Photo Credit : x 

ಟೆಹರಾನ್, ನ.22: 2025ರ ಜೂನ್ ನಲ್ಲಿ ನಡೆದ 12 ದಿನಗಳ ಯುದ್ಧ ಹಾಗೂ 2026ರ ಫೆಬ್ರವರಿ–ಎಪ್ರಿಲ್ ಅವಧಿಯ 40 ದಿನಗಳ ಯುದ್ಧದಲ್ಲಿ ಇರಾನ್ ನ ಒಟ್ಟು 428 ಮಕ್ಕಳು ಮತ್ತು ಹದಿಹರೆಯದವರು ಸಾವನ್ನಪ್ಪಿದ್ದಾರೆ ಎಂದು ಇರಾನ್ ನ ರೆಡ್ ಕ್ರೆಸೆಂಟ್ ಸೊಸೈಟಿ ತಿಳಿಸಿದೆ. ಎರಡನೇ ಯುದ್ಧದಲ್ಲಿ 2,115 ಮಕ್ಕಳು ಗಾಯಗೊಂಡಿದ್ದಾರೆ ಎಂದು ಸಂಸ್ಥೆಯ ಮುಖ್ಯಸ್ಥ ಪಿರ್ಹೊಸೈನ್ ಕೊಲಿವಾಂಡ್ ಹೇಳಿದ್ದಾರೆ.

2025ರ ಜೂನ್ ನಲ್ಲಿ ನಡೆದ 12 ದಿನಗಳ ಯುದ್ಧದಲ್ಲಿ ಕನಿಷ್ಠ 45 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಹಂಗಾವ್ ಮಾನವ ಹಕ್ಕುಗಳ ಸಂಘಟನೆಯ ಅಂಕಿಅಂಶಗಳನ್ನು ಉಲ್ಲೇಖಿಸಿ ಕೊಲಿವಾಂಡ್ ತಿಳಿಸಿದ್ದಾರೆ. 2026ರ ಫೆಬ್ರವರಿ 28ರಿಂದ ಆರಂಭವಾದ 40 ದಿನಗಳ ಯುದ್ಧದಲ್ಲಿ 383 ಮಕ್ಕಳು ಮೃತಪಟ್ಟಿದ್ದು, 2,115 ಮಕ್ಕಳು ಗಾಯಗೊಂಡಿದ್ದಾರೆ ಎಂದು ಇರಾನ್ ನ್ಯಾಯಾಂಗದ ಮಾನವ ಹಕ್ಕುಗಳ ವಿಭಾಗವು UNICEFಗೆ ಕಳುಹಿಸಿದ ಪತ್ರದಲ್ಲಿನ ಅಂಕಿಅಂಶಗಳನ್ನು ಉಲ್ಲೇಖಿಸಿ ಅವರು ಹೇಳಿದ್ದಾರೆ.

ಎರಡನೇ ಯುದ್ಧದಲ್ಲಿ ಮೃತಪಟ್ಟ ಮಕ್ಕಳಲ್ಲಿ ಏಳು ಮಂದಿ ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಸಶಸ್ತ್ರ ಸಂಘರ್ಷಗಳ ಸಂದರ್ಭದಲ್ಲಿ ಮಕ್ಕಳ ಹಕ್ಕುಗಳು ಮತ್ತು ಘನತೆಯನ್ನು ರಕ್ಷಿಸುವುದು ಕೇವಲ ನೈತಿಕ ಬಾಧ್ಯತೆಯಲ್ಲ; ಕಾನೂನುಬದ್ಧ ಕರ್ತವ್ಯವೂ ಆಗಿದೆ. ಇದು ಎಲ್ಲ ರಾಷ್ಟ್ರಗಳು ಹಾಗೂ ಸಂಘರ್ಷದಲ್ಲಿ ಭಾಗಿಯಾಗಿರುವ ಎಲ್ಲ ಪಕ್ಷಗಳ ಹಂಚಿಕೆಯ ಜವಾಬ್ದಾರಿಯಾಗಿದೆ ಎಂದು ಕೊಲಿವಾಂಡ್ ಒತ್ತಿಹೇಳಿದ್ದಾರೆ.

ಇರಾನ್ ನ ರೆಡ್ ಕ್ರೆಸೆಂಟ್ ಸೊಸೈಟಿಯು ಇರಾನ್ ಮೂಲದ ಮಾನವೀಯ ಸರಕಾರೇತರ ಸಂಸ್ಥೆಯಾಗಿದ್ದು (NGO), ಜಿನೀವಾ ಮೂಲದ ಅಂತರ್ರಾಷ್ಟ್ರೀಯ ರೆಡ್ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಸೊಸೈಟಿಗಳ ಒಕ್ಕೂಟದೊಂದಿಗೆ ಸಂಯೋಜಿತವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಕೃಷ್ಣ ಮೂರ್ತಿ , ವಾರ್ತಾಭಾರತಿ

contributor