×
Ad

ಟರ್ಕಿ: ಆಸ್ಪತ್ರೆಯ ಕಟ್ಟಡಕ್ಕೆ ಅಪ್ಪಳಿಸಿದ ಆಂಬ್ಯುಲೆನ್ಸ್ ಹೆಲಿಕಾಪ್ಟರ್, 4 ಮಂದಿ ಸಾವು

Update: 2024-12-22 21:42 IST

PC : PTI

ಅಂಕಾರ: ನೈಋತ್ಯ ಟರ್ಕಿಯಲ್ಲಿ ರವಿವಾರ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಆಸ್ಪತ್ರೆಯ ಕಟ್ಟಡಕ್ಕೆ ಡಿಕ್ಕಿಯಾಗಿ ಪತನಗೊಂಡ ದುರಂತದಲ್ಲಿ 4 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಮುಗ್ಲಾ ತರಬೇತಿ ಮತ್ತು ಸಂಶೋಧನಾ ಆಸ್ಪತ್ರೆಯಿಂದ ಹೊರಟಿದ್ದ ಹೆಲಿಕಾಪ್ಟರ್ ನಲ್ಲಿ ಇಬ್ಬರು ಪೈಲಟ್‍ಗಳು, ಒಬ್ಬ ಡಾಕ್ಟರ್ ಹಾಗೂ ಒಬ್ಬ ವೈದ್ಯಕೀಯ ಕಾರ್ಯಕರ್ತ ಸೇರಿದಂತೆ 4 ಮಂದಿಯಿದ್ದರು. ಆಸ್ಪತ್ರೆಯ ಕಟ್ಟಡದ 4ನೇ ಅಂತಸ್ತಿಗೆ ಢಿಕ್ಕಿಯಾಗಿ ಹೆಲಿಕಾಪ್ಟರ್ ನೆಲಕ್ಕೆ ಬಿದ್ದಿದ್ದು ಹೆಲಿಕಾಪ್ಟರ್ ನಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ.

ಕಟ್ಟಡದ ಒಳಗಿದ್ದವರು ಅಥವಾ ಹೊರಗಿದ್ದವರು ಯಾರಿಗೂ ಗಾಯಗಳಾಗಿಲ್ಲ. ದುರಂತ ನಡೆದ ಸಂದರ್ಭ ದಟ್ಟ ಮಂಜು ಕವಿದಿತ್ತು. ದುರಂತದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಪ್ರಾದೇಶಿಕ ಗವರ್ನರ್ ರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News