×
Ad

ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್‌ ಪಕ್ಷಕ್ಕೆ ಬಂದರೆ ಸ್ವಾಗತ : ಶಾಸಕ ರಾಜು‌ ಕಾಗೆ

Update: 2025-03-28 15:03 IST

ಶಾಸಕ ರಾಜು‌ ಕಾಗೆ 

ಹುಬ್ಬಳ್ಳಿ: "ಬಿಜೆಪಿಯಿಂದ ಉಚ್ಚಾಟನೆಯಾಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ನಮ್ಮ ಪಕ್ಷಕ್ಕೆ ಬಂದರೆ ಸ್ವಾಗತಿಸುತ್ತೇನೆ" ಎಂದು ಕಾಂಗ್ರೆಸ್ ಶಾಸಕ ರಾಜು‌ ಕಾಗೆ ಹೇಳಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ಹೈಕಮಾಂಡ್ ಜೊತೆಗೆ ಚರ್ಚೆ ಮಾಡಿ ಕರೆದುಕೊಂಡು ಬನ್ನಿ ಅಂದರೆ ಸ್ವಾಗತ ಮಾಡುತ್ತೇವೆ. ನಾನೇ ಬಸನಗೌಡ ಪಾಟೀಲ್ ಯತ್ನಾಳರನ್ನು ಕಾಂಗ್ರೆಸ್ ಗೆ ಕರೆದುಕೊಂಡು ಬರುತ್ತೇನೆ. ನನಗೆ ಜವಾಬ್ದಾರಿ ಕೊಟ್ಟರೆ ಕರೆದುಕೊಂಡು ಬರುತ್ತೇನೆ ಎಂದು ಹೇಳಿದರು.

ಬೆಲೆ ಏರಿಕೆಯಿಂದ ಅಷ್ಟೇನೂ ಹೊರೆ ಆಗುವುದಿಲ್ಲ. ನಾವು ಹೊಸ ಬಸ್ ನಿಲ್ದಾಣ ನಿರ್ಮಾಣ, ಹೊಸ ಬಸ್ ಖರೀದಿ ಮಾಡುತ್ತಿದ್ದೇವೆ. ಸದ್ಯದ ವ್ಯವಸ್ಥೆ ಸರಿಪಡಿಸಬೇಕು. ʼನೋ ಪ್ರಾಫಿಟ್ , ನೋ ಲಾಸ್ʼ ನಲ್ಲಿ ಸಂಸ್ಥೆ ನಡೆಯಬೇಕು ಎಂದು ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News