ಧಾರವಾಡ | ಚಾಕು ಇರಿತ ಪ್ರಕರಣದ ಆರೋಪಿಯನ್ನು ಸದ್ಯದಲ್ಲೇ ಬಂಧಿಸುತ್ತೇವೆ: ಪೊಲೀಸ್ ಆಯುಕ್ತ ಶಶಿಕುಮಾರ್
ಧಾರವಾಡ: ಧಾರವಾಡದ ಹಾವೇರಿಪೇಟೆ ಕಂಠಿಗಲ್ಲಿಯಲ್ಲಿ ರಾಘವೇಂದ್ರ ಎಂಬಾತನ ಮೇಲೆ ಚಾಕು ದಾಳಿ ನಡೆಸಿದ ಮಲ್ಲಿಕ್ ಎಂಬಾತನನ್ನು ಸದ್ಯದಲ್ಲೇ ಬಂಧಿಸುತ್ತೇವೆ. ಆತ ಚಾಕು ಇರಿದ ನಂತರ ಪರಾರಿಯಾಗಿದ್ದಾನೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹೇಳಿದರು.
ಚಾಕು ದಾಳಿ ನಡೆದ ಧಾರವಾಡದ ಕಂಠಿಗಲ್ಲಿಯ ರಾಘವೇಂದ್ರ ಎಂಬವರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಘವೇಂದ್ರ ಹಾಗೂ ಮಲ್ಲಿಕ್ ಇಬ್ಬರೂ ಸ್ನೇಹಿತರು. ಇವರು ಗಾರೆ ಕೆಲಸ ಮಾಡುತ್ತಿದ್ದರು. ಮಲ್ಲಿಕ್ ಎಂಬಾತ ರಾಘವೇಂದ್ರನ ಸಹೋದರನಿಗೆ ಹಣ ಕೊಟ್ಟಿದ್ದ. ಇದೇ ವಿಚಾರವಾಗಿ ಅವರಿಬ್ಬರ ಮಧ್ಯೆ ಜಗಳ ನಡೆದಿತ್ತು.
ಇಂದು ಮಲ್ಲಿಕ್ ಮನೆಗೆ ಬಂದಾಗ ರಾಘವೇಂದ್ರನ ಸಹೋದರ ಮನೆಯಲ್ಲಿ ಇರಲಿಲ್ಲ. ಆಗ ರಾಘವೇಂದ್ರ ಹಾಗೂ ಮಲ್ಲಿಕ್ ಮಧ್ಯೆ ಜಗಳವಾಗಿದೆ. ಈ ವೇಳೆ ಮಲ್ಲಿಕ್ ರಾಘವೇಂದ್ರನ ಬೆನ್ನಿಗೆ ಚಾಕುಚೂರಿ ಹಾಕಿ ಪರಾರಿಯಾಗಿದ್ದಾನೆ.
ಆರೋಪಿಗಳು ಒಬ್ಬನೇ ಇದ್ದನೋ ಅಥವಾ ಇಬ್ಬರು ಇದ್ದರೋ ಎಂಬುದನ್ನು ಪತ್ತೆ ಮಾಡಬೇಕಿದೆ. ಶೀಘ್ರವೇ ಮಲ್ಲಿಕ್ ನನ್ನು ಬಂಧಿಸುತ್ತೇವೆ ಎಂದರು.