×
Ad

ಗಾಝಾ ನಿರಾಶ್ರಿತರ ಶಿಬಿರದಲ್ಲಿ 195 ಫೆಲೆಸ್ತೀನೀಯರ ಮೃತ್ಯು: ಹಮಾಸ್

Update: 2023-11-02 22:43 IST

Photo- PTI

ಗಾಝಾ: ಗಾಝಾದ ಜಬಾಲ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಟ 195 ಫೆಲೆಸ್ತೀನೀಯರು ಮೃತಪಟ್ಟಿರುವುದಾಗಿ ಹಮಾಸ್ ಆಡಳಿತ ಹೇಳಿದೆ.

ಮುತ್ತಿಗೆಗೆ ಒಳಗಾದ ಗಾಝಾ ಪಟ್ಟಿಯಿಂದ ಗುರುವಾರ ಹೆಚ್ಚಿನ ವಿದೇಶೀಯರು ಹೊರಡಲು ಸಿದ್ಧವಾಗುತ್ತಿದ್ದಾರೆ. ಇದಕ್ಕೆ ಅನುಕೂಲವಾಗಲು ಗುರುವಾರ ಗಡಿ ದಾಟನ್ನಜು ಮತ್ತೆ ತೆರೆಯಲಾಗುವುದು. ಮುಂದಿನ 2 ವಾರಗಳಲ್ಲಿ ವಿದೇಶಿ ಪಾಸ್‍ಪೋರ್ಟ್ ಹೊಂದಿರುವ ಸುಮಾರು 7,500 ಮಂದಿ ಗಾಝಾವನ್ನು ತೊರೆಯಲಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಈ ಮಧ್ಯೆ, ಗಾಝಾ ಪಟ್ಟಿಯ ಅತೀ ದೊಡ್ಡ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ನಡೆಸಿದ ಮಾರಣಾಂತಿಕ ವೈಮಾನಿಕ ದಾಳಿಯು ಯುದ್ಧಾಪರಾಧಗಳಿಗೆ ಕಾರಣವಾಗಬಹುದು ಎಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಸಮಿತಿ ಎಚ್ಚರಿಕೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News