ದೋಹಾ, ಅ. 16: ಉಡುಪಿ ಜಿಲ್ಲೆಯ ಪ್ರಮುಖ ಸಮಾಜ ಸೇವಕರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ಎಂ. ಇಕ್ಬಾಲ್ ಮನ್ನಾ ಅವರನ್ನು ಖತರ್‌ ನಲ್ಲಿ ಶುಕ್ರವಾರ ಸನ್ಮಾನಿಸಿ, ಗೌರವಿಸಲಾಯಿತು.

ಕರ್ನಾಟಕದ ಕರಾವಳಿ ಭಾಗದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಸೇರಿದ ಸದಸ್ಯರನ್ನು ಒಳಗೊಂಡಿರುವ SKMWA ಖತರ್‌ ಸಂಘಟನೆಯ ವತಿಯಿಂದ ಪಾರ್ಕ್ ಹೌಸ್ ಶಾಲೆಯಲ್ಲಿ ಈ ಗೌರವ ಸಮಾರಂಭವನ್ನು ಆಯೋಜಿಸಲಾಗಿತ್ತು.

ಸಮಾರಂಭದಲ್ಲಿ SKMWA ಅಧ್ಯಕ್ಷ ಇಮ್ರಾನ್ ಬಾವ, ಸಂಘಟನೆಯ ಮಾಜಿ ಉಪಾಧ್ಯಕ್ಷ ಅಬ್ದುಲ್ ಕಾಸಿಂ ಉಡುಪಿ, ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ಡಾ. ರವಿ ಶೆಟ್ಟಿ, KMCA ಉಪಾಧ್ಯಕ್ಷ ಅಶ್ಮತ್ ಅಲಿ, ತುಳುಕೂಟದ ಅಧ್ಯಕ್ಷ ವಿಜಯ್, ಮಂಗಳೂರು ಕಲ್ಚರಲ್ ಅಸೋಸಿಯೇಷನ್‌ನ ಉಪಾಧ್ಯಕ್ಷೆ ಜೊವಿಟಾ ಪಿರೇರಾ, ರಾಮಚಂದ್ರ ಶೆಟ್ಟಿ, ಇಬ್ರಾಹಿಂ ಬ್ಯಾರಿ, ನಾಸಿರ್ ಮಂಜೇಶ್ವರ, ಶೋಯೆಬ್ ಅಹ್ಮದ್, ಸಮೀರ್ ಸೇರಿದಂತೆ ಹಲವಾರು ಗಣ್ಯರು ಹಾಗೂ ಪ್ರಮುಖ ಸಮುದಾಯ ಮುಖಂಡರು ಉಪಸ್ಥಿತರಿದ್ದರು.

ಉಡುಪಿ ಜಿಲ್ಲೆಯಲ್ಲಿ ಸಮಾಜ ಸೇವೆ ಹಾಗೂ ಸಾರ್ವಜನಿಕ ಹಿತಾಸಕ್ತಿಯ ವಿವಿಧ ಕಾರ್ಯಗಳಲ್ಲಿ ತೊಡಗಿಸಿಕೊಂಡಿ ರುವ ಎಂ. ಇಕ್ಬಾಲ್ ಮನ್ನಾ ಅವರಿಗೆ ವಿದೇಶಿ ನೆಲದಲ್ಲಿ ದೊರೆತ ಈ ಗೌರವವು ಕರಾವಳಿ ಕನ್ನಡಿಗರ ಸಮುದಾಯದಲ್ಲಿ ಸಂತಸ ಮೂಡಿಸಿದೆ.

ಕಾರ್ಯಕ್ರಮದಲ್ಲಿ ಕರಾವಳಿ ಕರ್ನಾಟಕದ ಜನರ ನಡುವಿನ ಸೌಹಾರ್ದ, ಒಗ್ಗಟ್ಟು ಮತ್ತು ಪರಸ್ಪರ ಸಹಕಾರದ ಮಹತ್ವವನ್ನು ಪ್ರತಿಬಿಂಬಿಸುವ ವಾತಾವರಣ ಕಂಡುಬಂದಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor