×
Ad

ಧಾರವಾಡ: ತಾಯಿಯನ್ನು ಹತ್ಯೆಗೈದು ಆತ್ಮಹತ್ಯೆ ಮಾಡಿಕೊಂಡ ಪುತ್ರ

Update: 2024-03-03 19:08 IST

ಧಾರವಾಡ: ಆಸ್ತಿ ವಿಚಾರದಲ್ಲಿ ಪುತ್ರನೊಬ್ಬ ತನ್ನ ತಾಯಿಯನ್ನು ಹತ್ಯೆಗೈದು ಬಳಿಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡ ಹೊಸಯಲ್ಲಾಪೂರ ಉಡುಪಿ ನಗರದಲ್ಲಿ ರವಿವಾರ ನಡೆದಿದೆ.

ಶಾರದಾ ಭಜಂತ್ರಿ (60) ಕೊಲೆಯಾದ ಮಹಿಳೆ. ಆರೋಪಿ ಪುತ್ರ ರಾಜೇಂದ್ರ ಭಜಂತ್ರಿ (40) ಎಂದು ಗುರುತಿಸಲಾಗಿದೆ.

ತಾಯಿಗೆ ಬರುತ್ತಿದ್ದ ಪಿಂಚಣಿ ಹಣ ಮತ್ತು ಆಸ್ತಿ ಮೇಲೆ ಕಣ್ಣಿಟ್ಟಿದ್ದ ಆರೋಪಿ ರಾಜೇಂದ್ರ, ಹಣಕ್ಕಾಗಿ ತಾಯಿಯನ್ನು ಪೀಡಿಸುತ್ತಿದ್ದ ಎಂದು ಆರೋಪಿಸಲಾಗಿದೆ.

ಖಾಲಿ ಜಾಗವನ್ನು ತನ್ನ ಹೆಸರಿಗೆ ಮಾಡಿಕೊಡಲು ನಿರಾಕರಿಸಿದ್ದಕ್ಕೆ ಆರೋಪಿಯು ತಾಯಿಗೆ ರಾಡ್‌ನಿಂದ ಥಳಿಸಿ ಹತ್ಯೆ ಮಾಡಿದ್ದಾನೆ. ಬಳಿಕ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸ್ಥಳಕ್ಕೆ ಧಾರವಾಡ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News