×
Ad

ಚಳಿಗಾಲದಲ್ಲಿ ಚರ್ಮದ ರಕ್ಷಣೆ | ನೈಸರ್ಗಿಕ ವಿಟಮಿನ್ C ಪಡೆದುಕೊಳ್ಳುವುದು ಹೇಗೆ?

Update: 2026-01-02 20:22 IST

ಸಾಂದರ್ಭಿಕ ಚಿತ್ರ | Photo Credit : freepik

ನೈಸರ್ಗಿಕವಾದ ವಿಟಮಿನ್ C ಗಳು UV ಕಿರಣಗಳ ಹಾನಿಯನ್ನು ತಡೆದು ಸುರಕ್ಷಾ ಜಾಲವನ್ನು ಒದಗಿಸುತ್ತವೆ. ನಿಮ್ಮ SPF ಅಡಿಯಲ್ಲಿ ಹಚ್ಚುವುದರಿಂದ ಚಳಿಗಾಲದ ಸೂರ್ಯನಿಂದ ಉತ್ತಮ ರಕ್ಷಣೆ ಪಡೆಯಬಹುದು.

ಚಳಿಗಾಲದಲ್ಲಿ ಚರ್ಮದ ರಕ್ಷಣೆ ಬಹಳ ಕಷ್ಟ. ಹೊರಗೆ ಗಾಳಿ ಒಣಗಿರುತ್ತದೆ; ಇದರಿಂದ ಮುಖದ ಚರ್ಮ ಸಿಪ್ಪೆ ಏಳಬಹುದು ಹಾಗೂ ಬಣ್ಣ ಮಸುಕಾಗಬಹುದು. ಇಂತಹ ಸಂದರ್ಭಗಳಲ್ಲಿ ಚರ್ಮದ ಹೊಳಪಿಗೆ ವಿಟಮಿನ್ C ಬಹಳ ಉಪಯುಕ್ತ. ಆದರೆ 2025ರಲ್ಲಿ ವಿಟಮಿನ್ C ಇರುವ ಸಿಂಥೆಟಿಕ್ ಸಿರಂಗಳ ಬಳಕೆಯಿಂದ ಹಿಡಿದು ಇಡೀ ವಿಟಮಿನ್ C ಸಸ್ಯವನ್ನೇ ಬಳಸುವವರೆಗೆ ಚರ್ಚೆಗಳು ನಡೆದಿವೆ.

ವಿಟಮಿನ್ Cಯ ಸಹಜ ಮೂಲಗಳಾದ ಕಾಕಡು ಪ್ಲಮ್, ರೋಸ್ಹಿಪ್, ಸೀ ಬಕ್ಹಾರ್ನ್ (ಸಮುದ್ರ ಮುಳ್ಳುಗಿಡ) ಹಾಗೂ ನೆಲ್ಲಿಕಾಯಿ ಮೊದಲಾದವುಗಳ ಬಳಕೆಯ ಬಗ್ಗೆ ಗಮನ ಸೆಳೆಯಲಾಗಿದೆ. ಕಾಕಡು ಪ್ಲಮ್ ಆಸ್ಟ್ರೇಲಿಯ ಮೂಲದ ಹಣ್ಣಾಗಿದ್ದು, ಕಿತ್ತಳೆಗಿಂತ ನೂರು ಪಟ್ಟು ಹೆಚ್ಚು ವಿಟಮಿನ್ C ಹೊಂದಿದೆ. ರೋಸ್ಹಿಪ್ ಗುಲಾಬಿ ಹೂವಿನ ಕೆಳಗೆ ಬೆಳೆಯುವ ಹಣ್ಣಾಗಿರುತ್ತದೆ. ನಿಮ್ಮ ಚರ್ಮದಲ್ಲಿ ಸ್ಪಷ್ಟ ಬದಲಾವಣೆ ಬೇಕೆಂದರೆ ವಿಜ್ಞಾನಾಧಾರಿತ ಈ ಐದು ಲಾಭಗಳನ್ನು ಗಮನಿಸಬಹುದು.

►ವಿಟಮಿನ್ C ಅತಿ ಆಮ್ಲೀಯವಾಗಿರಬಾರದು

ಚಳಿಗಾಲದಲ್ಲಿ ಚರ್ಮ ಈಗಾಗಲೇ ದುರ್ಬಲವಾಗಿರುತ್ತದೆ. ಅಧಿಕ ಶಕ್ತಿಯ ಸಿಂಥೆಟಿಕ್ ವಿಟಮಿನ್ C (ಎಲ್–ಅಸ್ಕಾರ್ಬಿಕ್ ಆಮ್ಲ) ಅತಿಯಾಗಿ ಆಮ್ಲೀಯವಾಗಿದ್ದು ಚರ್ಮಕ್ಕೆ ಉರಿಯಬಹುದು. ಚರ್ಮ ಕೆಂಪಾಗುವುದು ಹಾಗೂ ಸಿಪ್ಪೆ ಎದ್ದುಬರುವ ಸಾಧ್ಯತೆ ಇದೆ. ಒಣಗಿದ ಚರ್ಮಕ್ಕೆ ಇಂತಹ ತೀವ್ರ ಚಿಕಿತ್ಸೆ ಅಗತ್ಯವಿಲ್ಲ.

ಸಹಜ ಮೂಲಗಳಾದ ರೋಸ್ಹಿಪ್ ಮತ್ತು ಸಮುದ್ರ ಮುಳ್ಳುಗಿಡ ಕೊಬ್ಬಿನ ಆಮ್ಲಗಳಲ್ಲಿ ಸಮೃದ್ಧವಾಗಿದ್ದು, ಜೈವಿಕ ಫ್ಲಾವನಾಯ್ಡ್‌ಗಳನ್ನು (ಸಸ್ಯ ಸಂಯುಕ್ತಗಳು) ಹೊಂದಿರುತ್ತವೆ. ಅವು ಚರ್ಮದಿಂದ ಸಹಜ ಎಣ್ಣೆಗಳನ್ನು ತೆಗೆದುಹಾಕದೇ ಹೊಳಪು ನೀಡುತ್ತವೆ. ಚರ್ಮದ ಮೇಲೆ ದಾಳಿ ಮಾಡದೇ ಸೌಮ್ಯವಾಗಿ ಕಾರ್ಯನಿರ್ವಹಿಸುತ್ತವೆ.

►ವಿಟಮಿನ್ C ತೇವಾಂಶವನ್ನು ಹೊರಗೆ ಸೂಸುತ್ತದೆ

ಬಹುತೇಕ ಎಲ್ಲಾ ಹೊಳಪು ನೀಡುವ ಸಿರಂಗಳು ಚರ್ಮವನ್ನು ಒಣಗಿಸುತ್ತವೆ. ನೈಸರ್ಗಿಕ ವಿಟಮಿನ್ C ಕೇವಲ ವಿಟಮಿನ್ C ಮಾತ್ರವಾಗಿರುವುದಿಲ್ಲ. ಉದಾಹರಣೆಗೆ, ರೋಸ್ಹಿಪ್ ಎಣ್ಣೆಯಲ್ಲಿ ವಿಟಮಿನ್ ಇ ಮತ್ತು ಓಮೆಗಾ ಕೊಬ್ಬಿನ ಆಮ್ಲಗಳು ಇರುತ್ತವೆ. ಈ ಸಂಯೋಜನೆ ಕಪ್ಪು ಕಲೆಗಳನ್ನು ಕಡಿಮೆ ಮಾಡುವ ಜೊತೆಗೆ ಚರ್ಮದ ತೇವಾಂಶವನ್ನು ಉಳಿಸುತ್ತದೆ.

►ನೈಸರ್ಗಿಕ ವಿಟಮಿನ್‌ ಗಳು ಉತ್ತಮ

ನಿಮ್ಮ ವಿಟಮಿನ್ C ಸಿರಂ ತಿಂಗಳುಗಳಾದ ಬಳಿಕ ಕಿತ್ತಳೆ ಬಣ್ಣಕ್ಕೆ ತಿರುಗಿ ವಾಸನೆ ಹೊಡೆಯುತ್ತದೆ. ಇದಕ್ಕೆ ಮುಖ್ಯ ಕಾರಣ ಆಕ್ಸಿಡೇಶನ್. ಸಿಂಥೆಟಿಕ್ ವಿಟಮಿನ್ ಅಸ್ಥಿರವಾಗಿದ್ದು, ಗಾಳಿಯ ಸಂಪರ್ಕಕ್ಕೆ ಬಂದಾಗ ತನ್ನ ಗುಣವನ್ನು ಕಳೆದುಕೊಳ್ಳುತ್ತದೆ.

ಇಡೀ ಸಸ್ಯದಿಂದ ದೊರೆಯುವ ನೈಸರ್ಗಿಕ ವಿಟಮಿನ್ C ಸಸ್ಯದಲ್ಲಿರುವ ಆಂಟಿಆಕ್ಸಿಡೆಂಟ್‌ಗಳಿಂದ ಸ್ಥಿರವಾಗಿರುತ್ತದೆ. ಕಾಕಡು ಪ್ಲಮ್ ಅಥವಾ ಅಸೆರೊಲ ಚೆರ್ರಿಗಳು ಹೆಚ್ಚು ಕಾಲ ತಾಜವಾಗಿರುತ್ತವೆ, ಏಕೆಂದರೆ ಅವುಗಳಲ್ಲಿ ಫೈಟೊನ್ಯೂಟ್ರಿಯಂಟ್ಸ್ ಇರುತ್ತವೆ. ಅದರ ಪರಿಣಾಮವಾಗಿ ಜನವರಿಯಲ್ಲಿ ಹಚ್ಚಿದಾಗಲೂ ನವೆಂಬರ್‌ನಲ್ಲಿ ಹಚ್ಚಿದಂತೆಯೇ ಪರಿಮಳ ಉಳಿಯುತ್ತದೆ.

►ಸೂರ್ಯನಿಂದ ರಕ್ಷಣೆ ಒದಗಿಸುತ್ತದೆ

ಚಳಿಗಾಲದಲ್ಲಿ ಸೂರ್ಯನ UVB (ಸುಡುವ) ಕಿರಣಗಳು ದುರ್ಬಲವಾಗಿದ್ದರೂ, UVA (ವಯಸ್ಸು ಹೆಚ್ಚಿಸುವ) ಕಿರಣಗಳು ತೀಕ್ಷ್ಣವಾಗಿರುತ್ತವೆ. ನೈಸರ್ಗಿಕ ವಿಟಮಿನ್ Cಯಲ್ಲಿ ಇರುವ ಆಂಟಿಆಕ್ಸಿಡೆಂಟ್‌ಗಳು ಸ್ವತಂತ್ರ ಕಣಗಳನ್ನು ತಟಸ್ಥೀಕರಿಸುತ್ತವೆ.

UV ಕಿರಣಗಳಿಂದ ಉಂಟಾಗುವ ಅಸ್ಥಿರ ಅಣುಗಳು ಮತ್ತು ಮಾಲಿನ್ಯವು ಚರ್ಮದ ಕೊಲಾಜೆನ್ ಅನ್ನು ಹಾನಿಗೊಳಿಸುತ್ತವೆ. ನೈಸರ್ಗಿಕ ವಿಟಮಿನ್ Cಗಳು ಈ ಹಾನಿಯನ್ನು ತಡೆದು ಸುರಕ್ಷಾ ಜಾಲವನ್ನು ಒದಗಿಸುತ್ತವೆ. ನಿಮ್ಮ SPF ಅಡಿಯಲ್ಲಿ ಹಚ್ಚುವುದರಿಂದ ಚಳಿಗಾಲದ ಸೂರ್ಯನಿಂದ ಹೆಚ್ಚುವರಿ ರಕ್ಷಣೆ ಸಿಗುತ್ತದೆ.

►ಉತ್ತಮ ಹೀರುವಿಕೆ ಅಗತ್ಯ

ಚರ್ಮವು ಸ್ವಾಭಾವಿಕವಾಗಿ ಜಲನಿರೋಧಕವಾಗಿದೆ. ಸಿಂಥೆಟಿಕ್ ಅಣುಗಳು ಚರ್ಮದ ಮೇಲೆಯೇ ಉಳಿದು, ಆಳವಾಗಿ ತೂರಿ ರಕ್ಷಣೆ ನೀಡುವುದಿಲ್ಲ. ನೈಸರ್ಗಿಕ ವಿಟಮಿನ್‌ಗಳಲ್ಲಿ ಜೈವಿಕ ಫ್ಲಾವನಾಯ್ಡ್‌ಗಳು (ಸಸ್ಯ ಸಂಯುಕ್ತಗಳು) ಇರುವುದರಿಂದ ದೇಹ ಅವನ್ನು ಬೇಗ ಗುರುತಿಸುತ್ತದೆ. ಅಂದರೆ ಚರ್ಮ ಅವನ್ನು ವೇಗವಾಗಿ ಹೀರಿಕೊಳ್ಳುತ್ತದೆ.

ಒಮ್ಮೆ ಹೀರಿಕೊಂಡ ಬಳಿಕ ಕೊಲಾಜೆನ್ ಸಂಶ್ಲೇಷಣೆಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ನಿಮ್ಮ ಈಗಿನ ವಿಟಮಿನ್ C ಸಿರಂ ಚರ್ಮವನ್ನು ಒಣಗಿಸುತ್ತಿದ್ದರೆ, ಮೂಲದಲ್ಲೇ ಬದಲಾವಣೆ ಮಾಡಿಕೊಳ್ಳಿ. ಕಾಕಡು ಪ್ಲಮ್, ರೋಸ್ಹಿಪ್, ಸೀ ಬಕ್ಹಾರ್ನ್ ಅಥವಾ ನೆಲ್ಲಿಕಾಯಿ ಅಂಶಗಳಿರುವ ಉತ್ಪನ್ನಗಳನ್ನು ಆಯ್ಕೆ ಮಾಡಬಹುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News