ʼಪ್ರತಿ ನಿಮಿಷಕ್ಕೆ 194 ಬಿರಿಯಾನಿʼ: 2025ರಲ್ಲಿ 9.3 ಕೋಟಿ ಬಿರಿಯಾನಿ ಆರ್ಡರ್ ಮಾಡಿದ ಭಾರತ!
ಅತಿ ಹೆಚ್ಚು ಆರ್ಡರ್ ಮಾಡಿದ ಖಾದ್ಯಗಳ ಮಾಹಿತಿ ಇಲ್ಲಿದೆ...
ಸಾಂದರ್ಭಿಕ ಚಿತ್ರ (AI)
ಬರ್ಗರ್ ಗಳು ಮತ್ತು ಪಿಝಾಗಳನ್ನು ಕ್ರಮವಾಗಿ 44.2 ದಶಲಕ್ಷ ಮತ್ತು 40.1 ದಶಲಕ್ಷದಷ್ಟು ಆರ್ಡರ್ ಮಾಡಲಾಗಿದೆ. ಈ ನಡುವೆ ಸಸ್ಯಾಹಾರಿ ತಿನಿಸಾದ ದೋಸೆಯನ್ನು 26.2 ದಶಲಕ್ಷದಷ್ಟ ಆರ್ಡರ್ ಮಾಡಲಾಗಿದೆ.
ಜಗತ್ತು ಹೊಸ ವರ್ಷವನ್ನು ಸ್ವಾಗತಿಸಲು ಸಿದ್ಧವಾಗುತ್ತಿರುವ ಸಂದರ್ಭದಲ್ಲಿ ಭಾರತೀಯರ ಬಿರಿಯಾನಿ ಮೇಲಿನ ಮೋಹ ಕಡಿಮೆಯಾಗುತ್ತಿದ್ದಂತೆ ಕಾಣುತ್ತಿಲ್ಲ. Swiggy ತನ್ನ 10ನೇ ವಾರ್ಷಿಕ ವರದಿ ‘ಹೌ ಇಂಡಿಯಾ ಸ್ವಿಗೀಡ್’ನಲ್ಲಿ (ಭಾರತ ಹೇಗೆ ಸ್ವಿಗಿಯಲ್ಲಿ ಆಹಾರ ಖರೀದಿಸಿದೆ) ಹೇಳುವ ಪ್ರಕಾರ 2025ರಲ್ಲಿ 93 ದಶಲಕ್ಷ ಬಿರಿಯಾನಿಗಳನ್ನು Swiggy ಯಲ್ಲಿ ಆರ್ಡರ್ ಮಾಡಲಾಗಿದೆ. 2024ರಲ್ಲಿ 83 ದಶಲಕ್ಷ ಬಿರಿಯಾನಿಗಳನ್ನು ಆರ್ಡರ್ ಮಾಡಲಾಗಿತ್ತು. ಈ ವರ್ಷ ಹತ್ತು ದಶಲಕ್ಷ ಹೆಚ್ಚುವರಿ ಬಿರಿಯಾನಿ ಆರ್ಡರ್ ಆಗಿದೆ.
ʼಚಿಕನ್ ಬಿರಿಯಾನಿಯೇ ಪ್ರೀತಿʼ:
ಈ ಸಂಖ್ಯೆಯನ್ನು ಸ್ಪಷ್ಟವಾಗಿ ವಿವರಿಸುವುದಾದಲ್ಲಿ ಭಾರತೀಯರು ಸ್ವಿಗಿಯಲ್ಲಿ ಪ್ರತಿ ನಿಮಿಷಕ್ಕೆ 194 ಬಿರಿಯಾನಿ ಆರ್ಡರ್ ಮಾಡಿದ್ದಾರೆ. ಅಥವಾ ಪ್ರತಿ ಸೆಕೆಂಡಿಗೆ 3.25 ಬಿರಿಯಾನಿ ಆರ್ಡರ್ ಮಾಡಿದ್ದಾರೆ. ಬಿರಿಯಾನಿಗಳಲ್ಲಿ ಚಿಕನ್ ಬಿರಿಯಾನಿಯೇ 57.7 ದಶಲಕ್ಷ ಆರ್ಡರ್ ಗಳಷ್ಟಿತ್ತು. ಈ ವಿಭಾಗದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ರಿಪೀಟ್ (ಮರು) ಆರ್ಡರ್ ದೊರೆತಿದೆ.
2024ರಲ್ಲಿ ಹೈದರಾಬಾದ್ ನಲ್ಲಿ 9.7 ದಶಲಕ್ಷ ಬಿರಿಯಾನಿ ಆರ್ಡರ್ ಆಗಿತ್ತು. ಬೆಂಗಳೂರಿನಲ್ಲಿ 7.7 ದಶಲಕ್ಷ ಬಿರಿಯಾನಿ ಹಾಗೂ ಚೆನ್ನೈನಲ್ಲಿ 4.6 ದಶಲಕ್ಷ ಬಿರಿಯಾನಿಗಳನ್ನು ಆರ್ಡರ್ ಮಾಡಲಾಗಿತ್ತು. ಹಬ್ಬದ ಸಂದರ್ಭದಲ್ಲಿ ಬಿರಿಯಾನಿಯ ಪ್ರಾಮುಖ್ಯತೆ ಹೆಚ್ಚಾಗಿರುತ್ತದೆ. 2024ರಲ್ಲಿ ರಮಝಾನ್ ಸಂದರ್ಭದಲ್ಲಿಯೇ 6 ದಶಲಕ್ಷ ಬಿರಿಯಾನಿ ಆರ್ಡರ್ ಮಾಡಲಾಗಿತ್ತು!
ಪಿಝಾ ಬರ್ಗರ್ ಗಳ ನಡುವೆ ದೋಸೆ:
ಬಿರಿಯಾನಿ ಜನರಿಗೆ ಇಷ್ಟ ಎಂದ ತಕ್ಷಣ ಪಿಝಾ ಮತ್ತು ಬರ್ಗರ್ ಗಳ ಆರ್ಡರ್ ಕಡಿಮೆಯಾಗಿದೆ ಎಂದಲ್ಲ. ಬರ್ಗರ್ ಗಳು ಮತ್ತು ಪಿಝಾಗಳನ್ನು ಕ್ರಮವಾಗಿ 44.2 ದಶಲಕ್ಷ ಮತ್ತು 40.1 ದಶಲಕ್ಷದಷ್ಟು ಆರ್ಡರ್ ಮಾಡಲಾಗಿದೆ. ಈ ನಡುವೆ ಸಸ್ಯಾಹಾರಿ ತಿನಿಸಾದ ದೋಸೆಯನ್ನು 26.2 ಬಾರಿ ಆರ್ಡರ್ ಮಾಡಲಾಗಿದೆ. ಹೀಗಾಗಿ ಇಂದಿಗೂ ರಾಷ್ಟ್ರಾದ್ಯಂತ ಜನರ ಮನದಲ್ಲಿ ನೆಲೆಯೂರಿದ ತಿನಿಸಾಗಿದೆ ದೋಸೆ. ಮಾತ್ರವಲ್ಲದೆ ದಕ್ಷಿಣ ಭಾರತದ ಪಾರಂಪರಿಕ ತಿನಿಸು ಇಂದಿಗೂ ತನ್ನ ಘಮವನ್ನು ಉಳಿಸಿಕೊಂಡಿರುವುದಕ್ಕೆ ಸಾಕ್ಷಿಯಾಗಿದೆ. ಬೆಂಗಳೂರು, ಮುಂಬೈ ಮತ್ತು ಹೈದರಾಬಾದ್ನಲ್ಲಿಯೇ 23 ದಶಲಕ್ಷ ದೋಸೆಯನ್ನು ಆರ್ಡರ್ ಗಳನ್ನು ಮಾಡಲಾಗಿತ್ತು.
ಚಿಕನ್ ರೋಲ್ಸ್ ಗಳು:
ಬರ್ಗರ್ಗಳ ಸಂಖ್ಯೆಗೆ ಬಂದರೆ ಚಿಕನ್ ಬರ್ಗರ್ಗಳೇ ಮೇಲುಗೈ ಸಾಧಿಸಿವೆ. 6.3 ದಶಲಕ್ಷ ಮಂದಿ ಚಿಕನ್ ಬರ್ಗರ್ ಆರ್ಡರ್ ಮಾಡಿದ್ದಾರೆ. ಚಿಕನ್ ರೋಲ್ಸ್ ಆರ್ಡರ್ನಲ್ಲೂ ಏರಿಕೆಯಾಗಿದೆ. 2024ರಲ್ಲಿ 2.48 ದಶಲಕ್ಷ ಆರ್ಡರ್ ಮಾಡಿದರೆ, 2025ರಲ್ಲಿ 4.1 ರಷ್ಟು ಚಿಕನ್ ರೋಲ್ಸ್ ಆರ್ಡರ್ ಮಾಡಲಾಗಿದೆ. ಪಾರಂಪರಿಕ ಚಾಯ್-ಸಮೋಸವನ್ನು ಆರ್ಡರ್ ಮಾಡಲಾಗಿದೆ. 3.42 ದಶಲಕ್ಷ ಮಂದಿ ಸಮೋಸಗಳನ್ನು ಆರ್ಡರ್ ಮಾಡಿದರೆ, 2,9 ದಶಲಕ್ಷ ಮಂದಿ ಶುಂಠಿ ಚಹಾವನ್ನು ಆರ್ಡರ್ ಮಾಡಿದ್ದಾರೆ.
ಡೆಸರ್ಟ್ ಗಳ ಆರ್ಡರ್
ವೈಟ್ ಚಾಕಲೇಟ್ಗಳ ಆರ್ಡರ್ ಅತಿ ಹೆಚ್ಚಾಗಿತ್ತು. 6.9 ದಶಲಕ್ಷ ಮಂದಿ ವೈಟ್ ಚಾಕಲೇಟ್ಗಳನ್ನು ಆರ್ಡರ್ ಮಾಡಿದ್ದಾರೆ. 5.4 ದಶಲಕ್ಷದಷ್ಟು ಚಾಕಲೇಟ್ ಕೇಕ್ ಆರ್ಡರ್ ಮಾಡಲಾಗಿದೆ. 4.5 ದಶಲಕ್ಷದಷ್ಟು ಗುಲಾಬ್ ಜಾಮೂನು, 2 ದಶಲಕ್ಷದಷ್ಟು ಕಾಜು ಬರ್ಫಿ ಹಾಗೂ 1.9 ದಶಲಕ್ಷಗಳಷ್ಟು ಬೇಸನ್ ಲಡ್ಡುಗಳನ್ನು ಆರ್ಡರ್ ಮಾಡಲಾಗಿದೆ.
ಅಂತಾರಾಷ್ಟ್ರೀಯ ಅಡುಗೆ
ಮೆಕ್ಸಿಕನ್ ಅಡುಗೆಯನ್ನು 16 ದಶಲಕ್ಷ ಬಾರಿ ಆರ್ಡರ್ ಮಾಡಲಾಗಿದೆ. ಟಿಬೆಟಿಯನ್ ಆಹಾರವನ್ನು 12 ದಶಲಕ್ಷ, ಕೊರಿಯನ್ ಆಹಾರವನ್ನು 4.7 ದಶಲಕ್ಷ ಬಾರಿ ಆರ್ಡರ್ ಮಾಡಲಾಗಿದೆ. ಜಾಗತಿಕ ಅಡುಗೆಯಲ್ಲಿ ಮಾಚವನ್ನು (ಒಂದುಬಗೆಯ ಗ್ರೀನ್ ಟೀ) ಅತಿ ಹೆಚ್ಚು ಬಾರಿ ಹುಡುಕಲಾಗಿದೆ. ಜೊತೆಗೆ ಅತಿ ಸ್ಥಳೀಯ ಅಡುಗೆಗಳನ್ನೂ ಹೆಚ್ಚು ಹುಡುಕಲಾಗಿದೆ. ಪಹಡಿ ಕ್ಯುಸಿನ್ ಆರ್ಡರ್ಗಳು ಒಂಭತ್ತುಪಟ್ಟು ಹೆಚ್ಚಾಗಿದೆ. ಮಲಬಾರಿ, ರಾಜಸ್ಥಾನಿ ಮತ್ತು ಮಲ್ವಾನಿ ಕ್ಯುಸಿನ್ಗಳ ಆರ್ಡರ್ ಪ್ರತಿ ವರ್ಷ ದುಪ್ಪಟ್ಟಾಗುತ್ತಿದೆ.
ತಡರಾತ್ರಿ ತಿನಿಸುಗಳು ಮತ್ತು ಉಪಾಹಾರ
ಮಧ್ಯರಾತ್ರಿ 2 ಗಂಟೆಗೆ ಆರ್ಡರ್ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ. ತಡರಾತ್ರಿಯ ಆಹಾರದಲ್ಲಿ ಚಿಕನ್ ಬರ್ಗರ್ ಅನ್ನು 2.3 ದಶಲಕ್ಷ ಬಾರಿ ಆರ್ಡರ್ ಮಾಡಲಾಗಿದೆ. ಬಿರಿಯಾನಿ ಎರಡನೇ ಅತಿಹೆಚ್ಚು ಬಾರಿ ಆರ್ಡರ್ ಮಾಡಿದ ತಿನಿಸಾಗಿದೆ. ಉಪಾಹಾರದಲ್ಲಿ ಇಡ್ಲಿಯನ್ನು 11 ದಶಲಕ್ಷ ಬಾರಿ ಆರ್ಡರ್ ಮಾಡಲಾಗಿದೆ. ಸಸ್ಯಾಹಾರಿ ದೋಸೆ 9.6 ದಶಲಕ್ಷ ಬಾರಿ ಆರ್ಡರ್ ಆಗಿದೆ.
ಹಬ್ಬದ ಸಂದರ್ಭದಲ್ಲಿ ಆರ್ಡರ್ ಏರಿಕೆ
ಗಣೇಶ ಚತುರ್ಥಿಯ ಸಂದರ್ಭದಲ್ಲಿ ರಾಷ್ಟ್ರಾದ್ಯಂತ 2,28,000 ಮೋದಕ್ಗಳನ್ನು ಸ್ವಿಗಿಯಲ್ಲಿ ಆರ್ಡರ್ ಮಾಡಲಾಗಿದೆ. ನವರಾತ್ರಿ ಸಂದರ್ಭದಲ್ಲಿ 99,200 ಪ್ಲೇಟ್ಗಳಷ್ಟು ಸಾಬುದಾನ ಕಿಚಡಿ ಆರ್ಡರ್ ಮಾಡಲಾಗಿದೆ. ಉಪವಾಸದ ತಾಲಿ 100,000 ಬಾರಿ, ಸಾಬುದಾನ ವಡಾವನ್ನು 70,000 ಬಾರಿ ಆರ್ಡರ್ ಮಾಡಲಾಗಿದೆ.
ಅಷ್ಟಮಿ ಸಂದರ್ಭದಲ್ಲಿ ಸಂಜೆ 8ರಿಂದ 60 ನಿಮಿಷಗಳ ಅವಧಿಯಲ್ಲಿ 2,20,000 ಆರ್ಡರ್ಗಳನ್ನು ಸ್ವಿಗಿ ಸ್ವೀಕರಿಸಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 17ರಷ್ಟು ಆರ್ಡರ್ ಹೆಚ್ಚಾಗಿತ್ತು. ದೀಪಾವಳಿ ವಾರದಲ್ಲಿ 1.7 ದಶಲಕ್ಷ ಕಿ.ಗ್ರಾಂನಷ್ಟು ಸಿಹಿ ತಿನಿಸು, ಒಣ ಹಣ್ಣುಗಳು ಮತ್ತು ಡೆಸರ್ಟ್ಗಳನ್ನು ಆರ್ಡರ್ ಮಾಡಲಾಗಿತ್ತು. ರಾಖಿಹಬ್ಬದ ಸಂದರ್ಭದಲ್ಲಿ ಊಟದ ಹೊತ್ತಿನಲ್ಲಿ ಪ್ರತಿ ನಿಮಿಷಕ್ಕೆ 4,650 ಆರ್ಡರ್ ಇಡಲಾಗಿತ್ತು.
ವ್ಯಕ್ತಿಗತ ಆರ್ಡರ್ ಗಳು
ಮುಂಬೈನ ವ್ಯಕ್ತಿಯೊಬ್ಬರು 2025ರ ಸಂಪೂರ್ಣ ವರ್ಷದಲ್ಲಿ 3,196 ಆರ್ಡರ್ ಗಳನ್ನು ಮಾಡಿದ್ದರು. ಹೈದರಾಬಾದ್ ನ ಗ್ರಾಹಕರೊಬ್ಬರು ಆಗಸ್ಟ್ ನಲ್ಲಿ 65 ಬಾಕ್ಸ್ ಗಳ ಒಣ ಹಣ್ಣುಗಳ ಕುಕಿ ಉಡುಗೊರೆ ಪ್ಯಾಕೆಟ್ಗಳಿಗೆ ರೂ 47,106 ವ್ಯಯಿಸಿದ್ದಾರೆ.
ಕೃಪೆ: indianexpress.com