ಹೆಚ್ಚುತ್ತಿರುವ ಹೊಟ್ಟೆನೋವು ಪ್ರಕರಣಗಳು: ಕಾರಣವೇನು?, ಚಿಕಿತ್ಸೆ ಏನು?

Update: 2023-08-10 10:24 GMT

ಸಾಂದರ್ಭಿಕ ಚಿತ್ರ (Credit: freepik.com)

ಮಳೆಗಾಲದ ತೇವಾಂಶಯುಕ್ತ ವಾತಾವರಣ ನಿಮ್ಮ ಜೀರ್ಣ ವ್ಯವಸ್ಥೆಯನ್ನು ಜಡವಾಗಿಸುತ್ತದೆ. ಬಹಳಷ್ಟು ಮಂದಿ ಜೀರ್ಣಕ್ಕೆ ಸಂಬಂಧಿಸಿದ ಸಮಸ್ಯೆಗಳಾದ ಅತಿಸಾರ, ಹೊಟ್ಟೆನೋವು, ವಾಂತಿ, ಆ್ಯಸಿಡಿಟಿ ಮತ್ತು ಉಬ್ಬರದ ಸಮಸ್ಯೆ ಎದುರಿಸುತ್ತಾರೆ, ಇದರ ಜತೆಗೆ ವೈರಸ್ ಹಾಗೂ ಬ್ಯಾಕ್ಟೀರಿಯಾಗಳ ಹೆಚ್ಚಳದಿಂದಾಗಿ ಗ್ಯಾಸ್ಟ್ರೋಎಂಟ್ರೈಟೀಸ್ ಪ್ರಕರಣಗಳು ಹಾಗೂ ಸುಧೀರ್ಘ ಕಾಲದ ಹೊಟ್ಟೆನೋವು ಹೆಚ್ಚಬಹುದು ಎಂದು ದೆಹಲಿ ನೆಹರೂ ಎನ್‍ಕ್ಲೇವ್‍ನ ಅಪೋಲೋ ಸ್ಪೆಕ್ಟ್ರಾದ ಸರ್ಜನ್ ಡಾ.ಸೌರಭ್ ಬನ್ಸಾಲ್ ಅಭಿಪ್ರಾಯಪಡುತ್ತಾರೆ.

ಜೀರ್ಣಾಂಗವ್ಯೂಹ ಸಮಸ್ಯೆಗಳು ವಿಷಾಹಾರ ಮತ್ತು ಒತ್ತಡದ ಕಾರಣದಿಂದ ಉದ್ಭವವಾಗುತ್ತವೆ ಎಂದು ಮುಂಬೈ ಲೀಲಾವತಿ ಆಸ್ಪತ್ರೆಯ ಜೀರ್ಣಾಂಗವ್ಯೂಹ ತಜ್ಞ ಡಾ. ಜಯಂತ್ ಬಾರ್ವೆ ಹೇಳುತ್ತಾರೆ. ಕರುಳು ಮತ್ತು ಮೆದುಳಿನ ಸಂಪರ್ಕದಿಂದಾಗಿ ಒತ್ತಡವು ಹೊಟ್ಟೆಯಲ್ಲಿನ ಅಸ್ವಸ್ಥತೆಗೆ ಕಾರಣವಾಗುತ್ತದೆ. ಇದಕ್ಕೆ ಹೈಡ್ರೇಷನ್, ಆಹಾರಕ್ರಮದಲ್ಲಿ ಬದಲಾವಣೆ, ಸೌಮ್ಯ ಲಕ್ಷಣಗಳಿಗೆ ಅಂಟಾಸಿಡ್‍ಗಳ ಬಳಕೆ, ಒತ್ತಡ ನಿವಾರಣೆ ಸಂಭಾವ್ಯ ಚಿಕಿತ್ಸೆಗಳು. ತೀವ್ರ ಸ್ವರೂಪದ ಸಮಸ್ಯೆಗಳಿಗೆ ವೈದ್ಯಕೀಯ ನೆರವು ಪಡೆಯುವುದು ಅಗತ್ಯ ಎನ್ನುವುದು ಅವರ ಸಲಹೆ.

ಹೊರಗಡೆ ಆಹಾರ ಸೇವಿಸುವಾಗ ಸೂಕ್ತ ನೈರ್ಮಲ್ಯ ಕಾಪಾಡಿಕೊಳ್ಳದಿರುವುದು ಮಳೆಗಾಲದಲ್ಲಿ ಹೊಟ್ಟೆನೋವಿನ ಸಮಸ್ಯೆ ಹೆಚ್ಚಳಕ್ಕೆ ಕಾರಣ ಎನ್ನುವುದು ಝೈನೋವಾ ಶಲ್ಬಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯ ಹೇಮಂತ್ ಪಟೇಲ್ ಅವರ ಅಭಿಮತ. ಇದರ ಕಾರಣದಿಂದ ಮಳೆಗಾಲದಲ್ಲಿ ತೀವ್ರತರ ಗ್ಯಾಸ್ಟ್ರಿಕ್ ಸಮಸ್ಯೆ, ಕೊಲಿಟೀಸ್, ಕರುಳುಜ್ವರ, ಅಪೆಂಡಿಸೈಟೀಸ್ ಮತ್ತು ಮೂತ್ರನಾಳದ ಸೋಂಕು ಕೂಡಾ ಅಧಿಕ.

ಫರೀದಾಬಾದ್ ಏಷ್ಯನ್ ಆಸ್ಪತ್ರೆಯ ನಿರ್ದೇಶಕ ಡಾ.ಅಮಿತ್ ಮಿಗ್ಲಾನಿಯವರು ಹೇಳುವಂತೆ ಮೂಲ ನೈರ್ಮಲ್ಯ ಅಭ್ಯಾಸಗಳು ಹಾಗೂ ಪದೇ ಪದೇ ಕೈ ತೊಳೆಯುವುದು ಅಗತ್ಯ. ಬೀದಿ ಬದಿಯಲ್ಲಿ ಕತ್ತರಿಸಿ ಇಟ್ಟ ಹಣ್ಣುಗಳನ್ನು ಮತ್ತು ತರಕಾರಿಗಳನ್ನು ಹಸಿಯಾಗಿ ಸೇವಿಸುವುದನ್ನು ನಿಲ್ಲಿಸಬೇಕು. ಹಸಿ ತರಕಾರಿಗಳನ್ನು ಹೆಚ್ಚಾಗಿ ತೊಳೆದು ಬೇಯಿಸಬೇಕು ಮತ್ತು ಹೊರಗೆ ಐಸ್ ಬಳಸುವುದು ನಿರ್ಬಂಧಿಸಿ. ಏಕೆಂದರೆ ಇದರಲ್ಲಿ ವೈರಸ್‍ಗಳಿರುತ್ತವೆ.

ಬ್ಯಾಕ್ಟೀರಿಯಾ ಮತ್ತು ವೈರಸ್‍ಗಳನ್ನು ಕೊಲ್ಲುವ ಸಲುವಾಗಿ ಕುದಿಸಿದ ನೀರು ಕುಡಿಯುವುದು ಸುರಕ್ಷಿತ ಎನ್ನುವುದು ಬನ್ಸಾಲ್ ಅವರ ಸಲಹೆ.

ಕೃಪೆ: indiatoday.in

Tags:    

Writer - ವಾರ್ತಾಭಾರತಿ

contributor

Editor - Mushina

A staff reporter

Web Editor at VarthaBharati

Byline - ವಾರ್ತಾಭಾರತಿ

contributor

Similar News