×
Ad

ವೇದಿಕೆಯಲ್ಲಿ ಹಾಡುತ್ತಿದ್ದಾಗಲೇ ಖ್ಯಾತ ಗಾಯಕನ ಗುಂಡಿಕ್ಕಿ ಹತ್ಯೆ

Update: 2023-08-19 00:14 IST

Sergiho Murilo Goncalves Filho | Photo : NDTV

ಬ್ರಸೀಲಿಯಾ : ವೇದಿಕೆಯಲ್ಲಿ ಹಾಡುತ್ತಿದ್ದಾಗಲೇ ಬ್ರೆಝಿಲ್ ನ ಖ್ಯಾತ ಗಾಯಕ ಸೆರ್ಗಿಹೊ ಗೊನ್ಸಾಲ್ವಿಸ್ ಫಿಲೊನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು `ದಿ ಇಂಡಿಪೆಂಡೆಂಟ್' ವರದಿ ಮಾಡಿದೆ.

ಎಂಸಿ ಸೆರ್ಗಿನೊ ಎಂದೇ ಪ್ರಸಿದ್ಧಿ ಪಡೆದಿರುವ 29 ವರ್ಷದ ಗಾಯಕನ ಸಂಗೀತ ರಸಮಂಜರಿ ಕಾರ್ಯಕ್ರಮ ರೆಸೀಫ್ ನಗರದಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭ ಸಭೆಯಲ್ಲಿದ್ದ ಪೊಲೀಸ್ ಕಾನ್ಸ್ಟೆಬಲ್ ರೋಡ್ರಿಗೊ ಫೋರ್ಟುನಾಟೊ ಹಾಗೂ ಮ್ಯಾನುವೆಲಾ ಟೆನೋರಿಯೊ ಎಂಬ ಮಹಿಳೆಯ ನಡುವೆ ಜಗಳ ಆರಂಭವಾಗಿದ್ದು ಜಗಳ ಬಿಡಿಸಲು ಗಾಯಕ ಗೊನ್ಸಾಲ್ವಿಸ್ ಮಧ್ಯಪ್ರವೇಶಿಸಿದಾಗ ಫೋರ್ಟುನಾಟೊ ತನ್ನಲ್ಲಿದ್ದ ರಿವಾಲ್ವರ್ ಹೊರತೆಗೆದು ಗುಂಡು ಹಾರಿಸಿದ್ದಾನೆ. ಆಗ ಮಹಿಳೆ ಸ್ಥಳದಲ್ಲೇ ಮೃತಪಟ್ಟರೆ ತೀವ್ರ ಗಾಯಗೊಂಡ ಗೋನ್ಸಾಲ್ವಿಸ್ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News