×
Ad

Philippines ಕರಾವಳಿಯಲ್ಲಿ 6.4 ತೀವ್ರತೆಯ ಭೂಕಂಪ

Update: 2026-01-07 10:51 IST

ಸಾಂದರ್ಭಿಕ ಚಿತ್ರ (PTI)

ಮನಿಲಾ: ದಕ್ಷಿಣ ಫಿಲಿಪೈನ್ಸ್ ಕರಾವಳಿಯಲ್ಲಿ ಬುಧವಾರ 6.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೇ(United States Geological Survey)ತಿಳಿಸಿದೆ.

6.7 ತೀವ್ರತೆಯ ಭೂಕಂಪ ಸಂಭವಿಸಿದ್ದು, ಮಿಂಡಾನಾವೊ ದ್ವೀಪದ ಸ್ಯಾಂಟಿಯಾಗೊ ಪಟ್ಟಣದ ಪೂರ್ವಕ್ಕೆ ಸುಮಾರು 27 ಕಿಲೋಮೀಟರ್ ದೂರದಲ್ಲಿ ಭೂಕಂಪನದ ಕೇಂದ್ರ ಬಿಂದು ಇದೆ ಎಂದು ತಿಳಿಸಿದೆ.

ಅಧಿಕಾರಿಗಳು ಯಾವುದೇ ಸುನಾಮಿ ಎಚ್ಚರಿಕೆಯನ್ನು ನೀಡಿಲ್ಲ. ಸಾವು ನೋವುಗಳ ಬಗ್ಗೆಯೂ ತಕ್ಷಣಕ್ಕೆ ಯಾವುದೇ ಮಾಹಿತಿಯನ್ನು ನೀಡಿಲ್ಲ.

ಅಕ್ಟೋಬರ್ ಆರಂಭದಲ್ಲಿ ಪೂರ್ವ ಮಿಂಡಾನಾವೊದಲ್ಲಿ 7.4 ಮತ್ತು 6.7 ತೀವ್ರತೆಯ ಎರಡು ಭೂಕಂಪಗಳು ಸಂಭವಿಸಿ ಕನಿಷ್ಠ 8 ಜನರು ಮೃತಪಟ್ಟಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News