೆ ಮಾತಾಡೋದು ಹಿಂದೂ - ಮುಸ್ಲಿಂ ಸೆಂಟಿಮೆಂಟ್ ಬಿಟ್ರೆ ಏನಿಲ್ಲ. ಯಾವ ಹಿಂದೂಗಳಿಗೆ ಏನಾಗಿದೆ, ಅದರ ಡೀಟೇಲ್ಸ್ ಕೊಡ್ತಾರಾ? ಜಿಡಿಪಿ ಗ್ರೋಥ್ ಬಗ್ಗೆ ಸ್ಪಷ್ಟೀಕರಣ ಕೊಡ್ತಾರಾ..? ಎಂದು ಪ್ರಶ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News