×
Ad

ಆರ್ಥಿಕ ಬಿಕ್ಕಟ್ಟಿಗೆ ರಾಜಪಕ್ಸ ಸಹಿತ 13 ಮುಖಂಡರು ಹೊಣೆ: ಶ್ರೀಲಂಕಾ ಸುಪ್ರೀಂಕೋರ್ಟ್

Update: 2023-11-15 23:07 IST

 Photo credit:  theprint.in 

ಕೊಲಂಬೊ: ಶ್ರೀಲಂಕಾ ಎದುರಿಸುತ್ತಿರುವ ಅಸಾಮಾನ್ಯ ಆರ್ಥಿಕ ಬಿಕ್ಕಟ್ಟಿಗೆ ಮಾಜಿ ಅಧ್ಯಕ್ಷ ಗೊತಬಯ ರಾಜಪಕ್ಸ, ಅವರ ಸಹೋದರ ಮಹಿಂದ ರಾಜಪಕ್ಸ, ಮಾಜಿ ವಿತ್ತಸಚಿವ ಬಸಿಲ್ ರಾಜಪಕ್ಸ, ಶ್ರೀಲಂಕಾದ ಸೆಂಟ್ರಲ್ ಬ್ಯಾಂಕ್ ನ ಇಬ್ಬರು ಮಾಜಿ ಗವರ್ನರ್ ಸೇರಿದಂತೆ 13 ಮಾಜಿ ಮುಖಂಡರು ಹೊಣೆ ಎಂದು ಶ್ರೀಲಂಕಾದ ಸುಪ್ರೀಂಕೋರ್ಟ್ ಬುಧವಾರ ತೀರ್ಪು ನೀಡಿದೆ.

ಅವರ ಕ್ರಮಗಳು, ಲೋಪಗಳು ಮತ್ತು ನಡವಳಿಕೆ ಶ್ರೀಲಂಕಾವನ್ನು ಆರ್ಥಿಕ ಬಿಕ್ಕಟ್ಟಿನತ್ತ ತಳ್ಳಿದೆ ಎಂದು ನ್ಯಾಯಾಲಯದ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News