ಧಾರವಾಡ: ಕಾಲು ಜಾರಿ ಕೆರೆಗೆ ಬಿದ್ದು ಅವಳಿ ಮಕ್ಕಳು ಮೃತ್ಯು
Update: 2025-06-19 13:54 IST
ಘಟನಾ ಸ್ಥಳದಲ್ಲಿ ಸ್ಥಳೀಯರು ಜಮಾಯಿಸಿರುವುದು
ಧಾರವಾಡ: ಕಾಲು ಜಾರಿ ಕೆರೆಗೆ ಬಿದ್ದು ಇಬ್ಬರು ಅವಳಿ ಮಕ್ಕಳು ಮೃತಪಟ್ಟ ಘಟನೆ ಜಿಲ್ಲೆಯ ಕುಂದಗೋಳ ತಾಲೂಕಿನ ಯರಿನಾರಾಯಣಪುರ ಗ್ರಾಮದಲ್ಲಿ ಗುರುವಾರ ನಡೆದಿದೆ.
ಶರೀಫ್ ಸಾಬ್ ಚಂದುಖಾನ್ ಎಂಬವರ ಮಕ್ಕಳಾದ ಮುದಸ್ಸಿರ್ (3) ಮುಝಮ್ಮಿಲ್ (3) ಮೃತ ಕಂದಮ್ಮಗಳು.
ಗ್ರಾಮದ ಕೆರೆಯ ದಂಡೆಯಲ್ಲಿ ಆಟವಾಡುತ್ತಿದ್ದ ವೇಳೆ ಒಂದು ಮಗು ಕಾಲು ಜಾರಿ ಬಿದ್ದಿದೆ. ಆ ಮಗುವನ್ನು ರಕ್ಷಣೆ ಮಾಡಲು ಹೋದ ಇನ್ನೊಂದು ಮಗುವೂ ನೀರಿನಲ್ಲಿ ಮುಳುಗಿ ಮೃತಪಟ್ಟಿದೆ ಎನ್ನಲಾಗಿದೆ.
ಸ್ಥಳಕ್ಕೆ ಕುಂದಗೋಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.