ಸಾಂದರ್ಭಿಕ ಚಿತ್ರ - Photo Credit : AI

ಕಿನ್ಶಾಸ: ಪೂರ್ವ ಕಾಂಗೋದ ಕಿವು ಸರೋವರದಲ್ಲಿ ವ್ಯಾಪಾರಿಗಳನ್ನು ಕರೆದೊಯ್ಯುತ್ತಿದ್ದ ದೋಣಿ ಮಗುಚಿ ಬಿದ್ದು ಕನಿಷ್ಠ 12 ಜನರು ಮೃತಪಟ್ಟಿದ್ದಾರೆ ಮತ್ತು ಹತ್ತಾರು ಜನರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.

ದಕ್ಷಿಣ ಕಿವು ಪ್ರಾಂತ್ಯದ ಇದ್‍ಜ್ವಿ ದ್ವೀಪದಲ್ಲಿ ಶನಿವಾರ ರಾತ್ರಿ ದೋಣಿ ಮಗುಚಿದ್ದು, ಈ ಸಂದರ್ಭ ಅದರಲ್ಲಿ 50ಕ್ಕೂ ಹೆಚ್ಚು ಜನರಿದ್ದರು. ಸುಮಾರು 15 ಜನರನ್ನು ರಕ್ಷಿಸಲಾಗಿದೆ. ಈ ದೋಣಿಯು ಇದ್‍ಜ್ವಿ ದ್ವೀಪದ ಬ್ವಿನಾದಿಂದ ಬೋಜಾಗೆ ಮೀನು ವ್ಯಾಪಾರಿಗಳನ್ನು ಮತ್ತು ಸರಕುಗಳನ್ನು ಸಾಗಿಸುತ್ತಿತ್ತು ಎಂದು ಸ್ಥಳೀಯ ಆಡಳಿತಾಧಿಕಾರಿ ಮುಹಿಂಡೋ ನತಂಬುಕ ಪಾಸ್ಕಲ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor