×
Ad

ಫಿಲಿಪೀನ್ಸ್‌ನಲ್ಲಿ 7.6 ತೀವ್ರತೆಯ ಭೂಕಂಪ; ಸುನಾಮಿ ಎಚ್ಚರಿಕೆ

Update: 2023-12-02 21:42 IST

ಸಾಂದರ್ಭಿಕ ಚಿತ್ರ (PTI)

ಮನಿಲಾ: ಫಿಲಿಪೀನ್ಸ್‌ ನಲ್ಲಿ 7.6 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು,  ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದೆ.

ಭೂಕಂಪದ ಕೇಂದ್ರ ಬಿಂದು 63 ಕಿ.ಮೀ. ಆಳದಲ್ಲಿ ದಾಖಲಾಗಿದೆ ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರ (ಇಎಂಎಸ್‌ಸಿ) ಶನಿವಾರ ತಿಳಿಸಿದೆ.

ಭೂಕಂಪನದ ತೀವ್ರತೆ ಹಾಗೂ ಕೇಂದ್ರವನ್ನು ಆಧರಿಸಿ ಫಿಲಿಪೀನ್ಸ್‌, ಇಂಡೊನೇಶ್ಯ, ಪಲುವಾ ಹಾಗೂ ಮಲೇಶಿಯಾಗೆ ಸುನಾಮಿ ಅಲೆಗಳು ಅಪ್ಪಳಿಸುವ ಸಾಧ್ಯತೆ ಇದೆ ಎಂದು ಪೆಸಿಫಿಕ್ ಸುನಾಮಿ ವಾರ್ನಿಂಗ್ ಸೆಂಟರ್ ಎಚ್ಚರಿಸಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News