ತಡರಾತ್ರಿ ತಿಂಡಿ ತಿನಿಸುಗಳನ್ನು ತಿನ್ನುವ ಅಭ್ಯಾಸ ಇದೆಯೇ?: ಇದನ್ನೊಮ್ಮೆ ಓದಿ

Update: 2023-08-10 18:24 GMT

Photo: freepik.com

ಅಕಾಲಿಕ ಕೆಲಸದ ವೇಳಾಪಟ್ಟಿಯ ಸಮಸ್ಯೆಯಿಂದ ಬಳಲುವವರಿಗೆ ತಡರಾತ್ರಿ ತಿಂಡಿ ತಿನಿಸುಗಳನ್ನು ತಿನ್ನುವುದು ಅಭ್ಯಾಸ. ಆದರೆ ಇದು ನಮ್ಮ ದೇಹದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂದು ತಿಳಿದುಕೊಳ್ಳುವುದೂ ಕುತೂಹಲಕಾರಿ. ಸಾಮಾನ್ಯವಾಗಿ ಇಂಥ ತಡರಾತ್ರಿ ತಿನಸುಗಳಲ್ಲಿ ಅಧಿಕ ಮಟ್ಟದ ಕಾರ್ಬೋಹೈಡ್ರೇಟ್‍ಗಳು, ಅನಾರೋಗ್ಯಕರ ಕೊಬ್ಬಿನ ಅಂಶಗಳು ಇರುತ್ತವೆ ಹಾಗೂ ಇದು ನಮ್ಮ ದೈನಂದಿನ ಲಯವನ್ನು ತಪ್ಪಿಸುತ್ತದೆ ಹಾಗೂ ನಿದ್ದೆಯ ಅಭ್ಯಾಸಕ್ಕೂ ಧಕ್ಕೆ ತರಬಹುದು.

ಆದಾಗ್ಯೂ ತಡರಾತ್ರಿ ತಿಂಡಿ ತಿನಿಸು ಸವಿಯುವುದು ನಿಮ್ಮ ದೇಹಕ್ಕೆ ಏನು ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಎಂದಾದರೂ ಚಿಂತಿಸಿದ್ದೀರಾ? ತಡರಾತ್ರಿ ಆಹಾರಗಳೆಂದರೆ ರಾತ್ರಿ ಊಟದ ಬಳಿಕ ಇಲ್ಲವೇ ಮಲಗುವ ಮುನ್ನ ಇತರ ಆಹಾರ ಅಥವಾ ಪಾನೀಯಗಳನ್ನು ಸೇವಿಸುವುದು. ಹಸಿವು, ಹವ್ಯಾಸ, ಉದಾಸೀನ, ಒತ್ತಡ ಅಥವಾ ನಿದ್ದೆಗೆ ಮುನ್ನ ತಿನ್ನುವ ಚಪಲ ಇದಕ್ಕೆ ಕಾರಣ ಇರಬಹುದು. ನಿಮ್ಮ ಸಂಜೆಯ ತಿನಸುಗಳ ಪ್ರಮಾಣ, ಗುಣಮಟ್ಟ ಮತ್ತು ಸೇವಿಸುವ ಅವಧಿ ನಿಮ್ಮ ಒಟ್ಟಾರೆ ಆರೋಗ್ಯದ ಮೇಲೆ ಭಾರಿ ಪರಿಣಾಮ ಬೀರಬಹುದು. ಆಲೂಗಡ್ಡೆ ಚಿಪ್ಸ್ ಅಥವಾ ಪಿಜ್ಜಾದಂಥ ತಿನಸುಗಳ ಸೇವನೆ ಮಾತ್ರ ನಿಮ್ಮ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ.

ಬ್ರಿಂಗಮ್ ಮತ್ತು ವುಮನ್ಸ್ ಹಾಸ್ಪಿಟಲ್ ನಡೆಸಿದ ಅಧ್ಯಯನವೊಂದರ ಪ್ರಕಾರ, ತಡರಾತ್ರಿ ಆಹಾರ ಸೇವನೆ ನಿಮ್ಮಲ್ಲಿ ಬೊಜ್ಜು ಬೆಳೆಯುಲು ಕಾರಣವಾಗುತ್ತದೆ. ಹಸಿವು ಹೆಚ್ಚುವ ಜತೆಗೆ ಕ್ಯಾಲೋರಿಗಳು ದಹಿಸುವ ಪ್ರಮಾಣ ಕಡಿಮೆಯಾಗುವುದರಿಂದ ಇದು ಕೊಬ್ಬಿನ ಜೀವಕೋಶವಾಗಿ ಪರಿವರ್ತನೆಯಾಗುತ್ತದೆ. ಇದು ಜೀರ್ಣಾಂಗವ್ಯೂಹದ ಅಸ್ತಿತ್ವಕ್ಕೆ ಕಾರಣವಾಗಿ ನಿದ್ದೆಯಲ್ಲಿ ಅಜೀರ್ಣ, ಎದೆಯುರಿ ಮತ್ತು ಹುಳಿ ತೇಗು ಬರಲು ಕಾರಣವಾಗುತ್ತದೆ.

"ಜೀರ್ಣಕ್ಕೆ ತುಂಬಾ ಪ್ರಯಾಸಕರವಾದ ಆಹಾರಗಳ ಸೇವನೆ ಅಂದರೆ ರಾತ್ರಿ ಭರ್ಜರಿ ಊಟದಂಥ ಕ್ರಮಗಳು ಪದೇ ಪದೇ ಎಚ್ಚರವಾಗಲು ಕಾರಣವಾಗುತ್ತದೆ"

ಅಂತೆಯೇ ಇದರಿಂದ ಕೆಲ ಪ್ರಯೋಜನಗಳೂ ಇವೆ. ಇದು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನೀಡಲು ಸಹಕಾರಿ.

ಆದರೆ ರಾತ್ರಿಯ ವೇಳೆ ಕನಿಷ್ಠ ಸಂಸ್ಕರಿತ ಆಹಾರಗಳಾದ ಗ್ರೀಕ್ ಯೊಗಾರ್ಟ್ ಹಾಗೂ ಬೆರ್ರಿ, ಇಡಿಯ ಕಾಳುಗಳು, ಸ್ವಲ್ಪ ಬೀಜಗಳು ನಿಮ್ಮ ಆರೋಗ್ಯಕ್ಕೆ ಪೂರಕವಾಗಬಲ್ಲದು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News