ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಪ್ರಮಾಣದಲ್ಲಿ ಅರಬ್ ರಾಷ್ಟ್ರಗಳ ವಿಶ್ವವಿದ್ಯಾಲಯಗಳ ಪೈಕಿ ತುಂಬೆ ಗಲ್ಫ್ ಮೆಡಿಕಲ್ ಯೂನಿವರ್ಸಿಟಿಗೆ ಮೊದಲ ಸ್ಥಾನ
► QS ಅರಬ್ ರೀಜನ್ ರ್ಯಾಂಕಿಂಗ್ಸ್ 2027ರಲ್ಲಿ 125ನೇ ಸ್ಥಾನ; THE ಶ್ರೇಯಾಂಕದಲ್ಲೂ ಜಾಗತಿಕ ಮನ್ನಣೆ
ಅಜ್ಮಾನ್ (ಯುಎಇ): ತುಂಬೆ ಗ್ರೂಪ್ ನ ಪ್ರಮುಖ ಶೈಕ್ಷಣಿಕ ಸಂಸ್ಥೆಯಾದ ಗಲ್ಫ್ ಮೆಡಿಕಲ್ ಯೂನಿವರ್ಸಿಟಿ (GMU), 'QS ವರ್ಲ್ಡ್ ಯೂನಿವರ್ಸಿಟಿ ರ್ಯಾಂಕಿಂಗ್ಸ್: ಅರಬ್ ರೀಜನ್ 2027'ರಲ್ಲಿ ಮೊದಲ ಬಾರಿಗೆ ಸ್ಥಾನ ಪಡೆದಿದೆ.
ಈ ಶ್ರೇಯಾಂಕ ಪಟ್ಟಿಯಲ್ಲಿ ವಿಶ್ವವಿದ್ಯಾಲಯವು ಒಟ್ಟಾರೆ 125ನೇ ಸ್ಥಾನ ಗಳಿಸಿದ್ದು, ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಪ್ರಮಾಣದಲ್ಲಿ ಅರಬ್ ರಾಷ್ಟ್ರಗಳ ವಿಶ್ವವಿದ್ಯಾಲಯಗಳ ಪೈಕಿ ಮೊದಲ ಸ್ಥಾನ ಪಡೆದಿದೆ.
'ಟೈಮ್ಸ್ ಹೈಯರ್ ಎಜುಕೇಶನ್ (THE) ವರ್ಲ್ಡ್ ಯೂನಿವರ್ಸಿಟಿ ರ್ಯಾಂಕಿಂಗ್ಸ್ 2027'ರಲ್ಲಿ ಅಂತರರಾಷ್ಟ್ರೀಯ ದೃಷ್ಟಿಕೋನದ (International Outlook) ವಿಭಾಗದಲ್ಲಿ GMU ಜಾಗತಿಕವಾಗಿ ಮೊದಲ ಸ್ಥಾನ ಪಡೆದ ಕೆಲವೇ ದಿನಗಳಲ್ಲಿ ಈ ಮನ್ನಣೆ ಲಭಿಸಿದೆ. ಮೌಲ್ಯಮಾಪನಕ್ಕೊಳಪಟ್ಟ 118 ದೇಶಗಳು ಮತ್ತು ಪ್ರಾಂತ್ಯಗಳ 2,297 ವಿಶ್ವವಿದ್ಯಾಲಯಗಳ ಪೈಕಿ GMU 99.4 ಅಂಕ ಗಳಿಸಿ ಅಗ್ರಸ್ಥಾನ ಪಡೆದಿದೆ.
THE ಶ್ರೇಯಾಂಕ ಪಟ್ಟಿಯಲ್ಲಿ GMU ಸ್ಥಾನ ಪಡೆದಿರುವುದು ಇದೇ ಮೊದಲು. 2027ರ ಆವೃತ್ತಿಯಲ್ಲಿ 1001ರಿಂದ 1200ರ ಶ್ರೇಣಿಯಲ್ಲಿ ಸ್ಥಾನ ಪಡೆದಿರುವ ಯುಎಇಯ ಏಕೈಕ ವೈದ್ಯಕೀಯ ಮತ್ತು ಆರೋಗ್ಯ ವಿಜ್ಞಾನಕ್ಕೆ ಮೀಸ ಲಾದ ಯೂನಿವರ್ಸಿಟಿ ಇದಾಗಿದೆ. ವಿಭಿನ್ನ ಮೌಲ್ಯಮಾಪನ ವಿಧಾನಗಳನ್ನು ಅನುಸರಿಸುವ ಎರಡು ಸ್ವತಂತ್ರ ಶ್ರೇಯಾಂಕ ಸಂಸ್ಥೆಗಳು GMUಯ ಜಾಗತಿಕ ವ್ಯಾಪ್ತಿಯನ್ನು ಗುರುತಿಸಿರುವುದು ಗಮನಾರ್ಹ.
GMUಯಲ್ಲಿ ವಿದ್ಯಾರ್ಥಿಗಳು ವಿವಿಧ ಖಂಡಗಳಿಂದ ಬಂದ ಸಹಪಾಠಿಗಳೊಂದಿಗೆ ಕಲಿಯುವುದಷ್ಟೇ ಅಲ್ಲದೆ, ಸಮಗ್ರವಾಗಿ ಸಂಯೋಜಿತವಾಗಿರುವ ಶೈಕ್ಷಣಿಕ ಆರೋಗ್ಯ ವ್ಯವಸ್ಥೆಯ ಭಾಗವಾಗಿ ತರಬೇತಿ ಪಡೆಯುತ್ತಾರೆ. ಉಪನ್ಯಾಸ ಕೊಠಡಿಗಳಿಂದ ನೇರವಾಗಿ ತುಂಬೆ ಯೂನಿವರ್ಸಿಟಿ ಆಸ್ಪತ್ರೆ ಮತ್ತು ತುಂಬೆ ಹೆಲ್ತ್ಕೇರ್ ನೆಟ್ವರ್ಕ್ ನ ವಿವಿಧ ತರಬೇತಿ ಕೇಂದ್ರಗಳಲ್ಲಿನ ನೈಜ ವೈದ್ಯಕೀಯ ಪರಿಸರದಲ್ಲಿ ಕಲಿಯುವ ಅವಕಾಶ ಅವರಿಗೆ ಲಭ್ಯವಿದೆ. ಬಹುಸಂಸ್ಕೃತಿಯ ತಂಡಗಳಲ್ಲಿ ಮತ್ತು ಸಮಾಜದ ವಿವಿಧ ಸ್ತರಗಳ ರೋಗಿಗಳೊಂದಿಗೆ ಕಾರ್ಯನಿರ್ವಹಿಸುವ ಮೂಲಕ, ವಿದ್ಯಾರ್ಥಿಗಳು ಇಂದಿನ ವೈದ್ಯಕೀಯ ಅಭ್ಯಾಸಕ್ಕೆ ಅನುಗುಣವಾಗಿ ತರಬೇತಿ ಪಡೆಯುತ್ತಾರೆ.
'THE ಅರಬ್ ಯೂನಿವರ್ಸಿಟಿ ರ್ಯಾಂಕಿಂಗ್ಸ್ 2026'ರಲ್ಲಿ ಪರಿಗಣಿಸಲಾದ 268 ಸಂಸ್ಥೆಗಳ ಪೈಕಿ GMU 101ರಿಂದ 125ರ ಶ್ರೇಣಿಯಲ್ಲಿ ಸ್ಥಾನ ಪಡೆದಿದೆ. ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳ (UN Sustainable Development Goals–SDGs) ಸಾಧನೆಯನ್ನು ಅಳೆಯುವ 'THE ಇಂಪ್ಯಾಕ್ಟ್ ರ್ಯಾಂಕಿಂಗ್ಸ್ 2026'ರಲ್ಲಿ 1,646 ಸಂಸ್ಥೆಗಳ ಪೈಕಿ 301ರಿಂದ 400ರ ಶ್ರೇಣಿಯಲ್ಲಿ ಗುರುತಿಸಿಕೊಂಡಿದೆ.
ನಿರ್ದಿಷ್ಟವಾಗಿ, SDG 10 (ಅಸಮಾನತೆಗಳ ಕಡಿತ) ವಿಭಾಗದಲ್ಲಿ ಜಾಗತಿಕವಾಗಿ 23ನೇ ಸ್ಥಾನ, SDG 4 (ಗುಣಮಟ್ಟದ ಶಿಕ್ಷಣ) ವಿಭಾಗದಲ್ಲಿ 60ನೇ ಸ್ಥಾನ ಮತ್ತು SDG 3 (ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮ) ವಿಭಾಗದಲ್ಲಿ 64ನೇ ಸ್ಥಾನವನ್ನು ವಿಶ್ವವಿದ್ಯಾಲಯ ಪಡೆದಿದೆ. ಇದರ ಕಾಲೇಜ್ ಆಫ್ ಫಾರ್ಮಸಿ, 2026ರ QS ವಿಶ್ವವಿದ್ಯಾಲಯಗಳ ವಿಷಯವಾರು ಶ್ರೇಯಾಂಕದಲ್ಲಿ ಫಾರ್ಮಸಿ ಮತ್ತು ಫಾರ್ಮಕಾಲಜಿ ವಿಭಾಗದಲ್ಲಿ 351ರಿಂದ 400ರ ಶ್ರೇಣಿಯಲ್ಲಿ ಸ್ಥಾನ ಪಡೆದಿದೆ.
1998ರಲ್ಲಿ ಸ್ಥಾಪನೆಯಾದ GMU, ಫೌಂಡೇಶನ್ ಹಂತದ ಶಿಕ್ಷಣ ಮತ್ತು ಡಿಪ್ಲೊಮಾಗಳಿಂದ ಪದವಿ, ಸ್ನಾತ ಕೋತ್ತರ ಹಾಗೂ ಡಾಕ್ಟರೇಟ್ ಪದವಿಗಳವರೆಗೆ ಇಂಟರ್ನ್ಶಿಪ್ ಮತ್ತು ರೆಸಿಡೆನ್ಸಿ ಕಾರ್ಯಕ್ರಮಗಳು ಸೇರಿದಂತೆ 50ಕ್ಕೂ ಹೆಚ್ಚು ಶೈಕ್ಷಣಿಕ ಕಾರ್ಯಕ್ರಮಗಳನ್ನು ನೀಡುತ್ತಿದೆ. ವೈದ್ಯಕೀಯ, ದಂತವೈದ್ಯಕೀಯ, ಔಷಧವಿಜ್ಞಾನ, ನರ್ಸಿಂಗ್, ಆರೋಗ್ಯ ವಿಜ್ಞಾನ, ಆರೋಗ್ಯ ನಿರ್ವಹಣೆ ಮತ್ತು ಆರೋಗ್ಯ ರಕ್ಷಣೆಯಲ್ಲಿ ಕೃತಕ ಬುದ್ಧಿಮತ್ತೆ (AI) ಬಳಕೆಗೆ ಸಂಬಂಧಿಸಿದ ಕೋರ್ಸ್ ಗಳು ಈ ಪಟ್ಟಿಯಲ್ಲಿವೆ.
ವಿಶ್ವವಿದ್ಯಾಲಯದಲ್ಲಿ 116ಕ್ಕೂ ಹೆಚ್ಚು ರಾಷ್ಟ್ರೀಯತೆಗಳ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದು, 56 ದೇಶಗಳ ಅಧ್ಯಾಪಕರು ಬೋಧನೆ ಮಾಡುತ್ತಿದ್ದಾರೆ. ಇದರ 5,000ಕ್ಕೂ ಹೆಚ್ಚು ಪದವೀಧರರು ಪ್ರಸ್ತುತ ವಿಶ್ವದ ವಿವಿಧ ಭಾಗಗಳ ಆರೋಗ್ಯ ವ್ಯವಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
2026ರ ಜೂನ್ ನಲ್ಲಿ GMU, ಬ್ರಿಟನ್ ನ ಕ್ವಾಲಿಟಿ ಅಶ್ಯೂರೆನ್ಸ್ ಏಜೆನ್ಸಿ ಫಾರ್ ಹೈಯರ್ ಎಜುಕೇಶನ್ (QAA)ನಿಂದ ಸಾಂಸ್ಥಿಕ ಮಾನ್ಯತೆ ಪಡೆದಿದೆ. ಇದು ವರ್ಲ್ಡ್ ಫೆಡರೇಶನ್ ಫಾರ್ ಮೆಡಿಕಲ್ ಎಜುಕೇಶನ್, ಅಕ್ರೆಡಿಟೇಶನ್ ಕೌನ್ಸಿಲ್ ಫಾರ್ ಫಾರ್ಮಸಿ ಎಜುಕೇಶನ್ (ಅಮೆರಿಕ), ವರ್ಲ್ಡ್ ಫಿಸಿಯೋಥೆರಪಿ, ಆಸ್ಟ್ರೇಲಿಯನ್ ಡೆಂಟಲ್ ಕೌನ್ಸಿಲ್ ಮತ್ತು ಇನ್ಸ್ಟಿಟ್ಯೂಟ್ ಆಫ್ ಬಯೋಮೆಡಿಕಲ್ ಸೈನ್ಸಸ್ (ಬ್ರಿಟನ್)ನಿಂದ ಪಡೆದಿರುವ ಮಾನ್ಯತೆ ಗಳಿಗೆ ಮತ್ತಷ್ಟು ಬಲ ನೀಡಿದೆ. ವಿಶ್ವವಿದ್ಯಾಲಯದ ಎಲ್ಲ ಕಾರ್ಯಕ್ರಮಗಳು ಯುಎಇಯ ಕಮಿಷನ್ ಫಾರ್ ಅಕಾಡೆಮಿಕ್ ಅಕ್ರೆಡಿಟೇಶನ್ನಿಂದ ಮಾನ್ಯತೆ ಪಡೆದಿವೆ. GMUಗೆ ಅಂತರರಾಷ್ಟ್ರೀಯ ಸೇರ್ಪಡೆ ಪ್ರಶಸ್ತಿ 2026 ಮತ್ತು ಡೈವರ್ಸಿಟಿ ಚಾಂಪಿಯನ್ ಪ್ರಶಸ್ತಿ 2026 ಕೂಡ ಲಭಿಸಿವೆ.
2027ರ springs ಋತುವಿನ ಪ್ರವೇಶಾತಿ ಪ್ರಕ್ರಿಯೆ ಆರಂಭವಾಗಿದೆ. ವೈದ್ಯಕೀಯ ಮತ್ತು ಆರೋಗ್ಯ ವಿಜ್ಞಾನ ಗಳನ್ನು ಅಧ್ಯಯನ ಮಾಡಲು ಬಯಸುವ ಯುಎಇ ಹಾಗೂ ವಿದೇಶಗಳ ವಿದ್ಯಾರ್ಥಿಗಳು www.gmu.ac.ae ವೆಬ್ಸೈಟ್ ನಲ್ಲಿ ಶೈಕ್ಷಣಿಕ ಕಾರ್ಯಕ್ರಮಗಳು, ವಿದ್ಯಾರ್ಥಿವೇತನಗಳು ಮತ್ತು ಅರ್ಜಿ ಸಲ್ಲಿಸುವ ವಿವರಗಳನ್ನು ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.