ಅಮೆರಿಕದ ದಾಳಿಯನ್ನು ಎದುರಿಸಲು ಸಿದ್ಧ: ಇರಾನ್
Photo Credit : PTI
ಟೆಹರಾನ್: ಅಮೆರಿಕದ ಮತ್ತೊಂದು ದಾಳಿಯನ್ನು ಎದುರಿಸಲು ತಾವು ಸಿದ್ಧವಾಗಿರುವುದಾಗಿ ಇರಾನ್ ಸೇನೆ ರವಿವಾರ ಹೇಳಿದ್ದು, ಮತ್ತೆ ಯುದ್ಧ ಆರಂಭವಾದರೆ ಪ್ರದೇಶದಲ್ಲಿ ಇನ್ನಷ್ಟು ಅಸ್ಥಿರತೆ ಉಂಟಾಗಲಿದೆ ಎಂದು ಎಚ್ಚರಿಸಿದೆ.
ಹಾರ್ಮುಝ್ ಜಲಸಂಧಿಯನ್ನು ಮತ್ತೆ ಮುಕ್ತಗೊಳಿಸುವ ಮತ್ತು ಕದನ ವಿರಾಮ ಸಾರುವ ಇರಾನ್‍ನ ಪ್ರಸ್ತಾಪವನ್ನು ತಾವು ತಿರಸ್ಕರಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಗೆ ಪ್ರತಿಯಾಗಿ ಈ ಎಚ್ಚರಿಕೆ ಹೊರಬಿದ್ದಿದೆ.
ಫೆಬ್ರವರಿ 28ರಂದು ಸಂಘರ್ಷ ಪ್ರಾರಂಭವಾದಾಗಿಗಿಂತಲೂ ಈಗ ತಮ್ಮ ಪಡೆಗಳು ಉತ್ತಮ ರೀತಿಯಲ್ಲಿ ಸಿದ್ಧಗೊಂಡಿವೆ. ಸೇನೆಯು ತನ್ನ ಉಪಕರಣಗಳು ಮತ್ತು ತರಬೇತಿಯನ್ನು ಉತ್ತಮಪಡಿಸಿಕೊಂಡಿದ್ದು, ಸೇನಾ ಸಿಬ್ಬಂದಿಯ ಮನೋಬಲ ಹಾಗೂ ಸಿದ್ಧತೆಯನ್ನು ಹೆಚ್ಚಿಸಿಕೊಂಡಿದೆ ಎಂದು ಇರಾನ್ ಸೇನೆಯ ವಕ್ತಾರರು ತಿಳಿಸಿದ್ದಾರೆ.