×
Ad

ಇರಾನ್-ಪಾಕ್ ಗಡಿಭಾಗದ ಬಳಿ 9 ವಿದೇಶೀಯರ ಹತ್ಯೆ

Update: 2024-01-27 23:05 IST

Photo: ndtv

ಟೆಹ್ರಾನ್: ಆಗ್ನೇಯ ಇರಾನ್‍ನಲ್ಲಿ ಪಾಕಿಸ್ತಾನದ ಗಡಿಯ ಸನಿಹ ಗುರುತಿಸಲಾಗದ ಬ್ಬಂದೂಕುಧಾರಿಗಳು 9 ವಿದೇಶಿ ಪ್ರಜೆಗಳನ್ನು ಹತ್ಯೆ ಮಾಡಿದ್ದಾರೆ ಎಂದು ಇರಾನ್‍ನ ಮಾಧ್ಯಮಗಳು ವರದಿ ಮಾಡಿವೆ.

ಉಭಯ ದೇಶಗಳ ನಡುವೆ ಮಾರಣಾಂತಿಕ ಗಡಿಯಾಚೆಗಿನ ದಾಳಿ ಪ್ರಕರಣದ ಒಂದು ವಾರದ ಬಳಿಕ ಈ ದುರಂತ ನಡೆದಿದೆ. `ಪ್ರತ್ಯಕ್ಷದರ್ಶಿಗಳ ಪ್ರಕಾರ, ಸಿಸ್ತಾನ್-ಬಲೂಚಿಸ್ತಾನ್ ಪ್ರಾಂತದ ನೆರೆಯ ಸಿರ್ಖಾನ್ ನಗರದ ಮನೆಯೊಂದಕ್ಕೆ ನುಗ್ಗಿದ ಅಪರಿಚಿತ ಸಶಸ್ತ್ರ ವ್ಯಕ್ತಿಗಳು ಮನೆಯಲ್ಲಿದ್ದ 9 ವಿದೇಶೀಯರನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಇದುವರೆಗೆ ಯಾವುದೇ ಸಂಘಟನೆ ಹತ್ಯೆಯ ಹೊಣೆ ವಹಿಸಿಕೊಂಡಿಲ್ಲ' ಎಂದು ಮೆಹರ್ ಸುದ್ಧಿಸಂಸ್ಥೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News