×
Ad

ಲೂವ್ರಾ ಮ್ಯೂಸಿಯಂ ಚಿನ್ನಾಭರಣ ಕಳ್ಳತನ ಪ್ರಕರಣ: ಇಬ್ಬರು ಶಂಕಿತ ಆರೋಪಿಗಳ ಬಂಧನ

Update: 2025-10-26 19:14 IST

Photo Credit : NDTV 

ಪ್ಯಾರಿಸ್: ಪ್ಯಾರಿಸ್ ನ ಪ್ರತಿಷ್ಠಿತ ಲೂವ್ರಾ ವಸ್ತು ಸಂಗ್ರಹಾಲಯದಲ್ಲಿ ನಡೆದಿದ್ದ ಅಮೂಲ್ಯ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಶಂಕಿತ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ವಿಶ್ವಾಸಾರ್ಹ ಮೂಲಗಳನ್ನು ಉಲ್ಲೇಖಿಸಿ AFP ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ಪೈಕಿ ವಿದೇಶಕ್ಕೆ ತೆರಳಲು ಯತ್ನಿಸುತ್ತಿದ್ದ ಓರ್ವ ಶಂಕಿತ ಆರೋಪಿಯನ್ನು ಶನಿವಾರ ರಾತ್ರಿ ಸುಮಾರು 10 ಗಂಟೆಗೆ (ಜಾಗತಿಕ ಕಾಲಮಾನ) ಪ್ಯಾರಿಸ್-ಚಾರ್ಲ್ಸ್ ಡಿ ಗ್ವಾಲೆ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದ್ದು, ಮತ್ತೋರ್ವ ಆರೋಪಿಯನ್ನು ಕೆಲ ಹೊತ್ತಿನಲ್ಲೇ ಪ್ಯಾರಿಸ್ ಪ್ರಾಂತ್ಯದಲ್ಲಿ ಬಂಧಿಸಲಾಗಿದೆ.

ಕಳೆದ ರವಿವಾರ ಪ್ರವಾಸಿಗರು ಅತ್ಯಧಿಕ ಸಂಖ್ಯೆಯಲ್ಲಿ ಭೇಟಿ ನೀಡುವ ಪ್ಯಾರಿಸ್ ನ ಲೂವ್ರಾ ವಸ್ತು ಸಂಗ್ರಹಾಲಯದಲ್ಲಿ ಕಿರೀಟದ ಚಿನ್ನಾಭರಣಗಳನ್ನು ಕಳವು ಮಾಡಲಾಗಿತ್ತು.

ರವಿವಾರ ಬೆಳಗ್ಗೆ ವಸ್ತು ಸಂಗ್ರಹಾಲಯ ತೆರೆಯುವುದಕ್ಕೂ ಮುನ್ನ, ಕ್ರೇನ್ ಒಂದನ್ನು ಬಳಸಿಕೊಂಡು ವಸ್ತು ಸಂಗ್ರಹಾಲಯದ ಮೇಲ್ಮಹಡಿ ತಲುಪಿದ್ದ ಕಳ್ಳರು, ವಸ್ತು ಸಂಗ್ರಹಾಲಯದ ಕಿಟಕಿಗಳನ್ನು ಪುಡಿಪುಡಿ ಮಾಡಿದ್ದರು. ಬಳಿಕ, ವಸ್ತು ಸಂಗ್ರಹಾಲಯದೊಳಗೆ ಪ್ರವೇಶಿಸಿದ್ದ ಕಳ್ಳರು, ಸುಮಾರು 102 ದಶಲಕ್ಷ ಡಾಲರ್ ಮೌಲ್ಯದ ಎಂಟು ಅಮೂಲ್ಯ ಚಿನ್ನಾಭರಣಗಳನ್ನು ದೋಚಿ, ಮೋಟರ್ ಬೈಕ್ ಗಳಲ್ಲಿ ಪರಾರಿಯಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News