ಯೆಮನ್ ನಲ್ಲಿ ಮಾರುಕಟ್ಟೆ ಮೇಲೆ ದಾಳಿ: 7 ಮಂದಿ ಮೃತ್ಯು; 40 ಜನರಿಗೆ ಗಾಯ
ಸಾಂದರ್ಭಿಕ ಚಿತ್ರ - PHOTO | PTI
ತೈಝ್ (ಯೆಮನ್): ಯೆಮೆನ್ ನ ತೈಝ್ ಪ್ರಾಂತ್ಯದ ಮಾವಿಯಾ ಜಂಕ್ಷನ್ ನಲ್ಲಿರುವ ಮಾರುಕಟ್ಟೆ ಮೇಲೆ ರವಿವಾರ ನಡೆದ ದಾಳಿಯಲ್ಲಿ ಮಕ್ಕಳು ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದು, 40 ಮಂದಿ ಗಾಯಗೊಂಡಿದ್ದಾರೆ ಎಂದು ಹೌದಿ ನಿಯಂತ್ರಿತ ಆರೋಗ್ಯ ಸಚಿವಾಲಯ ತಿಳಿಸಿದೆ.
ಇದರ ಬೆನ್ನಲ್ಲೆ ಹೌದಿ ಮಿಲಿಟರಿ ಶಿಬಿರ ಮತ್ತು ವಾಹನಗಳನ್ನು ಭದ್ರತಾ ಪಡೆಗಳು ಗುರಿಯಾಗಿಸಿಕೊಂಡಿದೆ ಯೆಮನ್ ಸರಕಾರ ತಿಳಿಸಿದೆ.
ಮಾರುಕಟ್ಟೆಯ ಸಮೀಪ ಹೌದಿ ಬಂಡುಕೋರರು ಇತ್ತೀಚೆಗೆ ಮಿಲಿಟರಿ ಶಿಬಿರವೊಂದನ್ನು ಸ್ಥಾಪಿಸಿದ್ದರು ಎಂದು ಯೆಮನ್ ಸರಕಾರದ ಮಿಲಿಟರಿ ಮೂಲಗಳು ರಾಯಿಟರ್ಸ್ ಗೆ ತಿಳಿಸಿದೆ.