×
Ad

ಇರಾಕ್ : ಬಾಂಬ್ ಸ್ಫೋಟದಲ್ಲಿ ಮೂವರು ಯೋಧರ ಮೃತ್ಯು

Update: 2024-11-17 23:10 IST

ಸಾಂದರ್ಭಿಕ ಚಿತ್ರ

ಬಗ್ದಾದ್ : ಇರಾಕ್‍ನ ಯೋಧರು ಪ್ರಯಾಣಿಸುತ್ತಿದ್ದ ವಾಹನವನ್ನು ಗುರಿಯಾಗಿಸಿ ರಸ್ತೆ ಬದಿ ಇರಿಸಿದ್ದ ಬಾಂಬ್ ಸ್ಫೋಟಿಸಿ ಮೂವರು ಯೋಧರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ಇರಾಕ್‍ ನ ಸಲಾದೀನ್ ಪ್ರಾಂತದ ಆಗ್ನೇಯದಲ್ಲಿರುವ ತುಜ್ ಖರ್ಮಾತು ಪಟ್ಟಣದ ಬಳಿ ರವಿವಾರ ನಡೆದ ಸ್ಫೋಟದಲ್ಲಿ ಇತರ ಮೂವರು ಯೋಧರು ತೀವ್ರವಾಗಿ ಗಾಯಗೊಂಡಿರುವುದಾಗಿ ಭದ್ರತಾ ಪಡೆಯ ಮೂಲಗಳು ಹೇಳಿವೆ.

ರಸ್ತೆ ಬದಿ ಇರಿಸಲಾಗಿದ್ದ ಸ್ಫೋಟಕವನ್ನು ಇರಾಕ್ ಸೇನೆಯ ಗಸ್ತುವಾಹನ ಬರುತ್ತಿದ್ದಂತೆಯೇ ದೂರ ನಿಯಂತ್ರಕ ಸಾಧನದ ಮೂಲಕ ಸ್ಫೋಟಿಸಲಾಗಿದೆ. ಸ್ಫೋಟದ ಹೊಣೆಯನ್ನು ಯಾವುದೇ ಗುಂಪು ವಹಿಸಿಕೊಂಡಿಲ್ಲ. ಭದ್ರತಾ ಪಡೆಗಳು ತನಿಖೆ ನಡೆಸುತ್ತಿವೆ ಎಂದು ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News