×
Ad

ವಲಸಿಗರಿದ್ದ ಬಸ್ಸು ಅಪಘಾತ: ಮಗುವಿನ ಸಹಿತ 7 ಮಂದಿ ಮೃತ್ಯು

Update: 2023-10-14 23:24 IST

ಬರ್ಲಿನ್: ವಲಸಿಗರು ಪ್ರಯಾಣಿಸುತ್ತಿದ್ದ ಮಿನಿಬಸ್ ಅಪಘಾತಕ್ಕೀಡಾಗಿ 6 ವರ್ಷದ ಮಗುವಿನ ಸಹಿತ 7 ಮಂದಿ ಮೃತಪಟ್ಟು ಇತರ ಹಲವರು ಗಾಯಗೊಂಡಿರುವ ಪ್ರಕರಣ ಜರ್ಮನಿಯ ಬವಾರಿಯಾ ಪ್ರದೇಶದಲ್ಲಿ ವರದಿಯಾಗಿದೆ.

ಆಸ್ಟ್ರಿಯಾ- ಜರ್ಮನಿ ಗಡಿಭಾಗದ ಸಮೀಪದಲ್ಲಿರುವ ಪೊಲೀಸ್ ಚೆಕ್ ಪೋಸ್ಟ್ ನಲ್ಲಿ ಪೊಲೀಸರ ಸೂಚನೆಯನ್ನು ಧಿಕ್ಕರಿಸಿ ಶರವೇಗದಿಂದ ಮುಂದಕ್ಕೆ ಧಾವಿಸಿದ ಮಿನಿಬಸ್ಸು ಚಾಲಕನ ನಿಯಂತ್ರಣ ತಪ್ಪಿ ರಸ್ತೆಬದಿಯ ತಡೆಗೋಡೆಗೆ ಡಿಕ್ಕಿಯಾಗಿ ಪಲ್ಟಿಯಾಗಿದೆ. ಬಸ್ಸಿನ ಮೂಲಕ ವಲಸಿಗರ ಕಳ್ಳಸಾಗಣೆ ನಡೆಸುತ್ತಿದ್ದ ಶಂಕೆಯಿದ್ದು ಬಸ್ಸಿನ ಚಾಲಕ ಹಾಗೂ ಶಂಕಿತ ಕಳ್ಳಸಾಗಣೆದಾರ ಗಾಯಗೊಂಡವರಲ್ಲಿ ಸೇರಿದ್ದಾರೆ. ಹೆಚ್ಚಿನ ಮಾಹಿತಿ ತನಿಖೆಯ ಬಳಿಕ ದೊರೆಯಬಹುದು. ಬಸ್ಸಿನಲ್ಲಿದ್ದವರು ಸಿರಿಯನ್ ಮತ್ತು ಟರ್ಕಿ ಪ್ರಜೆಗಳು ಎಂದು ಪ್ರಾಥಮಿಕ ಮಾಹಿತಿ ಲಭಿಸಿರುವುದಾಗಿ ಪೊಲೀಸ್ ವಕ್ತಾರ ಸ್ಟೀಫನ್ ಸೊನ್ಟಾಗ್ರನ್ನು ಉಲ್ಲೇಖಿಸಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News