×
Ad

ಹುಬ್ಬಳ್ಳಿಯಲ್ಲಿ ಗುಡುಗು ಸಹಿತ ಭಾರೀ ಮಳೆ

Update: 2024-05-14 17:56 IST

ಸಾಂದರ್ಭಿಕ ಚಿತ್ರ | PC : PTI

ಹುಬ್ಬಳ್ಳಿ : ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಗುಡುಗು ಹಾಗೂ ಭಾರೀ ಪ್ರಮಾಣದ ಗಾಳಿ ಸಹಿತ ಮಳೆಯಾಗಿದೆ.

ಮಳೆ ಇಲ್ಲದೇ ಬಿಸಿಲಿನ ತಾಪವನ್ನು ಅನುಭವಿಸಿದ್ದ ಜನರಿಗೆ ಮಳೆ ಅಬ್ಬರದಿಂದ ಖುಷಿಯಾಗಿದೆ. ಅದರೆ ಗಾಳಿ‌ ಸಹಿತ ಮಳೆಯಿಂದ ಹುಬ್ಬಳ್ಳಿಯ ಜನರು ಕೊಂಚ ಆತಂಕಗೊಂಡಿದ್ದಾರೆ.

ಇನ್ನೂ  ಹುಬ್ಬಳ್ಳಿಯಲ್ಲಿ ಬಹುತೇಕ ಕಡೆಯಲ್ಲಿ ಗುಡುಗು ಸಹಿತ ಮಳೆಯಾಗಿದ್ದು, ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಅಲ್ಲದೇ ಮೊನ್ನೆಯಷ್ಟೇ ಜನರಲ್ಲಿ ಆತಂಕ ಸೃಷ್ಟಿಸಿದ್ದ ಮಳೆ ಇಂದೂ‌‌ ಕೂಡ ಮುಂದುವರಿದಿದೆ. ಜಿಲ್ಲೆಯಲ್ಲಿ ಮೋಡಕವಿದ ವಾತಾವರಣವಿದ್ದು, ಮಳೆಯಿಂದಾಗಿ ಸದ್ಯ ಬಿಸಿಲಧಗೆ ಕಡಿಮೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News