×
Ad

BCF ಅಧ್ಯಕ್ಷ ಡಾ.ಬಿ.ಕೆ.ಯೂಸುಫ್ ಅವರಿಗೆ ತುಂಬೆ ಸಮೂಹ ಸಂಸ್ಥೆಯಿಂದ ʼLIFE TIME ACHIEVEMENT AWARDʼ

Update: 2025-12-11 23:36 IST

ಅಜ್ಮಾನ್: ತುಂಬೆ ಸಂಸ್ಥೆಯ 28ನೇ ವಾರ್ಷಿಕ ಅನಿವಾಸಿ ಕನ್ನಡಿಗರ ಸ್ನೇಹ ಸಮ್ಮಿಳನ ಕೂಟದಲ್ಲಿ BCF ಅಧ್ಯಕ್ಷ ಡಾ. BK ಯೂಸುಫ್ ಅವರಿಗೆ ತುಂಬೆ ಸಮೂಹ ಸಂಸ್ಥೆಯಿಂದ ʼLIFE TIME ACHIEVEMENT AWARDʼ ನೀಡಿ ಸನ್ಮಾನಿಸಲಾಯಿತು.

ತುಂಬೆ ಗ್ರೂಪ್ ನ ಸ್ಥಾಪಕ ಅಧ್ಯಕ್ಷ ಡಾ.ತುಂಬೆ ಮೊಯ್ದಿನ್ ಅವರು ತುಂಬೆ ಸಂಸ್ಥೆಯ 28ನೇ ವಾರ್ಷಿಕದ ಅನಿವಾಸಿ ಕನ್ನಡಿಗರ ಸ್ನೇಹ ಸಮ್ಮಿಳನ ಕೂಟ ಏರ್ಪಡಿಸಿದ್ದರು.

ಮುಖ್ಯ ಅತಿಥಿಯಾಗಿ ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಭಾರತದ ಕೌನ್ಸಿಲ್ ಜನರಲ್ ಎಚ್‌.ಇ.ಸತೀಶ್ ಕುಮಾರ್ ಸಿವನ್ ಭಾಗಿಯಾಗಿದ್ದರು. ಯುಎಇಯ ಬ್ಯಾರಿ ಮುಖಂಡರು, ಕನ್ನಡಿಗ ಬಂದುಗಳು, ಉದ್ಯಮಿಗಳು ವಿವಿಧ ಸಮಾಜ ಸೇವಾ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಬಿ.ಕೆ.ಯೂಸುಫ್, BCF ದಶಕಗಳಿಂದ ಮಾಡುತ್ತಿರುವ ಸಾಮಾಜಿಕ ಸೇವೆ ಮತ್ತು ಮಾನವೀಯ ಸಹಕಾರದ ಹಿಂದೆ ಡಾ.ತುಂಬೆ ಮೊಯ್ದಿನ್ ರವರ ಅಮೂಲ್ಯ ಸಹಕಾರದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. ಡಾ. ತುಂಬೆ ಮೊಯ್ದಿನ್ ರವರು ಪ್ರತೀ ವರ್ಷ ಆರ್ಥಿಕವಾಗಿ ಹಿಂದುಳಿದ ಇಬ್ಬರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ MBBS ಕೋರ್ಸ್ ಕಲಿಯಲು ಸಂಪೂರ್ಣ ಖರ್ಚನ್ನು ಸ್ಕಾಲರ್ಷಿಪ್ ಅನ್ನು BCF ಮೂಲಕ ನೀಡುವ ಯೋಜನೆಯನ್ನು ಅವರು ಶ್ಲಾಘಿಸಿದರು.

ಈ ಸಂದರ್ಭ ಸಮಾಜ ಸೇವಾಸೇವಕ ಮುಹಮ್ಮದ್ ಮೀರಾನ್ ಅವರನ್ನೂ ಸನ್ಮಾನಿಸಲಾಯಿತು. ಬ್ಯಾರೀಸ್ ಕಲ್ಚರಲ್ ಫೋರಮ್ ವತಿಯಿಂದ ಡಾ. ತುಂಬೆ ಮೊಯ್ದಿನ್ ಅವರನ್ನೂ ಸನ್ಮಾನಿಸಲಾಯಿತು.

BCF ಸಲಹೆಗಾರ ಗಡಿಯಾರ ಗ್ರೂಪ್ ನ ಮ್ಯಾನೇಜಿಂಗ್ ಡೈರೆಕ್ಟರ್ ಇಬ್ರಾಹಿಂ ಗಡಿಯಾರ್, ನಫೀಸ್ ಗ್ರೂಪ್ ಮ್ಯಾನೇಜಿಂಗ್ ಡೈರೆಕ್ಟರ್ ಅಬು ಸಾಲಿಹ್, BCF ಉಪಾಧ್ಯಕ್ಷ ಎಂ.ಈ.ಮೂಳೂರು, ಅಬ್ದುಲ್ ಲತೀಫ್ ಮುಲ್ಕಿ, ಅಫಿಕ್ ಹುಸೈನ್, ಅಮೀರುದ್ದೀನ್, ಅಸ್ಲಾಂ ಕಾರಾಜೆ,ಯಾಕೂಬ್ ದೀವ, ಉಸ್ಮಾನ್ ಮೂಳೂರು, ಅಬ್ದುಲ್ ಲತೀಫ್ ಪುತ್ತೂರು, ನಿಯಾಝ್, ಅಶ್ರಫ್ ಸಟ್ಟಿಕಲ್, ಸಮದ್ ಬೀರಾಲಿ, ರಫೀಕ್ ಮುಲ್ಕಿ, ನವಾಝ್‌ ಕೋಟೆಕಾರ್, ಅಮೀರ್ ಹಳೆಯಂಗಡಿ, KNRI ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ, ಫರ್ ಹಾದ್, ವಿಘ್ನೇಶ್, ಡಾ.ಬಂಗೇರ, BCF Ladies Wing ಹಾಗೂ ಇತರ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News