ಪಿತ್ತಕೋಶದಲ್ಲಿ ಕಲ್ಲು ಇದೆ ಎಂದಾದರೆ ಅಲಕ್ಷಿಸುವಿರಾ? ಇಲ್ಲಿದೆ ವೈದ್ಯರ ಎಚ್ಚರಿಕೆ!
ಸಾಂದರ್ಭಿಕ ಚಿತ್ರ | Photo Credit : freepik
ಲ್ಯಾಪ್ರೊಸ್ಕೊಪಿಕ್ ಪಿತ್ತಗಲ್ಲು ತೆಗೆಯುವುದು ಅತಿ ಕಡಿಮೆ ಅಪಾಯದ ವಿಧಾನವಾಗಿರುತ್ತದೆ. ಆದರೆ ಚಿಕಿತ್ಸೆ ನೀಡದ ಪಿತ್ತಗಲ್ಲು ಅನೇಕ ಬಾರಿ ಅಪಾಯಕಾರಿಯಾಗಿ ಪರಿಣನಿಸಬಹುದು.
ಪಿತ್ತಕೋಶದ ಶಸ್ತ್ರಚಿಕಿತ್ಸಕರಾದ ಡಾ ಇಸ್ಮಾಯಿಲ್ ಖಾನ್ ಅವರು ಇನ್ಸ್ಟಾಗ್ರಾಂ ರೀಲ್ನಲ್ಲಿ ಒಬ್ಬ ರೋಗಿಯ ವಿವರವನ್ನು ಹಂಚಿಕೊಂಡಿದ್ದಾರೆ. ರೋಗಿಗೆ ಪಿತ್ತಕೋಶದ ಕಲ್ಲುಗಳು ಹೆಚ್ಚು ನೋವುಂಟು ಮಾಡುತ್ತಿರಲಿಲ್ಲ. ಹೀಗಾಗಿ ಗ್ಯಾಸ್ಟ್ರಿಕ್ ಸಮಸ್ಯೆ ಎಂದುಕೊಂಡು ಪಿತ್ತಗಲ್ಲುಗಳನ್ನು ಅಲಕ್ಷಿಸಿದ್ದ. ವಾಸ್ತವದಲ್ಲಿ ರೋಗಿಗೆ ಗಂಭೀರ ನೋವು ಇರಲಿಲ್ಲ. ಕೆಲವೊಮ್ಮೆ ಹೊಟ್ಟೆ ಉಬ್ಬರಿಸಿದಂತೆ ಆಗುತ್ತಿತ್ತು. ಅಸಿಡಿಟಿ ಸಮಸ್ಯೆ ಎಂದುಕೊಂಡಿದ್ದರು, ಊಟ ಮಾಡಿದ ನಂತರ ಹೊಟ್ಟೆ ಉಂಬಿದ ಭಾವನೆ ಬರುತ್ತಿತ್ತು. ಅಪರೂಪಕ್ಕೆ ಕೆಲವೊಮ್ಮೆ ನೋವು ಕಾಣಿಸಿಕೊಳ್ಳುತ್ತಿತ್ತು. ಆತ ನೋವನ್ನು ಗ್ಯಾಸ್ಟ್ರಿಕ್ ಸಮಸ್ಯೆ ಎಂದುಕೊಂಡು ಅಲಕ್ಷಿಸಿದ್ದರು! ಎರಡು ತಿಂಗಳ ನಂತರ ಮೃತಪಟ್ಟಿದ್ದಾರೆ.
“ದೊಡ್ಡ ಪಿತ್ತಗಲ್ಲಿನ ನೋವಿರಲಿಲ್ಲ. ಮಾರಕವಾಗೂ ಇರಲಿಲ್ಲ. ಅಪಾಯಕಾರಿ ಎಂದೂ ಅನಿಸಿರಲಿಲ್ಲ. ಹಾಗಿದ್ದರೂ ಕಳೆದ ವಾರ ಆಸ್ಪತ್ರೆಗೆ ಬಂದ ವ್ಯಕ್ತಿ ನೋವಿನಿಂದ ಪರಿಹಾರ ಬಯಸಿದ್ದ. ಗ್ಯಾಸ್ಟ್ರಿಕ್ ಗಂಭೀರವಾಗಿದೆ. ಪ್ರಬಲ ಔಷಧಿ ಕೊಡಿ ಎಂದು ಕೇಳಿದ್ದ. ಆದರೆ ಈ ಸಲ ಏನೋ ವಿಭಿನ್ನ ಸಮಸ್ಯೆ ಕಂಡುಬಂದಿತ್ತು. ನೋವು ಬೆನ್ನಿಗೆ ಹರಡಿತ್ತು. ಕಿಣ್ವಗಳು ಗಗನಕ್ಕೇರಿದ್ದವು. ಅದು ಅನಿಲದ ಸಮಸ್ಯೆಯಾಗಿರಲಿಲ್ಲ. ಪಿತ್ತಗಲ್ಲು ಮೇದೋಜೀರಕ ಗ್ರಂಥಿಯ ಉರಿಯೂತ. ಚಿಕ್ಕ ಕಲ್ಲು ಪಿತ್ತರಸನಾಳಕ್ಕೆ ಜಾರಿ ಮೇದೋಜೀರಕ ಗ್ರಂಥಿಯನ್ನು ನಿರ್ಬಂಧಿಸಿತ್ತು. ಗ್ಯಾಸ್ಟ್ರಿಕ್ ನೋವು ಕ್ರಮೇಣ ಹೊಟ್ಟೆಯಲ್ಲಿ ಉರಿಯೂತದ ಬಿರುಗಾಳಿಯಾಯಿತು. ಗಂಟೆಗಳೊಳಗೆ ರಕ್ತದೊತ್ತಡ ಇಳಿಯಿತು. ಆಮ್ಲಜನಕದ ಮಟ್ಟ ಕುಸಿಯಿತು. ಕಿಡ್ನಿ ಪ್ರತಿಸ್ಪಂದಿಸುತ್ತಿರಲಿಲ್ಲ. ಬಹು ಅಂಗ ವೈಫಲ್ಯವಾಗಿ ಮೃತಪಟ್ಟರು” ಎಂದು ವಿವರಿಸಿದರು ಖಾನ್.
“ಅತ್ಯುನ್ನತ ಮಟ್ಟದ ಐಸಿಯು, ವೆಂಟಿಲೇಟರ್, ಡಯಾಲಿಸಿಸ್, ಮಾನವನಿಂದ ಸಾಧ್ಯವಾದ ಎಲ್ಲವನ್ನೂ ಮಾಡಿದರೂ ಆತ ಬದುಕುಳಿಯಲಿಲ್ಲ. ಈ ಸಮಸ್ಯೆಯನ್ನು ಸರಳವಾಗಿ ಒಂದು ದಿನದ ಲ್ಯಾಪ್ರೊಸ್ಕೋಪಿಕ್ ಶಸ್ತ್ರಚಿಕಿತ್ಸೆಯಿಂದ ಗುಣಪಡಿಸಬಹುದಾಗಿತ್ತು. ಇದೀಗ ಜಗತ್ತಿನಲ್ಲಿ ಪಿತ್ತಕೋಶದ ಶಸ್ತ್ರಚಿಕಿತ್ಸೆಗಿಂತ ಚಿಕಿತ್ಸೆ ನೀಡದ ಪಿತ್ತಗಲ್ಲುಗಳ ಸಮಸ್ಯೆಯಿಂದ ಹೆಚ್ಚು ಮಂದಿ ಸಾಯುತ್ತಿದ್ದಾರೆ” ಎಂದು ಖಾನ್ ಅಭಿಪ್ರಾಯಪಟ್ಟಿದ್ದಾರೆ.
“ಜನರ ಪ್ರಕಾರ ಸಣ್ಣ ಪಿತ್ತಗಲ್ಲುಗಳು ಅಪಾಯಕಾರಿಯಲ್ಲ. ಗ್ಯಾಸ್ಟ್ರಿಕ್ ಸಮಸ್ಯೆಯಲ್ಲ. ಮುಂದೆ ನೋಡೋಣ ಎಂದು ತಳ್ಳಿಹಾಕಬಹುದು. ಆದರೆ, ಮೇದೋಜೀರಕ ಗ್ರಂಥಿಯ ಉರಿಯೂತ ಕಾಯುವುದಿಲ್ಲ” ಎನ್ನುತ್ತಾರೆ ವೈದ್ಯರು.
ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಕಿಮ್ಸ್ ಆಸ್ಪತ್ರೆಯ ವೈದ್ಯರಾದ ಡಾ. ಅರುಲ್ವನನ್ ನಂದನ್, “ವಾಸ್ತವದಲ್ಲಿ ಸಣ್ಣ ಕಲ್ಲುಗಳು ಹೆಚ್ಚು ಸಮಸ್ಯೆ ತರುತ್ತವೆ. ಏಕೆಂದರೆ ಅವು ಸುಲಭವಾಗಿ ಪಿತ್ತರಸ ನಾಳಕ್ಕೆ ಜಾರಿ ಮೇದೋಜೀರಕ ಗ್ರಂಥಿಯ ನಾಳವನ್ನು ನಿರ್ಬಂಧಿಸಬಹುದು. ಇದರಿಂದ ಪಿತ್ತಗಲ್ಲು ಮೇದೋಜೀರಕ ಗ್ರಂಥಿಯ ಉರಿಯೂತ ಉಂಟಾಗುತ್ತದೆ. ಈ ಸ್ಥಿತಿ ತ್ವರಿತವಾಗಿ ಉಲ್ಬಣಗೊಂಡು ಜೀವಕ್ಕೆ ಹಾನಿಯುಂಟು ಮಾಡಬಹುದು. ಅನೇಕ ರೋಗಿಗಳು ಆರಂಭಿಕ ಚಿಹ್ನೆಗಳನ್ನು ತಪ್ಪಾಗಿ ಭಾವಿಸಬಹುದು. ಹೊಟ್ಟ ಉಬ್ಬರುವುದು, ಆಸಿಡಿಡಿ, ಹೊಟ್ಟೆಯ ಮೇಲ್ಭಾಗದ ಅಸ್ವಸ್ಥತೆಯನ್ನು ಗ್ಯಾಸ್ಟ್ರಿಕ್ ಎಂದು ತಳ್ಳಿ ಹಾಕುತ್ತಾರೆ. ಇದು ಪಿತ್ತರಸದ ಉದರಶೂಲೆಯ (ಬೈಲರಿ ಕಾಲಿಕ್) ಮೊದಲ ಚಿಹ್ನೆಯಾಗಿದೆ” ಎಂದು ವಿವರಿಸಿದರು.
ಲ್ಯಾಪ್ರೊಸ್ಕೊಪಿಕ್ ಪಿತ್ತಗಲ್ಲು ತೆಗೆಯುವುದು ಅತಿ ಕಡಿಮೆ ಅಪಾಯದ ವಿಧಾನವಾಗಿರುತ್ತದೆ. ಆದರೆ ಚಿಕಿತ್ಸೆ ನೀಡದ ಪಿತ್ತಗಲ್ಲು ಅನೇಕ ಬಾರಿ ಅಪಾಯಕಾರಿಯಾಗಿ ಪರಿಣನಿಸಬಹುದು.
ಚಿಹ್ನೆಗಳನ್ನು ಪ್ರಕಟಿಸಿದ ಪಿತ್ತಗಲ್ಲುಗಳು ಇದ್ದರೂ, ಬಹಳ ಕಡಿಮೆ ಇರುತ್ತದೆ. ಬಹುತೇಕ ರೋಗಿಗಳಲ್ಲಿ ಚಿಹ್ನೆಗಳು ಕಾಣಿಸುತ್ತವೆ. ಸಾಮಾನ್ಯ ಆರಂಭಿಕ ಚಿಹ್ನೆಗಳು ಹೀಗಿವೆ,
► ಊಟದ ನಂತರ ಪದೇಪದೆ ಹೊಟ್ಟೆ ಉಬ್ಬರಿಸುವುದು
► ವಿಶೇಷವಾಗಿ ಎಣ್ಣೆಮಯ ಆಹಾರದ ನಂತರ ಅಸಿಡಿಟಿ ಅಥವಾ ಅಜೀರ್ಣ
► ಹೊಟ್ಟೆಯ ಮೇಲ್ಭಾಗ ಭಾರವಾದ ಅನುಭವ
► ಆಗಾಗ್ಗೆ ಸ್ವಲ್ಪ ವಾಕರಿಕೆ
► ಬಲಭಾಗದಲ್ಲಿ ಅಥವಾ ಮಧ್ಯೆ ಮಂದ ನೋವು
► ಗ್ಯಾಸ್ಟ್ರಿಕ್ನಂತಹ ನೋವು ಪದೇಪದೆ ಕಾಣಿಸಿಕೊಳ್ಳುವುದು
ಕೃಪೆ: indianexpress.com