Photo Credit : aljazeera.com

ಮನಾಮ, ನ.22: ಬಹರೈನ್ ವಿರುದ್ಧ ಇರಾನ್ ತನ್ನ ವ್ಯವಸ್ಥಿತ ಹಗೆತನದ ಧೋರಣೆಯನ್ನು ಮುಂದುವರಿಸುತ್ತಿದ್ದು, ನಾಗರಿಕ ಕೈಗಾರಿಕಾ ಸೌಲಭ್ಯವನ್ನು ಗುರಿಯಾಗಿಸಿ ನಡೆಸಿದ ದಾಳಿಯಿಂದ ಸ್ಥಳದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಬಹರೈನ್ ನ ಆಂತರಿಕ ಸಚಿವಾಲಯ ರವಿವಾರ ತಿಳಿಸಿದೆ.

ಗಾಯಗೊಂಡವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ. ತಮ್ಮ ವಾಯು ರಕ್ಷಣಾ ವ್ಯವಸ್ಥೆಗಳು ಒಳಬರುತ್ತಿದ್ದ ಹಲವಾರು ದಾಳಿಗಳನ್ನು ತಡೆಹಿಡಿದಿವೆ. ಬಿದ್ದ ಅವಶೇಷಗಳಿಂದ ಆಸ್ತಿಪಾಸ್ತಿಗೆ ಹಾನಿಯಾಗಿದೆ ಎಂದು ಸಚಿವಾಲಯ ತಿಳಿಸಿದೆ. ಇರಾನ್ ದಾಳಿಯನ್ನು ಸೌದಿ ಅರೇಬಿಯಾ ಮತ್ತು ಅರಬ್ ಲೀಗ್ ತೀವ್ರವಾಗಿ ಖಂಡಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಕೃಷ್ಣ ಮೂರ್ತಿ , ವಾರ್ತಾಭಾರತಿ

contributor