Photo Credit : palestine chronicle

ಟೆಹರಾನ್: ಮಧ್ಯಪ್ರಾಚ್ಯ ಯುದ್ಧದ ನಡುವೆ ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಪ್ರಮುಖವಾದ ಹಾರ್ಮುಝ್ ಜಲಸಂಧಿಯಲ್ಲಿ ಅಮೆರಿಕದ ಜಲಾಂತರ್ಗಾಮಿ ಡ್ರೋನ್ ಒಂದನ್ನು ವಶಪಡಿಸಿಕೊಂಡಿರುವುದಾಗಿ ಇರಾನ್‌ನ ರೆವೊಲ್ಯೂಷನರಿ ಗಾಡ್ರ್ಸ್ (ಐಆರ್ಜಿಸಿ) ರವಿವಾರ ತಿಳಿಸಿದೆ.

ಗುಪ್ತಚರ ಮೇಲ್ವಿಚಾರಣೆ ಮತ್ತು ಎಲೆಕ್ಟ್ರಾನಿಕ್ ಯುದ್ಧತಂತ್ರವನ್ನು ಒಳಗೊಂಡ ಸಂಯೋಜಿತ ಹಾಗೂ ಸಂಕೀರ್ಣ ಕಾರ್ಯಾಚರಣೆಯ ಮೂಲಕ, ಐಆರ್‌ಜಿಸಿ ನೌಕಾಪಡೆಯು ಭಯೋತ್ಪಾದಕ ಅಮೆರಿಕ ಮಿಲಿಟರಿಗೆ ಸೇರಿದ ಸುಧಾರಿತ ನೀರೊಳಗಿನ ಮಾನವರಹಿತ ವಾಹನವನ್ನು ಯಶಸ್ವಿಯಾಗಿ ವಶಪಡಿಸಿಕೊಂಡಿದೆ' ಎಂದು ಐಆರ್‌ಜಿಸಿ ನೌಕಾಪಡೆ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಡ್ರೋನ್ ಗೂಢಚರ್ಯೆ ಉದ್ದೇಶಕ್ಕಾಗಿ ಹಾರ್ಮುಝ್ ಜಲಸಂಧಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಇದನ್ನು `ರೆಮುಸ್ 600' ಮಾದರಿಯ ಸ್ವಾಯತ್ತ ನೀರೊಳಗಿನ ವಾಹನ ಎಂದು ಗುರುತಿಸಲಾಗಿದೆ. ಪ್ರಸ್ತುತ ಇದು ಮಾಹಿತಿ ಮರುಪಡೆಯುವಿಕೆಗಾಗಿ ತಜ್ಞರ ವಶದಲ್ಲಿದೆ ಎಂದು ಐಆರ್‌ಜಿಸಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor