×
Ad

ನಿಮಗೆ ʼಬೋರ್ʼ ಆಗಬೇಕು! ಯಾಕೆ ಗೊತ್ತೇ?

ಇಲ್ಲಿದೆ ಕಾರಣ...

Update: 2026-01-08 15:17 IST

ಸಾಂದರ್ಭಿಕ ಚಿತ್ರ (AI)

ನೀವು ಎಂದಿಗೂ ʼಬೋರ್ʼ ಆಗದೆ ಇದ್ದರೆ ನಿಮ್ಮ ಜೀವನಕ್ಕೆ ಅರ್ಥ ಕಡಿಮೆಯಾಗುತ್ತದೆ ಮತ್ತು ಖಿನ್ನತೆಗೆ ಒಳಗಾಗುವ ಸಂಭವವಿದೆ!

ಏಕಾಂಗಿಯಾಗಿರಲು ಬೋರ್ ಆಗುತ್ತದೆಯೆ? ಬೋರ್ ಆಗುವುದು ಮಾನಸಿಕ ದೋಷವಲ್ಲ. ಅದೊಂದು ವೈಶಿಷ್ಟ್ಯ ಎನ್ನುವುದು ನಿಮಗೆ ಗೊತ್ತೆ? ಹಾರ್ವರ್ಡ್ ಪ್ರೊಫೆಸರ್ ಆರ್ಥರ್ ಸಿ ಅವರು ಬೋರ್ ಆಗುವುದರ (ಬೇಜಾರು ಅಥವಾ ಏನೂ ಮಾಡದೆ ಇರುವುದು) ಬಗ್ಗೆ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಅವರು ಹೇಳುವ ಪ್ರಕಾರ ನಿಮಗೆ ಬೋರ್ ಆಗಬೇಕು. ನೀವು ಎಂದಿಗೂ ಬೋರ್ ಆಗದೆ ಇದ್ದರೆ ನಿಮ್ಮ ಜೀವನಕ್ಕೆ ಅರ್ಥ ಕಡಿಮೆಯಾಗುತ್ತದೆ ಮತ್ತು ಖಿನ್ನತೆಗೆ ಒಳಗಾಗುವ ಸಂಭವವಿದೆ!

ಆರ್ಥರ್ ಹೇಳುವ ಪ್ರಕಾರ ಬೇಜಾರಾಗುವುದಕ್ಕೆ ಉತ್ತಮ ಮುಖವೂ ಇದೆ. ಬೇಜಾರು ಎಲ್ಲರಿಗೂ ಆಗುತ್ತದೆ. ಬೋರ್ ಎನ್ನುವುದು ನಾವು ಮಿದುಳಿನಲ್ಲಿ ಅರಿವಿನಿಂದ ಆಕ್ರಮಿಸಿಕೊಳ್ಳದಿರುವ ಪ್ರವೃತ್ತಿ, ಡಿಫಾಲ್ಟ್ ಮೋಡ್ ನೆಟ್ವರ್ಕ್ ಎಂದೂ ಕರೆಯಲಾಗುವ ನಮ್ಮ ಮೆದುಳಿನ ಒಂದು ಭಾಗವನ್ನು ಬಳಸಲು ನಮ್ಮ ಆಲೋಚನಾ ವ್ಯವಸ್ಥೆಯನ್ನು ಅದು ಬದಲಿಸುತ್ತದೆ. ಅದು ಒಳ್ಳೆಯ ಅಭಿರುಚಿಯಂತೆ ಕಾಣಿಸುತ್ತದೆ. ವಾಸ್ತವದಲ್ಲಿ ಅಲ್ಲ.

ಡಿಫಾಲ್ಟ್ ಮೋಡ್ ನೆಟ್ವರ್ಕ್ ಎಂದರೇನು?

ನಿಮಗೆ ಬೇರೇನೂ ಆಲೋಚನೆ ಮಾಡಲು ಇಲ್ಲದೆ ಇದ್ದಾಗ ತೆರೆದುಕೊಳ್ಳುವ ಮೆದುಳಿನ ರಚನೆಗಳೇ ಡಿಫಾಲ್ಟ್ ಮೋಡ್ ನೆಟ್ವರ್ಕ್. ಉದಾಹರಣೆಗೆ, ನಿಮ್ಮ ಫೋನ್ ಜೊತೆಗೆ ತರಲು ಮರೆತಿದ್ದೀರಿ. ಆಗಲೇ ನೀವು ಬೆಳಕಿನಲ್ಲಿ ಕೂರುವುದು. ಆಗ ನಿಮ್ಮ ಡಿಫಾಲ್ಟ್ ಮೋಡ್ ನೆಟ್ವರ್ಕ್ ತೆರೆದುಕೊಳ್ಳುತ್ತದೆ. ಆದರೆ, ನಮಗೆ ಅದು ಇಷ್ಟವಾಗುವುದಿಲ್ಲ.

ಹಾರ್ವರ್ಡ್ ನ ಮನಶ್ಶಾಸ್ತ್ರ ವಿಭಾಗದ ಡ್ಯಾನ್ ಗಿಲ್ಬರ್ಟ್ ಒಂದು ಅಧ್ಯಯನ ನಡೆಸಿದ್ದರು. ಅವರ ಪ್ರಯೋಗದಲ್ಲಿ ಜನರು 15 ನಿಮಿಷಗಳ ಕಾಲ ಮೌನವಾಗಿ ಒಂದು ಕೋಣೆಯಲ್ಲಿ ಕುಳಿತುಕೊಳ್ಳಬೇಕಾಗಿತ್ತು. ಏನೂ ಮಾಡದೆ ಸುಮ್ಮನೆ ಕೂರಬೇಕು ಎಂದು ಸೂಚನೆ ನೀಡಲಾಗಿತ್ತು. ಕೋಣೆಯಲ್ಲಿ ಮಾಡಲು ಏನೂ ಇರಲಿಲ್ಲ. ಅವರ ಮುಂದೆ ಒಂದು ಬಟನ್ ಇಡಲಾಗಿತ್ತು. ಅದನ್ನು ಒತ್ತಿದರೆ ನೋವುಂಟು ಮಾಡುವ ವಿದ್ಯುತ್ ಆಘಾತ ಕೊಡುತ್ತಿತ್ತು. ಬೋರ್ ಹೊಡೆಸಿಕೊಂಡು ಅಲ್ಲಿ ಕೂರಬೇಕು ಅಥವಾ ಶಾಖ್ ಹೊಡೆಸಿಕೊಳ್ಳಬೇಕು ಎನ್ನುವುದು ಆಯ್ಕೆಯಾಗಿತ್ತು. ಬಹುತೇಕರು ಏನೂ ಆಲೋಚಿಸದೆ ಸುಮ್ಮನೆ ಕೂರುವ ಬದಲಾಗಿ ಶಾಕ್ ಹೊಡೆಸಿಕೊಂಡಿದ್ದರು.

ಬೋರ್ ಹೊಂದುವುದು ಭಯಾನಕವೆ?

ತಜ್ಞರು ಹೇಳುವ ಪ್ರಕಾರ ನಮಗೆ ಬೋರ್ ಹೊಂದುವುದು ಬೇಕಿಲ್ಲ. ಅದು ಭಯಾನಕ ಎಂದುಕೊಳ್ಳತ್ತೇವೆ. ಬೋರ್ ಹೊಂದುವುದು ಅಷ್ಟು ಕೆಟ್ಟದೆ? ಡಿಫಾಲ್ಟ್ ಮೋಡ್ ನೆಟ್ವರ್ಕ್ ನಮಗೆ ಅಹಿತಕರವಾದ ವಿಷಯಗಳತ್ತ ಯೋಚಿಸುವಂತೆ ಮಾಡುತ್ತದೆ. ಹೀಗಾಗಿ ಬೋರ್ ಹೊಡೆಸಿಕೊಳ್ಳಲು ಯಾರೂ ಬಯಸದೆ ಇರಬಹುದು. ಏನೂ ಆಲೋಚಿಸದೆ ಇರುವಾಗ ನಿಮ್ಮ ಮನಸ್ಸು ಅಲೆದಾಡುತ್ತಾ ಆಲೋಚಿಸುತ್ತಾ ಹೋಗುತ್ತದೆ. ಉದಾಹರಣೆಗೆ ನಿಮ್ಮ ಜೀವನದ ದೊಡ್ಡ ಪ್ರಶ್ನೆಗಳು. ಜೀವನ ಎಂದರೇನು? ಹೀಗೆ ಬೋರ್ ಹೊಂದಿದಾಗ ಅಹಿತಕರವಾದ ಅಸ್ತಿತ್ವದ ಪ್ರಶ್ನೆಗಳು ಏಳಬಹುದು.

ಆದರೆ ಹೀಗೆ ಆಲೋಚಿಸುವುದು ನಿಜಕ್ಕೂ ಮುಖ್ಯವಾಗುತ್ತದೆ ಮತ್ತು ಬಹಳ ಉತ್ತಮ ಬೆಳವಣಿಗೆ ಎನ್ನುತ್ತಾರೆ ತಜ್ಞರು. “ನಮ್ಮ ಸಮಾಜದಲ್ಲಿ ಖಿನ್ನತೆ ಮತ್ತು ಆತಂಕ ಅತಿ ಹೆಚ್ಚು ಇರಲು ಮುಖ್ಯ ಕಾರಣವೆಂದರೆ ಜನರಿಗೆ ಜೀವನದ ಅರ್ಥ ಗೊತ್ತಿಲ್ಲ. ಹಿಂದಿನ ತಲೆಮಾರಿನವರಲ್ಲಿ ಈ ಸಮಸ್ಯೆ ಕಡಿಮೆ ಇತ್ತು. ದತ್ತಾಂಶಗಳೆಲ್ಲವೂ ಇದನ್ನೇ ಬೊಟ್ಟುಮಾಡುತ್ತಿದ್ದರೂ ನಾವು ನೋಡಲು ಸಿದ್ಧರಿಲ್ಲ. ಏಕೆ ಹೀಗೆ?” ಎಂದು ಪ್ರಶ್ನಿಸುತ್ತಾರೆ ಆರ್ಥರ್.

ಡಿಫಾಲ್ಟ್ ಮೋಡ್ ನೆಟ್ವರ್ಕ್ ಮುಚ್ಚಬೇಡಿ

ನಾವು ಬೋರ್ ಹೊಡೆಸುವುದರಿಂದ ತಪ್ಪಿಸಿಕೊಳ್ಳುವ ದಾರಿಯನ್ನು ಕಂಡುಕೊಂಡಿದ್ದೇವೆ. ನಮ್ಮ ಮಿದುಳಿನ ಡಿಫಾಲ್ಟ್ ಮೋಡ್ ನೆಟ್ವರ್ಕ್ ಅನ್ನು ಪೂರ್ಣವಾಗಿ ಮುಚ್ಚುವಲ್ಲಿ ಸಮರ್ಥರಾಗಿದ್ದೇವೆ. 15 ಸೆಕೆಂಡುಗಳ ಕಾಲ ಕಾಯಬೇಕಾಗಿ ಬಂದಾಗಲೂ, ನಾವು ಬದಲಾವಣೆಯ ಬೆಳಕು ಕಾಣಲು ಸಾಧ್ಯವಿಲ್ಲ. ಏಕೆಂದರೆ ರಸ್ತೆಯಲ್ಲಿ ನಿಂತಿದ್ದಾಗಲೂ ಜೊತೆಗೆ ನಮ್ಮ ಪಾಕೆಟ್ ನಲ್ಲಿರುವ ಪರದೆಯನ್ನು ಹಿಡಿದಿರುತ್ತೇವೆ.

ಆರ್ಥರ್ ಹೇಳುವ ಪ್ರಕಾರ “ಡಿಫಾಲ್ಟ್ ಮೋಡ್ ನೆಟ್ವರ್ಕ್ ಸ್ವಲ್ಪ ಅಹಿತಕರ ಭಾವನೆ ಎದುರಿಸಬಹುದು ಎನ್ನುವುದಕ್ಕಾಗಿ ಬೋರ್ ಆಗದಂತೆ ಪ್ರಯತ್ನಿಸಲಾಗುತ್ತದೆ. ಏಕೆಂದರೆ ನೀವು ಆಲೋಚಿಸಲಾಗದ ಪ್ರಶ್ನೆಗಳನ್ನು ಅದು ಕಳುಹಿಸುತ್ತದೆ. ನೀವು ಅದನ್ನು ಪರಿಹರಿಸಲು ಸಾಧ್ಯವಾಗುವುದಿಲ್ಲ. ಅದೇ ದೊಡ್ಡ ಸಮಸ್ಯೆ. ಪ್ರತಿ ಬಾರಿ ಬೋರ್ ಹೊಡೆದಾಗ ನಿಮ್ಮ ಫೋನ್ ಅನ್ನು ಹೊರತೆಗೆದರೆ, ಅರ್ಥ ಕಂಡುಕೊಳ್ಳುವುದು ಇನ್ನಷ್ಟು ಕಠಿಣವೆನಿಸುತ್ತದೆ. ಅದೇ ಖಾಲಿತನದ ಅನುಭವ ಮತ್ತು ಖಿನ್ನತೆ ಮತ್ತು ಆತಂಕದಂತಹ ಸಮಸ್ಯೆಯಾಗಿ ಪರಿವರ್ತನೆಯಾಗುತ್ತದೆ.”

ಬೋರ್ ಆಗುವುದು ಅತ್ಯಗತ್ಯ

ನೀವು ಬೋರ್ ಆಗಲು ಬಯಸುವುದಿಲ್ಲ ನಿಜ. ಆದರೆ ನೀವು ಬೋರ್ ಆಗಬೇಕಿದೆ. ಹೆಚ್ಚು ಬೋರ್ ಆಗಿ. ನಾಳೆ ಎದ್ದು ಜಿಮ್ಗೆ ಹೋಗುವಾಗ ಫೋನ್ ಜೊತೆಗೆ ಕೊಂಡೊಯ್ಯಬೇಡಿ. ವ್ಯಾಯಾಮ ಮಾಡುವಾಗ ಪಾಡ್ಕಾಸ್ಟ್ ಕೇಳದೆ ಇರುವುದು ಮಾಡಬಹುದೆ? ನಿಮ್ಮ ಆಲೋಚನೆಯಲ್ಲಿ ಮುಳುಗಿ. ಸಾಧನಗಳಿಲ್ಲದೆ ಕೆಲಸ ಮಾಡುವಾಗ ಬಹಳ ಉತ್ತಮ ಕಲ್ಪನೆಗಳು ನಿಮಗೆ ಮೂಡಬಹುದು. ರೇಡಿಯೋ ಕೇಳದೆ ಪ್ರಯಾಣ ಮಾಡಿ. 15 ನಿಮಿಷವನ್ನು ಮೀರಿ ಬೋರ್ ಆಗುವುದನ್ನು ಕಲಿಯಿರಿ. ನಿಮ್ಮ ಜೀವನವೇ ಬದಲಾಗುವುದನ್ನು ಕಾಣುವಿರಿ. ನಿಮ್ಮ ಜೀವನದ ಸಾಮಾನ್ಯ ವಿಚಾರಗಳತ್ತ ಬೇಜಾರಾಗುವುದು ಕಡಿಮೆಯಾಗಲಿದೆ. ಬೋರ್ ಆಗುವ ಕೌಶಲ್ಯವನ್ನು ಕಲಿತರೆ ಉದ್ಯೋಗದತ್ತ ಬೋರ್ ಆಗುವುದು ಕಡಿಮೆಯಾಗಲಿದೆ. ಸಂಬಂಧಗಳಲ್ಲಿ ಬೋರ್ ಹೊಡೆಯದು. ನಿಮ್ಮ ಸುತ್ತಮುತ್ತಲ ವಿಚಾರಗಳತ್ತ ಬೇಜಾರು ಕಡಿಮೆಯಾಗಲಿದೆ.

ಫೋನ್ ಕೆಳಗಿಟ್ಟರೆ ಜೀವನ ಸುಗಮ

ತಜ್ಞರ ಪ್ರಕಾರ ಭೋಜನ ಮಾಡುವಾಗ, ಮಲಗುವಾಗ ಫೋನ್ ಬದಿಗಿರಿಸಿ. ಸಾಮಾಜಿಕ ಜೀವನದಲ್ಲಿ ಬದಲಾವಣೆ ಕಾಣುವಿರಿ. ಆದರೆ ಫೋನ್ ಹಿಡಿಯುವ ಚಟ ಅಷ್ಟು ಸುಲಭದಲ್ಲಿ ಬಿಡುಗಡೆಸಿಗದು. ಫೋನ್ ತೆಗೆದುಕೊಳ್ಳುವ ಆತುರವಾಗುತ್ತದೆ. ಆದರೆ ನಿಧಾನವಾಗಿ ಬೋರ್ ಹೊಂದುವುದು ಅಭ್ಯಾಸವಾದ ಮೇಲೆ ಎಲ್ಲವೂ ಶಾಂತಗೊಳ್ಳುತ್ತದೆ. ಜಗತ್ತು ಫೋನ್ ಮೂಲಕ ಸಂಪರ್ಕವಾಗಿರುವ ಕಾರಣದಿಂದ ನಾವು ಫೋನ್ ಹಿಡಿಯಲೇಬೇಕು. ಆದರೆ ಅಗತ್ಯವಿದ್ದಾಗ ಮಾತ್ರ. ಸಾಧನದೊಂದಿಗೇ ತಿರುಗುವ ಅಗತ್ಯವಿಲ್ಲ. ಇಂತಹ ಅಭ್ಯಾಸಗಳು ಬಹಳ ಒಳ್ಳೆಯದು.

ಆಹಾರದಲ್ಲಿ ಉಪವಾಸ ಮಾಡುವ ಹಾಗೆ ಸಾಮಾಜಿಕ ಜಾಲತಾಣಗಳಿಂದಲೂ ಉಪವಾಸ ಮಾಡಿ. ಮನಸ್ಸು ಇನ್ನಷ್ಟು ಹಗುರವಾಗುತ್ತದೆ. ತುರ್ತು ಅಗತ್ಯಗಳಿಗೆ ಫೋನ್ ಬೇಕಾಗುತ್ತದೆ ಎನ್ನುವ ನೆಪ ಹೂಡಬೇಡಿ. ಸಾಮಾಜಿಕ ಜಾಲತಾಣಗಳಲ್ಲಿ ಏನಾಗುತ್ತಿದೆ ಎಂದು ತಿಳಿದುಕೊಳ್ಳದೆ ಇದ್ದರೆ ಏನೂ ಸಮಸ್ಯೆಯಾಗದು. ಸುದ್ದಿ ತಿಳಿದುಕೊಳ್ಳಲು ತುರ್ತು ಬೇಕಾಗಿಲ್ಲ. ನಿಮ್ಮ ಅಜ್ಜಿ-ತಾತಂದಿರಿಗೆ ಜಗತ್ತಿನಲ್ಲಿ ಏನಾಗುತ್ತಿದೆ ಎಂದು ತಿಳಿದಿಲ್ಲ. ಆದರೂ ಅವರು ಆರಾಮವಾಗಿ ನೆಲೆಸಿದ್ದಾರೆ. ಹೀಗಾಗಿ ಮಕ್ಕಳಿಗೂ ಫೋನ್ ಕೆಳಗಿರಿಸಲು ಹೇಳಿ, ನೀವೂ ಫೋನ್ ಕೆಳಗಿಡಿ ಎನ್ನುತ್ತಾರೆ ಆರ್ಥರ್.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News