×
Ad

ಧಾರವಾಡ: ಬೆಂಕಿ ತಗುಲಿ ಮಗು ಮೃತಪಟ್ಟ ಪ್ರಕರಣ; ಗಾಯಗೊಂಡಿದ್ದ ತಂದೆಯೂ ಮೃತ್ಯು

Update: 2025-08-19 12:06 IST

ಧಾರವಾಡ: ಥಿನ್ನರ್ ಬಾಟಲಿ ಕೈ ಜಾರಿ ಬಿದ್ದು ಬೆಂಕಿ ತಗುಲಿ ಮಗು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಗಾಯಗೊಂಡಿದ್ದ ತಂದೆಯೂ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ.‌

ಧಾರವಾಡದ ನಗರದ ಸಂತೋಷ್ ನಗರದಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ಥಿನ್ನರ್ ಬಾಟಲಿ ಉರುಳಿ ಬಿದ್ದು ಬೆಂಕಿ ತಗುಲಿ ನಾಲ್ಕು ವರ್ಷದ ಬಾಲಕ ಮತ್ತು ಆತನ ತಂದೆ ಗಾಯಗೊಂಡ ಘಟನೆ ನಡೆದಿತ್ತು.

ಮಗುವನ್ನು ರಕ್ಷಣೆ ಮಾಡಲು ಹೋಗಿದ್ದ ಚಂದ್ರಕಾಂತ್ ಮಾಶ್ಯಾಳ ಅವರಿಗೆ 60% ಸುಟ್ಟ ಗಾಯಗಳಾಗಿದ್ದು, ಹುಬ್ಬಳ್ಳಿ ಕಿಮ್ಸ್ ನಲ್ಲಿ ಚಿಕಿತ್ಸೆ ನಡೆಯುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇವತ್ತು ಸಾವನ್ನಪ್ಪಿದ್ದಾರೆ.

ಸದ್ಯ ಈ ಬಗ್ಗೆ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News