ರಿಯಾದ್‌: ಕರ್ನಾಟಕ ಅನಿವಾಸಿ ಕೂಟ ರಿಯಾದ್ ವತಿಯಿಂದ ಸೌದಿ ಅರೇಬಿಯಾದ ರಿಯಾದ್‌ನ ಬತ್ತಾದಲ್ಲಿರುವ ಅಲ್ ಮಾಸ್ ಹಾಲ್‌ನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ಅನಿವಾಸಿ ಕೂಟದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ಇತರ ಗಣ್ಯರು ಭಾಗವಹಿಸಿದ್ದರು.

ಈ ಸಂದರ್ಭ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಶಾಹುಲ್ ಹಮೀದ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕರ್ನಾಟಕ ಅನಿವಾಸಿ ಕೂಟದ ನೂತನ ಪದಾಧಿಕಾರಿಗಳು:-

ರಿಯಾಝ್ ಇನೋಳಿ, ರಿಯಾದ್ — ಅಧ್ಯಕ್ಷರು ಹಾಗೂ ಸಂಸ್ಥಾಪಕ ಅಧ್ಯಕ್ಷರು

ಶಬೀರ್ ಅಲಿ ಕೆ.ಸಿ. ರೋಡ್, ರಿಯಾದ್ — ಉಪಾಧ್ಯಕ್ಷರು

ಸಿರಾಜ್ ತೋಡಾರ್, ರಿಯಾದ್ — ಪ್ರಧಾನ ಕಾರ್ಯದರ್ಶಿ

ಇಕ್ಬಾಲ್ ಪಾಣೆಮಂಗಳೂರು, ರಿಯಾದ್ — ಕೋಶಾಧಿಕಾರಿ

ಸಿದ್ದೀಕ್ ಬಂಟ್ವಾಳ — ಮಾಧ್ಯಮ ಸಂಯೋಜಕರು 

ಡಾ. ಅಬ್ದುಲ್ ಹಮೀದ್ ಪಡುಬಿದ್ರೆ, ರಿಯಾದ್ — ಕಾನೂನು ಸಲಹೆಗಾರರು

ಕಾರ್ಯಕಾರಿ ಸಮಿತಿಯ ಸದಸ್ಯರು:- 

ಉಸ್ಮಾನ್ ಅಸಫಿ, ರಿಯಾದ್, ಅಬ್ದುಲ್ ಅಝೀಝ್ ಪವಿತ್ರ, ರಿಯಾದ್ — ಕಾರ್ಯಕಾರಿ ಸಮಿತಿಯ ಸದಸ್ಯರು

ಸದಸ್ಯರುಗಳಾಗಿ :- ಹಸನ್ ಅರ್ಕಣ, ಶರೀಫ್ ತೋಡಾರ್, ಹಾಜಬ್ಬ ಅವರನ್ನು ಆಯ್ಕೆ ಮಾಡಲಾಯಿತು.

ಕರ್ನಾಟಕ ಅನಿವಾಸಿ ಕೂಟವು ಅನಿವಾಸಿ ಕನ್ನಡಿಗರ ಹಿತಾಸಕ್ತಿಯನ್ನು ಕಾಪಾಡುವುದು, ಪರಸ್ಪರ ಸಹಕಾರವನ್ನು ಬಲಪಡಿಸುವುದು ಹಾಗೂ ಸಂಕಷ್ಟದಲ್ಲಿರುವವರಿಗೆ ಸಾಧ್ಯವಾದ ನೆರವು ಒದಗಿಸುವ ಉದ್ದೇಶದಿಂದ ಕಾರ್ಯ ನಿರ್ವಹಿಸುತ್ತಿದೆ. ಇಂತಹ ಸಭೆಗಳು ಸಂಘಟನೆಯ ಒಗ್ಗಟ್ಟು, ಸೇವಾ ಮನೋಭಾವ ಮತ್ತು ಸಮಾಜಮುಖಿ ಕಾರ್ಯಗಳಿಗೆ ಮತ್ತಷ್ಟು ಪ್ರೇರಣೆ ನೀಡುತ್ತವೆ. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲಾ ಪದಾಧಿಕಾರಿಗಳು, ಸದಸ್ಯರು, ಆಹ್ವಾನಿತ ಗಣ್ಯರು ಹಾಗೂ ಹಿತೈಷಿಗಳಿಗೆ ಕೂಟದ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇವೆ ಎಂದು ಕರ್ನಾಟಕ ಅನಿವಾಸಿ ಕೂಟ ರಿಯಾದ್ ಪ್ರಕಟನೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor