×
Ad

ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಇಬ್ಬರು ಹಿರಿಯ ಮಿಲಿಟರಿ ಅಧಿಕಾರಿಗಳು ಮೃತ್ಯು: ದೃಢಪಡಿಸಿದ ಇರಾನ್

Update: 2025-06-14 17:37 IST

Photo credit: PTI

ಟೆಹರಾನ್ : ಶನಿವಾರ ಮುಂಜಾನೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್‌ನ ಇಬ್ಬರು ಉನ್ನತ ಶ್ರೇಣಿಯ ಮಿಲಿಟರಿ ಅಧಿಕಾರಿಗಳು ಮೃತಪಟ್ಟಿದ್ದಾರೆ ಎಂದು ಇರಾನ್ ದೃಢಪಡಿಸಿದೆ.

ಶನಿವಾರ ಮುಂಜಾನೆ ಟೆಲ್ ಅವೀವ್, ಜೆರುಸಲೆಮ್ ಮೇಲೆ ಇರಾನ್ ಕ್ಷಿಪಣಿಗಳು ಮತ್ತು ರಾಕೆಟ್‌ಗಳ ಮೂಲಕ ದಾಳಿ ನಡೆಸಿದೆ.

ಇಸ್ರೇಲ್ ಸೇನೆ ಟೆಹರಾನ್ ಮೇಲೆ ಮೂರನೇ ಸುತ್ತಿನ ವಾಯುದಾಳಿಯನ್ನು ನಡೆಸುತ್ತಿದೆ. ನಗರದ ಹಲವಾರು ಭಾಗಗಳಲ್ಲಿ ಸ್ಫೋಟಗಳು ವರದಿಯಾಗಿವೆ.

ಇಸ್ರೇಲ್ ದಾಳಿಯಲ್ಲಿ ಸಶಸ್ತ್ರ ಪಡೆಗಳ ಗುಪ್ತಚರ ವಿಭಾಗದ ಉಪ ಮುಖ್ಯಸ್ಥರಾದ ಜನರಲ್ ಘೋಲಂರೆಝಾ ಮೆಹ್ರಾಬಿ ಮತ್ತು ಕಾರ್ಯಾಚರಣೆ ವಿಭಾಗದ ಉಪ ಮುಖ್ಯಸ್ಥ ಜನರಲ್ ಮೆಹ್ದಿ ರಬ್ಬಾನಿ ಮೃತಪಟ್ಟಿದ್ದಾರೆ ಎಂದು ಇರಾನ್ ಮಾಧ್ಯಮಗಳು ತಿಳಿಸಿದೆ.

ಇಸ್ರೇಲ್ ಸೇನೆಯು, ನಗರಗಳು, ಮಿಲಿಟರಿ ಮತ್ತು ಪರಮಾಣು ಕೇಂದ್ರಗಳನ್ನು ಗುರಿಯಾಗಿಸಿಕೊಂಡು ದಾಳಿ ಮುಂದುವರಿಸಿದೆ. ಘಟನೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 78 ಜನರು ಮೃತಪಟ್ಟಿದ್ದಾರೆ 320ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ಇರಾನ್ ಈ ಮೊದಲು ತಿಳಿಸಿತ್ತು.

ಇಸ್ರೇಲ್ ದಾಳಿಗೆ ಪ್ರತೀಕಾರವಾಗಿ ಇರಾನ್ ಇಸ್ರೇಲ್‌ನ ಕೆಲ ಪ್ರದೇಶಗಳನ್ನು ಗುರಿಯಾಗಿಸಿ ಡ್ರೋನ್ ಮತ್ತು ಕ್ಷಿಪಣಿ ಮೂಲಕ ದಾಳಿ ನಡೆಸಿದೆ. ಘಟನೆಯಲ್ಲಿ ಕನಿಷ್ಠ ಮೂವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News