×
Ad

ದೋಣಿ ಮುಳುಗಿ 12 ಪಾಕಿಸ್ತಾನಿ ಮೀನುಗಾರರ ಸಾವು

Update: 2024-03-13 21:55 IST

ಸಾಂದರ್ಭಿಕ ಚಿತ್ರ | Photo : NDTV

ಇಸ್ಲಮಾಬಾದ್: ಅರಬ್ಬಿ ಸಮುದ್ರದಲ್ಲಿ ದೋಣಿ ಮುಳುಗಿ ಪಾಕಿಸ್ತಾನದ 12 ಮೀನುಗಾರರು ಸಾವನ್ನಪ್ಪಿರುವುದಾಗಿ ರಕ್ಷಣಾ ಪಡೆಯ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.

ನಾಪತ್ತೆಯಾಗಿರುವ ಇತರ ಇಬ್ಬರ ಶೋಧ ಕಾರ್ಯ ಮುಂದುವರಿದಿದೆ. ಮೀನುಗಾರಿಕೆಯಲ್ಲಿ ತೊಡಗಿದ್ದ ದೋಣಿ ಮಾರ್ಚ್ 5ರಂದು ಸುಂಟರಗಾಳಿಗೆ ಸಿಲುಕಿ ನೀರಿನಲ್ಲಿ ಮುಳುಗಿದ್ದು ದೋಣಿಯಲ್ಲಿದ್ದ 45 ಮಂದಿಯಲ್ಲಿ 14 ಮಂದಿ ನಾಪತ್ತೆಯಾಗಿದ್ದರು. ಸಿಂಧ್ ಪ್ರಾಂತದ ಸಮುದ್ರವ್ಯಾಪ್ತಿಯಲ್ಲಿ ದೋಣಿ ಮುಳುಗಿದ ಮಾಹಿತಿ ಪಡೆದ ರಕ್ಷಣಾ ತಂಡ ಹೆಲಿಕಾಪ್ಟರ್ ಮತ್ತು ಸ್ಪೀಡ್‍ಬೋಟ್ ಬಳಸಿ ಕಾರ್ಯಾಚರಣೆ ನಡೆಸಿದ್ದು 12 ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ. ಉಳಿದ ಇಬ್ಬರ ಬಗ್ಗೆ ಇನ್ನೂ ಮಾಹಿತಿ ದೊರಕಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News