×
Ad

ಎಚ್‌.ಡಿ.ರೇವಣ್ಣ ಪ್ರಕರಣದಲ್ಲಿ ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ : ಪ್ರಹ್ಲಾದ್ ಜೋಶಿ

Update: 2024-05-05 13:28 IST

ಹುಬ್ಬಳ್ಳಿ : ಎಚ್‌.ಡಿ.ರೇವಣ್ಣ ಪ್ರಕರಣದಲ್ಲಿ ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ಹುಬ್ಬಳ್ಳಿಯಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼಎಚ್‌.ಡಿ.ರೇವಣ್ಣ ಅವರಿಗೆ ವಯಸ್ಸಾಗಿದೆ. ಇಂತಹ ಸಂದರ್ಭದಲ್ಲಿ ಇದು ದುರ್ದೈವ. ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಸಾಕಷ್ಟು ಆರೋಪಗಳು ಕೇಳಿ ಬಂದಿವೆ. ರೇವಣ್ಣ ವಿರುದ್ಧ ಮಹಿಳೆ ಅಪಹರಣ ಪ್ರಕರಣ ದಾಖಲಾಗಿದ್ದು, ಬಂಧನವಾಗಿದೆ. ಕಾನೂನು ಪ್ರಕಾರ ಕ್ರಮವಾಗಿದೆʼ ಎಂದು ಹೇಳಿದರು.

ʼಎಚ್‌.ಡಿ.ರೇವಣ್ಣ ವಿರುದ್ಧ ತನಿಖೆ ನಡೆಸುವುದು ಒಳ್ಳೆಯದೇ. ಆದರೆ ಬಂಧನ ಎಷ್ಟು ಸರಿ? ಎಂಬುದನ್ನು ನ್ಯಾಯಾಲಯ ತೀರ್ಮಾನಿಸುತ್ತದೆʼ ಎಂದು ಜೋಶಿ ಹೇಳಿದರು.

ಪ್ರಚಾರ ವೇಳೆ ಉತ್ತಮ ಪ್ರತಿಕ್ರಿಯೆ: ಚುನಾವಣೆ ಪ್ರಚಾರದ ವೇಳೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಾಜ್ಯದಲ್ಲಿ ನಡೆಯುತ್ತಿರುವ ಎರಡನೇ ಹಂತದ ಮತದಾನದಲ್ಲಿ ಬಿಜೆಪಿ ಧಾರವಾಡ ಸೇರಿದಂತೆ 14 ಕ್ಷೇತ್ರಗಳಲ್ಲೂ ಗೆಲುವು ದಾಖಲಿಸಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News