ಚೀನಾದ ಸುರಂಗ ಮಾರ್ಗದಲ್ಲಿ ಬಸ್ ಅಪಘಾತ, 14 ಮಂದಿ ಸಾವು
Update: 2024-03-20 23:18 IST
ಸಾಂದರ್ಭಿಕ ಚಿತ್ರ | Photo : NDTV
ಬೀಜಿಂಗ್: ಉತ್ತರ ಚೀನಾದ ಶಾಂಕ್ಸಿ ಪ್ರಾಂತದಲ್ಲಿ ಸುರಂಗ ಮಾರ್ಗದೊಳಗೆ ಬಸ್ಸೊಂದು ಅಪಘಾತಕ್ಕೆ ಒಳಗಾಗಿ 14 ಮಂದಿ ಸಾವನ್ನಪ್ಪಿದ್ದು ಇತರ 37 ಮಂದಿ ಗಾಯಗೊಂಡಿರುವುದಾಗಿ ಸಿಸಿಟಿವಿ ಸುದ್ದಿಸಂಸ್ಥೆ ಬುಧವಾರ ವರದಿ ಮಾಡಿದೆ.
51 ಪ್ರಯಾಣಿಕರಿದ್ದ ಬಸ್ ಸುರಂಗದ ಒಳಭಾಗದ ಗೋಡೆಗೆ ಅಪ್ಪಳಿಸಿ ದುರಂತ ಸಂಭವಿಸಿದೆ. ಅಪಘಾತದ ರಭಸಕ್ಕೆ ಬಸ್ಸಿನ ಮುಂಭಾಗ ನಜ್ಜುಗುಜ್ಜಾಗಿದ್ದು 14 ಮಂದಿ ಮೃತಪಟ್ಟಿದ್ದಾರೆ. ಗಾಯಗೊಂಡ 37 ಪ್ರಯಾಣಿಕರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ವರದಿ ಹೇಳಿದೆ.