ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೈಲುಶಿಕ್ಷೆ ಅಮಾನತು; ಬಿಡುಗಡೆಗೆ ಆದೇಶ
Update: 2023-08-29 13:47 IST
Photo: ANI
ಇಸ್ಲಾಮಾಬಾದ್: ಮಾಜಿ ಪ್ರಧಾನಿ ಇಮ್ರಾನ್ಖಾನ್ಗೆ ತೋಷಖಾನಾ ಭ್ರಷ್ಟಾಚಾರ ಪ್ರಕರಣದಲ್ಲಿ ವಿಧಿಸಲಾಗಿದ್ದ 3 ವರ್ಷಗಳ ಶಿಕ್ಷೆಯನ್ನು ಇಸ್ಲಾಮಾಬಾದ್ ಹೈಕೋರ್ಟ್ ಮಂಗಳವಾರ ಅಮಾನತುಗೊಳಿಸಿದ್ದು ಅವರನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಆದೇಶಿಸಿದೆ.
ಇಮ್ರಾನ್ ಅವರ ಕೋರಿಕೆಯನ್ನು ಅನುಮೋದಿಸಲಾಗಿದ್ದು ಜಿಲ್ಲಾ ನ್ಯಾಯಾಲಯದ ನ್ಯಾಯಪೀಠದ ನಿರ್ಧಾರವನ್ನು ಇಸ್ಲಾಮಾಬಾದ್ ಹೈಕೋರ್ಟ್ ಅಮಾನತುಗೊಳಿಸಿದೆ ಎಂದು ಇಮ್ರಾನ್ ಅವರ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ ಪಕ್ಷದ(ಪಿಟಿಐ) ಹೇಳಿಕೆ ತಿಳಿಸಿದೆ.
ಉಭಯ ಕಡೆಯವರ ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್ ಸೋಮವಾರ ತೀರ್ಪನ್ನು ಕಾದಿರಿಸಿತ್ತು. ಇಸ್ಲಾಮಾಬಾದ್ ನ ವಿಚಾರಣಾ ನ್ಯಾಯಾಲಯ ಆಗಸ್ಟ್ 5ರಂದು ಇಮ್ರಾನ್ಖಾನ್ಗೆ 3 ವರ್ಷದ ಜೈಲುಶಿಕ್ಷೆ ವಿಧಿಸಿದ ಜತೆಗೆ ಐದು ವರ್ಷಗಳ ಕಾಲ ಅವರನ್ನು ರಾಜಕೀಯದಿಂದ ನಿರ್ಬಂಧಿಸಲಾಗಿತ್ತು.