ಪಾಕ್: ಪೆಟ್ಟಿಗೆಯೊಳಗೆ ಸಿಕ್ಕಿಬಿದ್ದ 3 ಮಕ್ಕಳ ಸಾವು
Update: 2023-11-12 23:23 IST
ಸಾಂದರ್ಭಿಕ ಚಿತ್ರ
ಇಸ್ಲಮಾಬಾದ್ : ಆಟವಾಡುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಟ್ರಂಕಿನೊಳಗೆ ಸಿಲುಕಿದ ಮೂವರು ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ರಾವಲ್ಪಿಂಡಿಯ ಶಾಹ್ ಖಾಲಿದ್ ಖಲೂನಿ ಪ್ರದೇಶದಲ್ಲಿ ಘಟನೆ ನಡೆದಿದೆ. ಆಟವಾಡುತ್ತಿದ್ದ 2 ವರ್ಷದ ಝೊಹಾನ್, 6 ವರ್ಷದ ಸಾಯಿರಾ ಮತ್ತು 7 ವರ್ಷದ ಫರಿಯಾ ದೊಡ್ಡ ಟ್ರಂಕ್ ಒಂದರ ಒಳಗೆ ಹೋದಾಗ ಆಕಸ್ಮಿಕವಾಗಿ ಟ್ರಂಕ್ ಬಾಗಿಲು ಮುಚ್ಚಿಕೊಂಡು ಲಾಕ್ ಆಗಿದೆ. ಮಕ್ಕಳು ಕಾಣದಿದ್ದಾಗ ಅವರಿಗಾಗಿ ಹುಡುಕಾಟ ನಡೆಸಿದ್ದು ಅಂತಿಮವಾಗಿ ಟ್ರಂಕಿನೊಳಗೆ ಪತ್ತೆಯಾಗಿದ್ದಾರೆ. ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಅಷ್ಟರಲ್ಲೇ ಉಸಿರುಗಟ್ಟಿ ಮೃತಪಟ್ಟಿದ್ದರು ಎಂದು ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.