×
Ad

ಲೆಬನಾನ್ | ಇಸ್ರೇಲ್ ದಾಳಿಯಲ್ಲಿ ಇಬ್ಬರು ಮೃತ್ಯು

Update: 2024-08-19 23:24 IST

ಬೈರೂತ್ : ದಕ್ಷಿಣ ಲೆಬನಾನ್ ನಲ್ಲಿ ಸೋಮವಾರ ಇಸ್ರೇಲ್ ನ ದಾಳಿಯಲ್ಲಿ ಇಬ್ಬರು ಮೃತಪಟ್ಟಿರುವುದಾಗಿ ಲೆಬನಾನ್ ನ ಆರೋಗ್ಯ ಇಲಾಖೆ ಹೇಳಿದೆ.

ಗಡಿಭಾಗದ ಹುಲಾ ಗ್ರಾಮದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ದಕ್ಷಿಣ ಲೆಬನಾನ್ನ ಹಲವು ಪ್ರದೇಶಗಳ ಮೇಲೆಯೂ ಇಸ್ರೇಲ್ ಪಡೆ ವ್ಯಾಪಕ ದಾಳಿ ನಡೆಸಿದೆ ಎಂದು ಲೆಬನಾನ್ ಸರಕಾರಿ ಸ್ವಾಮ್ಯದ `ನ್ಯಾಷನಲ್ ನ್ಯೂಸ್ ಏಜೆನ್ಸಿ' ಹೇಳಿದೆ. ಈ ಮಧ್ಯೆ, ಉತ್ತರ ಇಸ್ರೇಲ್ನ ಸೇನಾ ನೆಲೆ ಮತ್ತು ತುಕಡಿಗಳನ್ನು ಗುರಿಯಾಗಿಸಿ ಡ್ರೋನ್ ದಾಳಿ ನಡೆಸಿರುವುದಾಗಿ ಹಿಜ್ಬುಲ್ಲಾ ಹೇಳಿದೆ. ಗಡಿಭಾಗದ ಬಳಿಯ ಸೇನಾನೆಲೆ ಮತ್ತು ಕರಾವಳಿ ನಗರ ಏಕರ್ನಲ್ಲಿ ಸೇನಾ ಬಂಕರ್ ಮೇಲೆ ಸ್ಫೋಟಕಗಳನ್ನು ಹೊತ್ತಿದ್ದ ಡ್ರೋನ್ ಗಳಿಂದ ದಾಳಿ ನಡೆಸಲಾಗಿದೆ. ಸೋಮವಾರ ಬೆಳಿಗ್ಗೆ ಇಸ್ರೇಲ್ ನ ಮತ್ತೊಂದು ಸೇನಾ ನೆಲೆಯ ಮೇಲೆ ರಾಕೆಟ್ ಹಾಗೂ ಫಿರಂಗಿ ದಾಳಿ ನಡೆಸಿರುವುದಾಗಿ ಹಿಜ್ಬುಲ್ಲಾ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News