×
Ad

ಯೆಮನ್ ಬಳಿ ವಲಸಿಗರ ದೋಣಿ ಮುಳುಗಿ 13 ಮಂದಿ ಮೃತ್ಯು

Update: 2024-08-25 20:37 IST

ಸಾಂದರ್ಭಿಕ ಚಿತ್ರ - Photo credit: @TRTWorldNow 

ಸನಾ : ಯೆಮನ್ ಬಳಿ 27 ವಲಸಿಗರಿದ್ದ ದೋಣಿಯೊಂದು ಮುಳುಗಿದ್ದು 13 ಮಂದಿ ಸಾವನ್ನಪ್ಪಿದ್ದಾರೆ. ನಾಪತ್ತೆಯಾಗಿರುವ 14 ಮಂದಿಯ ಶೋಧ ಕಾರ್ಯ ಮುಂದುವರಿದಿದೆ ಎಂದು ವಿಶ್ವಸಂಸ್ಥೆಯ ಏಜೆನ್ಸಿ `ಇಂಟರ್‍ನ್ಯಾಷನಲ್ ಆರ್ಗನೈಸೇಷನ್ ಫಾರ್ ಮೈಗ್ರೇಷನ್(ಐಒಎಮ್) ರವಿವಾರ ಹೇಳಿದೆ.

ಇಥಿಯೋಪಿಯಾದ 25 ವಲಸಿಗರು ಮತ್ತು ಯೆಮನ್‍ನ ಇಬ್ಬರು ಪ್ರಜೆಗಳಿದ್ದ ದೋಣಿ ಡಿಬೌಟಿಯಿಂದ ಹೊರಟಿದ್ದು ಯೆಮನ್‍ನ ತೈಜ್ ಪ್ರಾಂತದ ಕರಾವಳಿ ಬಳಿ ಮುಳುಗಿದೆ.

ದೋಣಿಯಲ್ಲಿದ್ದ ಇಬ್ಬರು ಮಹಿಳೆಯರ ಸಹಿತ 13 ಮಂದಿ ಮೃತಪಟ್ಟಿರುವುದು ದೃಢಪಟ್ಟಿದ್ದು ನಾಪತ್ತೆಯಾದವರ ಶೋಧ ಕಾರ್ಯ ಮುಂದುವರಿದಿದೆ. ದುರಂತಕ್ಕೆ ಕಾರಣ ಸ್ಪಷ್ಟವಾಗಿಲ್ಲ ಎಂದು ಐಒಎಮ್ ಹೇಳಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News