ಧಾರವಾಡ: ಯುಪಿಎಸ್ಸಿ- ಕೆಎಎಸ್ ಪರೀಕ್ಷೆಗೆ ತಯಾರಿ ನಡೆಸಿದ್ದ ವಿದ್ಯಾರ್ಥಿನಿ ಹೃದಯಾಘಾತದಿಂದ ಮೃತ್ಯು
Update: 2025-07-09 18:28 IST
ಜೀವಿತಾ ಕುಸುಗೂರ
ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಪದವಿ ವಿಭಾಗದಲ್ಲಿ ವಿದ್ಯಾಭ್ಯಾಸ ಮುಗಿಸಿ, ಯುಪಿಎಸ್ಸಿ ಹಾಗೂ ಕೆಎಎಸ್ ಪರೀಕ್ಷೆಗೆ ತಯಾರಿ ನಡೆಸಿದ್ದ ವಿದ್ಯಾರ್ಥಿನಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಜೀವಿತಾ ಕುಸುಗೂರ (26) ಮೃತಪಟ್ಟ ಯುವತಿ.
ಧಾರವಾಡ ಪುರೋಹಿತನಗರದಲ್ಲಿರುವ ಪ್ರಭಾಕರ ಕುಸುಗೂರು ಎಂಬವರ ಪುತ್ರಿ ಜೀವಿತಾ ಕುಸುಗೂರ ಇತ್ತೀಚಿಗಷ್ಟೇ ಎಂಎಸ್ಸಿ ಅಗ್ರಿ ಪದವಿ ಮುಗಿಸಿ, ಯುಪಿಎಸ್ಸಿ - ಕೆಎಎಸ್ ಪರೀಕ್ಷೆಗೆ ತಯಾರಿ ನಡೆಸಿದ್ದರು.
ಮಂಗಳವಾರ (ಜು.8) ಬೆಳಗ್ಗೆ ಮನೆಯಲ್ಲಿ ತಲೆ ಸುತ್ತು ಬಂದು ಬಿದ್ದಿದ್ದರು. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಯುವತಿ ಕೊನೆಯುಸಿರೆಳೆದಿದ್ದಾರೆ.