×
Ad

ಅಮೆರಿಕದಲ್ಲಿ ಟಿಸಿಎಸ್‍ಗೆ 1600 ಕೋಟಿ ರೂಪಾಯಿ ದಂಡ

Update: 2024-06-17 09:39 IST

PC : NDTV 

ವಾಷಿಂಗ್ಟನ್: ವ್ಯವಹಾರ ರಹಸ್ಯಗಳನ್ನು ದುರುಪಯೋಗಪಡಿಸಿಕೊಂಡ ಆರೋಪದಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್)ಗೆ ಅಮೆರಿಕದ ಜಿಲ್ಲಾ ನ್ಯಾಯಾಲಯ 1600 ಕೋಟಿ ರೂಪಾಯಿ (194.2 ದಶಲಕ್ಷ ಡಾಲರ್) ದಂಡ ವಿಧಿಸಿದೆ. ಇದೀಗ ಡಿಎಕ್ಸ್‍ಸಿ ಟೆಕ್ನಾಲಜಿ ಕಂಪನಿ (ಡಿಎಕ್ಸ್‍ಸಿ) ಜತೆ ವಿಲೀನಗೊಂಡಿರುವ ಕಂಪ್ಯೂಟರ್ ಸೈನ್ಸ್ ಕಾರ್ಪೊರೇಷನ್ (ಸಿಎಸ್‍ಸಿ), ವ್ಯವಹಾರ ರಹಸ್ಯಗಳನ್ನು ದುರ್ಬಳಕೆ ಮಾಡಿಕೊಂಡ ಸಂಬಂಧ ಜಿಲ್ಲಾ ನ್ಯಾಯಾಲಯದಲ್ಲಿ ದಾಖಲಿಸಿದ ದೂರಿನ ಆಧಾರದಲ್ಲಿ ಈ ದಂಡ ವಿಧಿಸಲಾಗಿದೆ.

ಈ ನ್ಯಾಯಾಲಯ ಆದೇಶದ ಬಗ್ಗೆ ಟಿಸಿಎಸ್, ಸೆಬಿಗೆ ಸಲ್ಲಿಸಿದ ಬಿಎಸ್‍ಇ ಫೈಲಿಂಗ್‍ನಲ್ಲಿ ಈ ಅಂಶವನ್ನು ಬಹಿರಂಗಪಡಿಸಿದೆ. ಈ ನ್ಯಾಯಾಲಯದ ಆದೇಶ ವಿರುದ್ಧ ಮೇಲ್ಮನವಿ ಮತ್ತು ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸುವುದಾಗಿ ಟಿಸಿಎಸ್ ಸ್ಪಷ್ಟಪಡಿಸಿದೆ.

"ಸೆಬಿ (ಲಿಸ್ಟಿಂಗ್ ಅಬ್ಲಿಗೇಶನ್ಸ್ ಅಂಡ್ ಡಿಸ್‍ಕ್ಲೋಶರ್ ರಿಕ್ವಯರ್‍ಮೆಂಟ್ಸ್) ನಿಬಂಧನೆಗಳು-2015ರ ಅನುಸಾರ ಅಮೆರಿಕದ ಡಲ್ಲಾಸ್ ಡಿವಿಷನ್‍ನ ಉತ್ತರ ಟೆಕ್ಸಾಸ್ ಜಿಲ್ಲೆಯ ನ್ಯಾಯಾಲಯ ಕಂಪನಿಗೆ ವಿರುದ್ಧವಾದ ತೀರ್ಪು ನೀಡಿದೆ ಎಂದು ವಿವರಿಸಲಾಗಿದೆ.

ಈ ಪ್ರಕರಣದಲ್ಲಿ ಕಂಪನಿ ಸಿಎಸ್‍ಸಿಗೆ 56151 ಡಾಲರ್ ಪರಿಹಾರ ಮೊತ್ತ ನೀಡಬೇಕು ಮತ್ತು ವಿಶೇಷ ದಂಡವಾಗಿ 112,303,166 ಡಾಲರ್ ನೀಡಬೇಕು ಎಂದು ಆದೇಶಿಸಲಾಗಿದೆ. ಕಂಪನಿ 25,773,576.60 ಡಾಲರ್‍ಗಳ ತೀರ್ಪು ಪೂರ್ವದ ಬಡ್ಡಿಯನ್ನು ಕೂಡಾ ನೀಡಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ.

ಈ ನ್ಯಾಯಾಲಯದ ತೀರ್ಪು ಕಂಪನಿಯ ಹಣಕಾಸು ಮತ್ತು ಕಾರ್ಯಾಚರಣೆ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ. ಈ ವಿಚಾರದಲ್ಲಿ ಸೂಕ್ತ ನ್ಯಾಯಾಲಯದಲ್ಲಿ ಮೇಲ್ಮನವಿ/ ಮರುಪರಿಶೀಲನಾ ಅರ್ಜಿ ಸಲ್ಲಿಸುವ ಮೂಲಕ ಕಂಪನಿ ತನ್ನ ವಾದವನ್ನು ಸಮರ್ಥಿಸಿಕೊಳ್ಳಲಿದೆ ಎಂದು ಕಂಪನಿಯ ವಕ್ತಾರರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News