×
Ad

ನಾಳೆ(ಜು.26) ಹುಬ್ಬಳ್ಳಿಯಲ್ಲಿ ಸೂಫಿ ಸಂತರ ಸಮ್ಮೇಳನ

Update: 2025-07-25 21:00 IST

ಹುಬ್ಬಳ್ಳಿ : ಮತೀಯ ಸಾಮರಸ್ಯದ ಸಂದೇಶವನ್ನು ರವಾನಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸುನ್ನಿ ಮಶಾಯಕ್ ಕೌನ್ಸಿಲ್ ಆಶ್ರಯದಲ್ಲಿ ಹಳೇ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಜು.26ರಂದು ಸಂಜೆ 5:30ಕ್ಕೆ ಬೃಹತ್ ಸೂಫಿ ಸಂತರ ಸಮ್ಮೇಳನವನ್ನು ಆಯೋಜಿಸಲಾಗಿದೆ.

ಹುಬ್ಬಳ್ಳಿ ಮೂರು ಸಾವಿರ ಮಠದ ಜಗದ್ಗುರು ಡಾ.ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ, ಶಿರಹಟ್ಟಿ ಫಕೀರೇಶ್ವರ ಮಠದ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ, ವಿಜಯಪುರದ ಹಾಷಂ ಪೀರಾ ಸೇರಿದಂತೆ ನಾಡಿನ ವಿವಿಧ ಭಾಗಗಳಿಂದ ಸೂಫಿ ಸಂತರು, ದಾರ್ಶನಿಕರು, ಇಸ್ಲಾಮಿಕ್ ಆಧ್ಯಾತ್ಮಿಕ ವಿದ್ವಾಂಸರು, ಚಿಂತಕರು, ವಿವಿಧ ಮಠಾಧೀಶರು, ಸಚಿವರಾದ ಸತೀಶ್ ಜಾರಕಿಹೊಳಿ, ಎಚ್.ಕೆ.ಪಾಟೀಲ್, ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್, ಶಿವಾನಂದ ಪಾಟೀಲ ಸೇರಿ ಶಾಸಕರು, ಸಂಸದರು ಹಾಗೂ ಸರ್ವಧರ್ಮಗಳ ಪ್ರಮುಖರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News