×
Ad

ಕಾಂಗ್ರೆಸ್ ನೆಚ್ಚಿದ ಪ್ರಾದೇಶಿಕ ಪಕ್ಷಗಳೂ ಮುಳುಗಲಿವೆ : ಪ್ರಹ್ಲಾದ್ ಜೋಶಿ

Update: 2024-11-23 18:16 IST

ಪ್ರಹ್ಲಾದ್ ಜೋಶಿ 

ಹುಬ್ಬಳ್ಳಿ : ಕಾಂಗ್ರೆಸ್ ಅನ್ನು ನೆಚ್ಚಿಕೊಂಡು ಹೋದರೆ ಪ್ರಾದೇಶಿಕ ಪಕ್ಷಗಳು ಮುಳುಗಿ ಹೋಗಲಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕಿಸಿದ್ದಾರೆ.

ಶನಿವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಮಹಾರಾಷ್ಟ್ರ ಮತ್ತು ಜಾರ್ಖಂಡ್ ಚುನಾವಣೆ ಫಲಿತಾಂಶವೇ ಇದಕ್ಕೆ ನಿದರ್ಶನ. ಕಾಂಗ್ರೆಸ್ ಪಕ್ಷ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆ. ಇದರೊಂದಿಗೆ ಹೋದ ಪ್ರಾದೇಶಿಕ ಪಕ್ಷಗಳ ಗತಿಯೂ ಹಾಗೇ ಆಗಲಿದೆ ಎಂದು ಭವಿಷ್ಯ ನುಡಿದರು.

ದೇಶದ ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಅದು ತನ್ನೊಂದಿಗೆ ತನ್ನ ಕೈ ಹಿಡಿದು ಬಂದವರನ್ನೂ ಮುಳುಗಿಸುತ್ತಿದೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿದೆ. ಅದರೊಂದಿಗೆ ಮೈತ್ರಿ ಮಾಡಿಕೊಂಡ ಸ್ಥಳೀಯ ಪಕ್ಷಗಳೂ ಕಾಂಗ್ರೆಸ್ ಜತೆ ಮುಳುಗಿ ಹೋಗಿವೆ ಎಂದು ಅವರು ವಿಶ್ಲೇಷಿಸಿದರು.

ಚುನಾವಣೆಯಲ್ಲಿ ಯಾವುದೇ ಪಕ್ಷದ ಅಭ್ಯರ್ಥಿ ಸೋಲು-ಗೆಲುವು ಸಹಜ. ಆದರೆ ಕಾಂಗ್ರೆಸ್ ಅಸ್ಥಿತ್ವವೇ ಇಲ್ಲದಂತಹ ಸ್ಥಿತಿಗೆ ತಲುಪಿದೆ. ಶರದ್ ಪವಾರ್ ನೇತೃತ್ವದ ಎನ್‍ಸಿಪಿ, ಉದ್ದವ್ ಠಾಕ್ರೆ ನೇತೃತ್ವದ ಶಿವಸೇನಾವನ್ನು ಕಾಂಗ್ರೆಸ್‍ನವರು ಮುಳುಗಿಸಿದ್ದರು. ಸ್ವಲ್ಪ ಹೆಚ್ಚು ಕಡಿಮೆ ಆಗಿದ್ದಿದ್ದರೆ ಜೆಎಂಎಂ ಅನ್ನೂ ಮುಳುಗಿಸುತ್ತಿದ್ದರು ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News