‘ಹುಬ್ಬಳ್ಳಿ ಪ್ರಕರಣ’ ನ್ಯಾಯಾಂಗ ತನಿಖೆಗೆ ಆರ್.ಅಶೋಕ್ ಆಗ್ರಹ
Update: 2026-01-09 18:37 IST
ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿದ ವಿಚಾರ ದೇಶದ ಸುದ್ದಿಯಾಗಿದೆ. ಜನರು ಇದರ ಸತ್ಯಾಂಶ ತಿಳಿಯಲು ಬಯಸುತ್ತಿದ್ದಾರೆ. ಆದುದರಿಂದ ಘಟನೆಯ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹೆಣ್ಣು ಮಗಳೆ ಬಟ್ಟೆ ಬಿಚ್ಚಿಕೊಂಡಿದ್ದಾರೆ ಎಂದು ಹೇಳುತ್ತಿದ್ದಾರೆ. ಹಾಗಿದ್ದರೆ ಪೊಲೀಸರು ಏನು ಕತ್ತೆ ಕಾಯುತ್ತಿದ್ದರೇ? 40 ಜನ ಪೊಲೀಸರು, ವ್ಯಾನ್ ನಿಮ್ಮದೇ, ಚಾಲಕನೂ ನಿಮ್ಮವನೇ, ಪೊಲೀಸ್-ಕಾನೂನು ನಿಮ್ಮದೇ ಇರುವಾಗ ನಿಮ್ಮಿಂದ ತಡೆಯಲಾಗಲಿಲ್ಲವೇ? ಎಂದು ಪ್ರಶ್ನಿಸಿದರು.
ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಸುಜಾತ ಹಂಡಿ ಅವರನ್ನು ಬಂಧಿಸಲು ಕೌನ್ಸಿಲರ್ ದೂರು ಕೊಟ್ಟಿದ್ದರು. ಇನ್ಸ್ ಪೆಕ್ಟರ್ ಅವರು ಬಂಧನ ಸಂಬಂಧ ಸುಮಾರು ಜನರನ್ನು ಕರೆದೊಯ್ದಾಗ ಆದ ಘಟನೆ ಎಂತಹದ್ದೆಂದು ಪೊಲೀಸರು ತನಿಖೆ ಮಾಡಿ ಹೇಳಲಿ ಎಂದು ಆಗ್ರಹಿಸಿದರು.