ಅಬುಧಾಬಿ: ಬ್ಯಾರೀಸ್ ವೆಲ್ಫೇರ್ ಫೋರಂನಿಂದ ಡಾ. ತುಂಬೆ ಮೊಯ್ದಿನ್ ರಿಗೆ ಸನ್ಮಾನ
ಅಬುಧಾಬಿ: ಬ್ಯಾರೀಸ್ ವೆಲ್ಫೇರ್ ಫೋರಂನಿಂದ ಡಾ. ತುಂಬೆ ಮೊಯ್ದಿನ್ ರಿಗೆ ಸನ್ಮಾನ
Update: 2025-12-08 18:02 IST
ಅಬುಧಾಬಿ: ಯುಎಇಯಲ್ಲಿ ತಮ್ಮ ಉದ್ಯಮ ಸಾಮ್ರಾಜ್ಯವನ್ನು ಸ್ಥಾಪಿಸಿ 28 ವರ್ಷ ಪೂರೈಸಿದ ಡಾ. ತುಂಬೆ ಮೊಯ್ದಿನ್ ರವರನ್ನು ಬ್ಯಾರೀಸ್ ವೆಲ್ಫೇರ್ ಫೋರಂ ಅಬುಧಾಬಿ ಇದರ ವತಿಯಿಂದ ಸನ್ಮಾನಿಸಲಾಯಿತು.
ತುಂಬೆ ವಿಲ್ಲಾ ಶಾರ್ಜಾದಲ್ಲಿ ಏರ್ಪಡಿಸಿದ ʼಕಮ್ಯೂನಿಟಿ ಗೆಟ್ ಟುಗೆದರ್ʼ ಪಾರ್ಟಿಯಲ್ಲಿ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಡಾ. ಯು.ಟಿ. ಖಾದರ್, ಬಿಡಬ್ಲ್ಯೂ ಫ್ ಅದ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್, ಬಿಡಬ್ಲ್ಯೂ ಫ್ ನ ಇತರ ಸಹ ಪ್ರವರ್ತಕರು ತುಂಬೆ ಮೊಯ್ದಿನ್ ಅವರನ್ನು ಸನ್ಮಾನಿಸಿದರು.
ಉದ್ಯಮಿ ರಿಯಾಝ್ ಬಾವ ಮತ್ತು ಹಿದಾಯತ್ ಅಡ್ಡೂರು ಉಪಸ್ಥಿತರಿದ್ದರು .
ಹಂಝ ಕನ್ನಂಗಾರ್, ರವೂಫ್ ಸೂರಲ್ಪಾಡಿ, ಮಜೀದ್ ಆಡಿಟರ್, ನವಾಝ್ ಉಚ್ಚಿಲ್, ಜಲೀಲ್ ಗುರುಪುರ, ಮಜೀದ್ ಆತೂರ್, ಮುಜೀಬ್ ಉಚ್ಚಿಲ್, ವಿ ಕೆ ರಶೀದ್, ನಝೀರ್ ಉಬರ್, ಅನ್ಸಾರ್ ಬೆಳ್ಳಾರೆ, ನಿಝಾಮ್ ವಿಟ್ಲ ಮತ್ತು ಮುಬಾರಕ್, ಲತೀಫ್ ಉಪಸ್ಥಿತರಿದ್ದರು.