×
Ad

ಸುಡಾನ್‌ನಲ್ಲಿ ಮಿಲಿಟರಿ ವಿಮಾನ ಪತನ : 46 ಮಂದಿ ಮೃತ್ಯು

Update: 2025-02-26 16:12 IST

Screengrab:X/@RT_com

ಖಾರ್ಟೂಮ್ : ಸುಡಾನ್ ಮಿಲಿಟರಿ ವಿಮಾನ ಖಾರ್ಟೂಮ್‌ನ ಹೊರವಲಯದಲ್ಲಿರುವ ವಸತಿ ಪ್ರದೇಶದ ಬಳಿ ಪತನವಾಗಿ ಮಿಲಿಟರಿ ಸಿಬ್ಬಂದಿಗಳು ಸೇರಿ 46 ಜನರು ಮೃತಪಟ್ಟಿದ್ದು, 10 ಮಂದಿ ಗಾಯಗೊಂಡಿದ್ದಾರೆ ಎಂದು ಸುಡಾನ್ ಪ್ರಾದೇಶಿಕ ಸರಕಾರದ ಮಾಧ್ಯಮ ಕಚೇರಿ ಬುಧವಾರ ತಿಳಿಸಿದೆ.

ʼಆಂಟೊನೊವ್ʼ ವಿಮಾನ ಮಂಗಳವಾರ ವಾಡಿ ಸೈದ್ನಾ ವಾಯುನೆಲೆಯಿಂದ ಟೇಕ್ ಆಫ್ ಮಾಡಲು ಪ್ರಯತ್ನಿಸುತ್ತಿದ್ದಾಗ ಪತನಗೊಂಡಿದೆ. ಈ ವಾಯುನೆಲೆಯು ಒಮ್ದುರ್ಮನ್‌ನ ಉತ್ತರಕ್ಕೆ ಇದೆ ಎಂದು ಸುಡಾನ್‌ನ ಮಿಲಿಟರಿ ಮಾಹಿತಿ ನೀಡಿದೆ. ವಿಮಾನ ಪತನದ ವೇಳೆ ಹಲವು ಮನೆಗಳಿಗೂ ಹಾನಿಯಾಗಿದೆ.

ವಿಮಾನ ಟೇಕ್ಆಫ್ ಸಮಯದಲ್ಲಿ ಪತನಗೊಂಡಿತು ಮತ್ತು ಮಿಲಿಟರಿ ಸಿಬ್ಬಂದಿ ಮತ್ತು ನಾಗರಿಕರ ಪ್ರಾಣ ಹಾನಿಗೆ ಕಾರಣವಾಗಿದೆ ಎಂದು ಸುಡಾನ್ ಪ್ರಾದೇಶಿಕ ಸರಕಾರ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News