ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯ ಪೋಷಿಸುವ 5 ಆಹಾರಗಳ ಬಗ್ಗೆ ಗೊತ್ತೇ?
ಸಾಂದರ್ಭಿಕ ಚಿತ್ರ | Photo Credit : freepik
ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯದ ಸೂಕ್ಷ್ಮ ಸಮತೋಲನ ತಪ್ಪಿದಾಗ ಇಡೀ ದೇಹದ ಮೇಲೆ ಪರಿಣಾಮ ಬೀರುವ ರೋಗ ಲಕ್ಷಣಗಳ ಸರಣಿಯನ್ನು ಪ್ರಚೋದಿಸಬಹುದು.
ಒಟ್ಟು ಆರೋಗ್ಯದ ಪ್ರಮುಖ ಆಧಾರ ಸ್ತಂಭವಾಗಿ ಕರುಳಿನ ಆರೋಗ್ಯವು ಇತ್ತೀಚೆಗಿನ ದಿನಗಳಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿದೆ. ಜೀರ್ಣಕ್ರಿಯೆಯನ್ನು ಮೀರಿ ಕರುಳಿನ ಮೈಕ್ರೋಬಯಾಮ್ (ಸೂಕ್ಷ್ಮಜೀವಿ) ರೋಗನಿರೋಧಕ ಶಕ್ತಿ ಮತ್ತು ಚಯಾಪಚಯ ಕ್ರಿಯೆಯಿಂದ ತೊಡಗಿ ಮನೋಸ್ಥಿತಿ, ಶಕ್ತಿಯ ಮಟ್ಟ ಮತ್ತು ತೂಕ ನಿಯಂತ್ರಣದವರೆಗೆ ಎಲ್ಲದರ ಮೇಲೆ ಪ್ರಭಾವ ಬೀರುತ್ತದೆ. ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯದ ಸೂಕ್ಷ್ಮ ಸಮತೋಲನ ತಪ್ಪಿದಾಗ ಇಡೀ ದೇಹದ ಮೇಲೆ ಪರಿಣಾಮ ಬೀರುವ ರೋಗ ಲಕ್ಷಣಗಳ ಸರಣಿಯನ್ನು ಪ್ರಚೋದಿಸಬಹುದು.
ಆಂತರಿಕ ವ್ಯವಸ್ಥೆಯನ್ನು ಫೋಷಿಸಲು ಆಹಾರಗಳನ್ನು ನಿರ್ಬಂಧಿಸುವುದಕ್ಕಿಂತ ಹೆಚ್ಚಾಗಿ ಒಳಗಿನಿಂದ ಸಾಮರಸ್ಯವನ್ನು ಮರುಸ್ಥಾಪಿಸಲು ನಿರಂತರವಾಗಿ ಸೂಕ್ತ ಸೂಕ್ಷ್ಮಜೀವಿಯನ್ನು (ಮೈಕ್ರೋಬ್) ಪೋಷಿಸುವುದು ಅಗತ್ಯವಾಗಿದೆ.
ಚೆನ್ನೈನ ಅಪೋಲೊ ಸ್ಪೆಕ್ಟ್ರಾ ಆಸ್ಪತ್ರೆಗಳ ಲೆಪ್ರೋಸ್ಕೋಪಿಕ್ ಮತ್ತು ಬ್ಯಾರಿಯಾಟ್ರಿಕ್ ಶಸ್ತ್ರಚಿಕಿತ್ಸಕರಾದ ಡಾ ಪ್ರೀತಿ ಮೃಣಾಲಿನಿ ಹೇಳುವ ಪ್ರಕಾರ ನಿಮ್ಮ ಕರುಳನ್ನು ನೈಸರ್ಗಿಕವಾಗಿ ಬೆಂಬಲಿರುವ ಮತ್ತು ಶಮನಗೊಳಿಸುವ ಐದು ಆಹಾರಗಳನ್ನು ನಿತ್ಯವೂ ಸೇವಿಸುವುದು ಅಗತ್ಯ. ಫೆಬ್ರವರಿ 21ರಂದು ಅವರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡ ವೀಡಿಯೋದಲ್ಲಿ ಕರುಳಿನ ಸೂಕ್ಷ್ಮಜೀವಿಯನ್ನು ಬಲಪಡಿಸುವ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುವ ಮೂಲಕ ಒಟ್ಟು ಆರೋಗ್ಯವನ್ನು ಸುಧಾರಿಸುವ ಸರಳ ಆಹಾರ ಸೇರ್ಪಡೆಗಳ ಬಗ್ಗೆ ವಿವರಿಸಿದ್ದಾರೆ.
ಆರೋಗ್ಯಕರ ಕರುಳಿನ ಅಗತ್ಯ
ವೈದ್ಯೆ ಮೃಣಾಲಿನಿ ಅವರ ಪ್ರಕಾರ ಕರುಳು ಆಹಾರವನ್ನು ಸಂಸ್ಕರಿಸುವುದಕ್ಕಿಂತ ಹೆಚ್ಚಿನದನ್ನು ಮಾಡುತ್ತದೆ. ರೋಗನಿರೋಧಕ ಶಕ್ತಿ, ಚಯಾಚಪಯ, ಮನೋಸ್ಥಿತಿ ಮತ್ತು ತೂಕ ನಿರ್ವಹಣೆ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಕರುಳಿನ ಸೂಕ್ಷ್ಮಜೀವಿ ಅಸಮತೋಲನಗೊಂಡಲ್ಲಿ ಈ ಕೆಳಗಿನ ಸಮಸ್ಯೆಗಳು ಕಂಡುಬರಬಹುದು.
* ಉಬ್ಬುವಿಕೆ
* ಮಲಬದ್ಧತೆ
* ಸಕ್ಕರೆ ಕಡುಬಯಕೆಗಳು
* ಕಡಿಮೆ ಶಕ್ತಿ
* ತೂಕದ ಸಮಸ್ಯೆ
ಆದರೆ, ಕರುಳಿನ ಆರೋಗ್ಯವನ್ನು ಪುನಃಸ್ಥಾಪಿಸಲು ದುಬಾರಿ ಡಿಟಾಕ್ಸ್ ಅಥವಾ ಶುದ್ಧೀಕರಣಗಳ ಅಗತ್ಯವಿಲ್ಲ. ಬದಲಾಗಿ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಸರಳ, ದೈನಂದಿನ ಆಹಾರಗಳೇ ಕರುಳಿನ ಬ್ಯಾಕ್ಟೀರಿಯವನ್ನು ಪೋಷಿಸಿ ಮರುಸಮತೋಲನಗೊಳಿಸಬಹುದು. ಮೊಸರು, ಹುದುಗಿಸಿದ ಹಿಟ್ಟುಗಳು, ಫೈಬರ್ ಅಂಶ ಹೆಚ್ಚಾಗಿರುವ ತರಕಾರಿಗಳು, ಬೆಳ್ಳುಳ್ಳಿ ಮತ್ತು ಈರುಳ್ಳಿಗಳು ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯ ಪೋಷಿಸಲು ನೆರವಾಗುತ್ತವೆ. ಕರುಳನ್ನು ಶಮನಗೊಳಿಸುವುದೆಂದರೆ ಆಹಾರಕ್ಕೆ ಮಿತಿ ಹೇರುವುದಲ್ಲ. ಸೂಕ್ತ ಮೈಕ್ರೋಬ್ ಗಳನ್ನು ಪೋಷಿಸುವುದು. ನಿತ್ಯದ ಸಣ್ಣ ಬದಲಾವಣೆಗಳಿಂದ ದೀರ್ಘಕಾಲೀನ ಸಮತೋಲನ ಸಾಧಿಸಬಹುದು.
ನಿಮ್ಮ ಜಠರದ ಆರೋಗ್ಯ ಕಾಪಾಡಬಲ್ಲ ಕೆಲವು ಆಹಾರಗಳ ವಿವರ ಹೀಗಿದೆ:
►ಮೊಸರು ಅಥವಾ ಯೋಗಾರ್ಟ್
ಮೃಣಾಲಿನಿ ಅವರು ಹೇಳುವ ಪ್ರಕಾರ ಮೊಸರಿನಲ್ಲಿ ಸಹಜವಾಗಿ ಪ್ರೊಬಯಾಟಿಕ್, ಲಾಭಕರ ಬ್ಯಾಕ್ಟೀರಿಯಗಳು ಇರುತ್ತವೆ. ಹೀಗಾಗಿ ಆರೋಗ್ಯಕರ ಕರುಳಿಗೆ ನೆರವು ನೀಡುತ್ತದೆ. ಮೊಸರು ಜಠರದ ಮೈಕ್ರೋಬಯಾಮ್ ಸಮತೋಲನ ಕಾಪಾಡುತ್ತದೆ. ಹೊಟ್ಟೆ ಉಬ್ಬುವುದನ್ನು ನಿಯಂತ್ರಿಸುತ್ತದೆ. ಜೀರ್ಣಕ್ರಿಯೆಗೆ ಬೆಂಬಲ ನೀಡುತ್ತದೆ. ಆದರೆ ರುಚಿ ಬೆರೆಸಿದ ಅಥವಾ ಸಿಹಿ ಮಾಡಿರುವುದಕ್ಕಿಂತ ತಾಜಾ ಮನೆಯಲ್ಲಿ ತಯಾರಿಸಿದ ಮೊಸರು ಉತ್ತಮ.
► ಹುದುಗಿಸಿದ ಆಹಾರಗಳು
ಇಡ್ಲಿ ಮತ್ತು ದೋಸೆ ಹಿಟ್ಟಿನಂತಹ ಹುದುಗಿಸಿದ ಆಹಾರಗಳ ಜೊತೆಗೆ ಮಜ್ಜಿಗೆ ಕರುಳಿಗೆ ಉತ್ತಮ. ಇವು ನೈಸರ್ಗಿಕವಾಗಿ ಹುದುಗಿಸುವಿಕೆಯಿಂದ ಸಿಗುವ ಆಹಾರಗಳಾದ ಕಾರಣ ಆರೋಗ್ಯಕರ ಕರುಳಿನ ಬ್ಯಾಕ್ಟೀರಿಯವನ್ನು ಪೋಷಿಸುತ್ತವೆ.
* ಕರುಳಿನಲ್ಲಿ ವೈವಿಧ್ಯತೆಯನ್ನು ಸುಧಾರಿಸುತ್ತದೆ.
* ಪೋಷಕಾಂಶಗಳ ಹೀರುವಿಕೆ ವೃದ್ಧಿಸುತ್ತದೆ.
* ಉರಿಯೂತ ಕಡಿಮೆ ಮಾಡುತ್ತದೆ.
ಭಾರತೀಯ ಆಹಾರಕ್ರಮಗಳು ಕರುಳಿಗೆ ಅನುಕೂಲಕರವಾಗಿವೆ ಎಂದು ಮೃಣಾಲಿನಿ ಹೇಳುತ್ತಾರೆ.
- ಫೈಬರ್ ಹೆಚ್ಚಾಗಿರುವ ಆಹಾರಗಳು
ಫೈಬರ್ ಹೆಚ್ಚಾಗಿರುವ ಓಟ್ಸ್, ಸಿರಿಧಾನ್ಯಗಳು ಮತ್ತು ವೈವಿಧ್ಯಮಯ ತರಕಾರಿಗಳು ನೈಸರ್ಗಿಕ ಪ್ರಿಬಯಾಟಿಕ್ಸ್ ಹೊಂದಿರುತ್ತವೆ ಇವು ಆರೋಗ್ಯಕರ ಕರುಳಿನ ಬ್ಯಾಕ್ಟೀರಿಯವನ್ನು ಪೋಷಿಸುತ್ತವೆ.
* ನಿಯಮಿತ ಕರುಳಿನ ಚಲನೆ ಸುಧಾರಿಸುತ್ತದೆ
* ಮಲಬದ್ಧತೆ ಕಡಿಮೆ ಮಾಡುತ್ತದೆ.
* ರಕ್ತದಲ್ಲಿನ ಸಕ್ಕರೆ ನಿಯಂತ್ರಣವನ್ನು ಸುಧಾರಿಸುತ್ತದೆ.
ನಿತ್ಯವೂ 25ರಿಂದ 30 ಗ್ರಾಂಗಳಷ್ಟು ಫೈಬರ್ ಸೇವನೆ ಉತ್ತಮ ಎನ್ನುತ್ತಾರೆ ಮೃಣಾಲಿನಿ.
-ಚಿಯಾ ಬೀಜಗಳು ಮತ್ತು ಪ್ಲ್ಯಾಕ್ಸ್ ಬೀಜಗಳು
ಚಿಯಾ ಮತ್ತು ಪ್ಲ್ಯಾಕ್ಸ್ ಬೀಜಗಳು ಕರಗುವ ಫೈಬರ್ಗಳನ್ನು ಮತ್ತು ಆರೋಗ್ಯಕರ ಕೊಬ್ಬಾಗಿರುವ ಒಮೆಗಾ-3ಯನ್ನು ಸಮೃದ್ಧವಾಗಿ ಹೊಂದಿರುತ್ತವೆ. ಇವು ಕರುಳಿನಲ್ಲಿ ಜೆಲ್ನಂತರ ರಚನೆಯನ್ನು ಬೆಳೆಸುತ್ತವೆ.
* ಮಲದ ಸ್ಥಿರತೆಯನ್ನು ಸುಧಾರಿಸುತ್ತದೆ.
* ಕರುಳಿನ ಉರಿಯೂತವನ್ನು ಕಡಿಮೆ ಮಾಡುತ್ತದೆ.
* ಚಯಾಪಚಯ ಆರೋಗ್ಯವನ್ನು ಬೆಂಬಲಿಸುತ್ತದೆ.
ಉತ್ತಮ ಆರೋಗ್ಯಕ್ಕಾಗಿ ಸೇವಿಸುವ ಮೊದಲು ಅವುಗಳನ್ನು ನೆನೆಸಿಟ್ಟು ಬಳಸುವುದು ಉತ್ತಮ.
-ಬೆಳ್ಳುಳ್ಳಿ ಮತ್ತು ಈರುಳ್ಳಿಗಳು
ಮೃಣಾಲಿನಿ ಪ್ರಕಾರ ಬೆಳ್ಳುಳ್ಳಿ ಮತ್ತು ಈರುಳ್ಳಿಗಳಲ್ಲಿ ನೈಸರ್ಗಿಕವಾಗಿ ಪ್ರಿಬಯಾಟಿಕ್ಸ್ಗಳು ಇರುತ್ತವೆ.
* ಗ್ಯಾಸ್ಟ್ರಿಕ್ ಸಮಸ್ಯೆ ಕಡಿಮೆ ಮಾಡುತ್ತದೆ.
* ರೋಗನಿರೋಧಕ ಶಕ್ತಿ ಸುಧಾರಿಸುತ್ತದೆ.
* ಆರೋಗ್ಯಕರ ಜೀರ್ಣಕ್ರಿಯೆಯನ್ನು ಪ್ರೋತ್ಸಾಹಿಸುತ್ತದೆ.
ಇವುಗಳಲ್ಲಿ ಉತ್ತಮ ಬ್ಯಾಕ್ಟೀರಿಯವನ್ನು ಪೋಷಿಸುವ ಇನ್ಸುಲಿನ್ ಇರುತ್ತದೆ.